Connect with us

Hi, what are you looking for?

Diksoochi News

Uncategorized

ಮದುವೆಯಾಗದ ಕಾರಣಕ್ಕೆ ನಿರ್ದೇಶಕನನ್ನು ಬರ್ಬರ ಹತ್ಯೆ ಮಾಡಿದ ಪೋಷಕರು

0

ನಿರ್ದೇಶಕನನ್ನು ತುಂಡು ತುಂಡಾಗಿ ಕತ್ತರಿಸಿ ಬರ್ಬರವಾಗಿ ಪೋಷಕರೇ ಹತ್ಯೆ ಮಾಡಿರುವ ಘಟನೆ ಪಶ್ಚಿಮ ಟೆಹ್ರಾನ್ ನ ಎಕ್ಬಟಾನ್ ಪಟ್ಟಣದಲ್ಲಿ ಈ ಘಟನೆ ನಡೆದಿದೆ.
ಲಂಡನ್ ಮೂಲದ ಇರಾನಿನ ನಿರ್ದೇಶಕ ಬಾಬಕ್ ಖೊರಮದ್ದೀನ್ ಕೊಲೆಗೀಡಾದ ನಿರ್ದೇಶಕ.
ಅವಿವಾಹಿತರಾಗಿದ್ದ ಬಾಬಕ್ ಅವರನ್ನು ಮದುವೆಯಾಗುವಂತೆ ಪೋಷಕರು ಒತ್ತಾಯಿಸಿದ್ದಾರೆ. ಆದರೆ ಬಾಬಕ್ ಮದುವೆಗೆ ಒಪ್ಪಿರಲಿಲ್ಲ ಎನ್ನಲಾಗಿದೆ. ಹಾಗಾಗಿ ಪೋಷಕರು ಹತ್ಯೆಗೈದಿದ್ದು, ಕೊಲೆ ಮಾಡಿದ ದೇಹದ ಭಾಗಗಳನ್ನು ಕಸದ ಚೀಲ ಮತ್ತು ಸೂಟ್ ಕೇಸ್ ನಲ್ಲಿ ತುಂಬಿ ಎಸೆದಿದ್ದಾರೆ ಎನ್ನಲಾಗಿದೆ. ಸಮಾಜದಲ್ಲಿ ತಮ್ಮ ಮರ್ಯಾದೆ, ಗೌರವ ಉಳಿಸಿಕೊಳ್ಳಲು ಕೊಲೆ ಮಾಡಿರುವುದಾಗಿಯೂ, ಕೊಲೆ ಮಾಡುವ ಮೊದಲು ಮಾದಕ ವಸ್ತು ನೀಡಿ ಬಳಿಕ ಕೊಲೆ ಮಾಡಿ ತುಂಡು ತುಂಡಾಗಿ ಕತ್ತರಿಸಿರುವುದಾಗಿಯೂ ಪೋಷಕರು ಹೇಳಿದ್ದಾರೆ ಎಂದು ವರದಿಯಾಗಿದೆ. ಇರಾನಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
2009ರಲ್ಲಿ ಟೆಹ್ರಾನ್ ವಿಶ್ವವಿದ್ಯಾಲಯದಲ್ಲಿ ಸಿನಿಮಾದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, 2010ರಲ್ಲಿ ಲಂಡನ್ ಗೆ ಮರಳಿ ಬಾಬಕ್ ವಿದ್ಯಾರ್ಥಿಗಳಿಗೆ ಟೀಚ್ ಮಾಡುವ ಉದ್ದೇಶದಿಂದ ಇರಾನ್ ಗೆ ಮರಳಿದ್ದು, ಕಿರುಚಿತ್ರ ಹಾಗೂ ಕೆಲವು ಸಿನಿಮಾಗಳನ್ನು ನಿರ್ದೇಶಿಸಿದ್ದರು.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!