ವರದಿ : ದಿನೇಶ್ ರಾಯಪ್ಪನಮಠ
ಹರೀಶ್ ಬಂಗೇರ ಅವರ ಕೇಸಿಗೆ ಸಂಬಂಧಿಸಿದಂತೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ವಿದೇಶಾಂಗ ರಾಜ್ಯ ಸಚಿವರ ವಿ. ಮುರಳೀಧರನ್ ಅವರೊಂದಿಗೆ ಚರ್ಚಿಸಿದ್ದಾರೆ.
ಹರೀಶ್ ಬಂಗೇರ ಅವರ ಹೆಸರಲ್ಲಿ ಫೇಕ್ ಫೇಸ್ ಬುಕ್ ಐಡಿ ನಿರ್ಮಿಸಿದ ಮೂಡಬಿದಿರೆಯ ಇಬ್ಬರು ಅಣ್ಣ-ತಮ್ಮಂದಿರನ್ನು ಬಂಧಿಸುವಲ್ಲಿ ಉಡುಪಿಯ ಸೇನ್ ಪೊಲೀಸ್ ಅಧಿಕಾರಿಗಳು ಉತ್ತಮ ಕೆಲಸವನ್ನು ನಿರ್ವಹಿಸಿದ್ದು, ನಂತರ ಈ ಕೇಸಿಗೆ ಸಂಬಂಧಿಸಿ ಕರ್ನಾಟಕ ಸರಕಾರದ ಮೂಲಕ ಕೇಂದ್ರ ಗೃಹ ಕಾರ್ಯದರ್ಶಿಗಳಿಗೆ ಪತ್ರ ಬರೆಸಿ, ತನಿಖೆಯನ್ನು ವೇಗಗೊಳಿಸುವಂತೆ ಸಂಸದೆ ಶೋಭಾ ಕರಂದ್ಲಾಜೆ, ಅಂದಿನ ಕರ್ನಾಟಕ ಇಂಟಲಿಜೆನ್ಸ್ ವಿಭಾಗದ ಮುಖ್ಯಸ್ಥರಾಗಿದ್ದ ಕಮಲ್ ಪಂತ್ ಅವರಿಗೆ ಸೂಚಿಸಿದ್ದರು.
Advertisement. Scroll to continue reading.
ಈ ಸಂಬಂಧವಾಗಿ ರಾಜ್ಯ ಸರ್ಕಾರಾದ ಕೋರಿಕೆಯ ಮೇರೆಗೆ ತನಿಖೆ ನಡೆಸಿದ ಕೇಂದ್ರದ ಸಂಸ್ಥೆಗಳು ಹರೀಶ್ ಅವರು ನಿರಪರಾಧಿ ಎಂದು ಭಾರತದ ಇಂಟರ್ಪೋಲ್ ಸಂಸ್ಥೆಯ ಮೂಲಕ ಸೌದಿ ಅರೇಬಿಯಾದ, ರಿಯಾಧ್ ಇಂಟರ್ಪೋಲ್ ಗೆ ಮಾಹಿತಿ ನೀಡಿದ್ದಾರೆ.
ಈ ಮಾಹಿತಿಯು ತಲುಪಿದ ತಕ್ಷಣಾದಲ್ಲೇ ಕಾರ್ಯಪ್ರವೃತ್ತಿಸಿದ ಭಾರತೀಯ ವಿದೇಶಾಂಗ ಇಲಾಖೆಯು ಹರೀಶ್ ಅವರ ಬಿಡುಗಡೆಗೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಮಾಡಿದೆ.
ಹರೀಶ್ ಬಂಗೇರ ಅವರನ್ನು ದಮ್ಮಾಮ್ ಇಂಟಲಿಜೆನ್ಸ್ ಜೈಲಿನಿಂದ ಸೆಂಟ್ರಲ್ ಜೈಲಿಗೆ ಸ್ಥಳಾಂತರಿಸಿದ್ದು, ಅವರನ್ನು ತಕ್ಷಣದಲ್ಲೇ ಬಿಡುಗಡೆ ಮಾಡಲು ಬೇಕಾದ ಎಮರ್ಜೆನ್ಸಿ ಸರ್ಟಿಫಿಕೇಟ್ ಅನ್ನು ಕೂಡ ಕೇಂದ್ರ ವಿದೇಶಾಂಗ ಇಲಾಖೆ ನೀಡಿದೆ.
ಅತೀ ಶೀಘ್ರದಲ್ಲಿ ಹರೀಶ್ ಬಂಗೇರ ಅವರನ್ನು ಬಿಡುಗಡೆ ಮಾಡಿಸಿ ತಾಯ್ನಾಡಿಗೆ ಕರೆತರುವಲ್ಲಿ ಎಲ್ಲಾ ಪ್ರಯತ್ನಗಳನ್ನು ಮುಂದುವರೆಸುವುದಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರು ತಿಳಿಸಿದ್ದಾರೆ.
Advertisement. Scroll to continue reading.