Connect with us

Hi, what are you looking for?

Diksoochi News

ಅರೆ ಹೌದಾ!

ಸಲೂನ್‌ನಲ್ಲಿ ಹೇರ್ ಸ್ಟ್ರೈಟ್ನಿಂಗ್ ಮಾಡಲು ಹೋಗಿ ಕಿಡ್ನಿ ಕಳೆದುಕೊಂಡ ಮಹಿಳೆ..!

0

ವಾಷಿಂಗ್ಟನ್: ಸಲೂನ್ ಒಂದರಲ್ಲಿ ಹೇರ್ ಸ್ಟ್ರೇಟನಿಂಗ್ (ಕೂದಲು ನೇರಪಡಿಸುವಿಕೆ) ಮಾಡಿಸಿಕೊಳ್ಳಲು ತೆರಳಿದ್ದ ಮಹಿಳೆಯೊಬ್ಬರ ಕಿಡ್ನಿಗಳಿಗೆ ಹಾನಿಯಾದ ಘಟನೆ ನಡೆದಿದೆ. ಮಹಿಳೆಗೆ ಉಂಟಾದ ಸಮಸ್ಯೆಗಳ ಬಗ್ಗೆ ದಿ ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ ಪತ್ರಿಕೆಯಲ್ಲಿ ವರದಿ ಪ್ರಕಟಿಸಲಾಗಿದೆ. ಇದರಲ್ಲಿ ಮಹಿಳೆಯ ಹೆಸರು ಮತ್ತು ಹೆಸರು ಸೇರಿದಂತೆ ಯಾವುದೇ ವೈಯಕ್ತಿಕ ವಿವರ ಬಹಿರಂಗಪಡಿಸಿಲ್ಲ

ಕೂದಲು ನೇರಗೊಳಿಸಲು ಬಳಸಿದ ಉತ್ಪನ್ನವೊಂದು ಅವರ ಅಂಗದ ಹಾನಿಗೆ ಕಾರಣವಾಗಿರಬಹುದು ಎಂದು ಮಹಿಳೆಗೆ ಚಿಕಿತ್ಸೆ ನೀಡಿದ ವೈದ್ಯರೊಬ್ಬರು ತಿಳಿಸಿದ್ದಾರೆ. 26 ವರ್ಷದ ಈ ಮಹಿಳೆ, ಜೂನ್ 2020, ಏಪ್ರಿಲ್ 2021 ಮತ್ತು ಜುಲೈ 2022ರಂದು ಕೂದಲಿನ ಚಿಕಿತ್ಸೆಗಾಗಿ ಸಲೂನ್‌ಗೆ ಹೋಗಿದ್ದರು.

ಮಹಿಳೆಯಲ್ಲಿ ಈ ಹಿಂದೆ ಯಾವುದೇ ಆರೋಗ್ಯ ಸಮಸ್ಯೆಗಳು ಇರಲಿಲ್ಲ. ಆದರೆ ಪ್ರತಿ ಭೇಟಿಯ ಬಳಿಕವೂ ಆಕೆಯಲ್ಲಿ ವಾಂತಿ, ಅತಿಸಾರ, ಜ್ವರ ಹಾಗೂ ಬೆನ್ನು ನೋವು ಉಂಟಾಗಿತ್ತು. ಅಲ್ಲದೆ, ಕೂದಲಿನ ಚಿಕಿತ್ಸೆ ವೇಳೆ ಆಕೆಯ ನೆತ್ತಿ ಭಾಗದಲ್ಲಿ ತೀವ್ರ ಉರಿಯುವ ಅನುಭವ ಉಂಟಾಗಿತ್ತು. ಕೊನೆಗೆ ಅದು ತಲೆಯಲ್ಲಿ ಹುಣ್ಣು ಸೃಷ್ಟಿಸಿತ್ತು ಎಂದು ಅಧ್ಯಯನ ತಿಳಿಸಿದೆ.

Advertisement. Scroll to continue reading.

ಮಹಿಳೆಯ ರಕ್ತದಲ್ಲಿ ಕ್ರಿಯೇಟಿನ್ ಮಟ್ಟ ಹೆಚ್ಚಾಗಿರುವುದನ್ನು ಕಂಡ ಬಳಿಕ ವೈದ್ಯರು ತಪಾಸಣೆ ನಡೆಸಿದಾಗ ಅವರ ಮೂತ್ರಪಿಂಡ ಸರಿಯಾಗಿ ಕಾರ್ಯ ನಿರ್ವಹಿಸದೆ ಇರುವುದನ್ನು ಗಮನಿಸಿದ್ದರು. ಅವರ ಮೂತ್ರದಲ್ಲಿ ರಕ್ತದ ಅಂಶವಿತ್ತು. ಸಿಟಿ ಸ್ಕ್ಯಾನ್ ಮಾಡಿಸುವಂತೆ ವೈದ್ಯರು ಮಹಿಳೆಗೆ ಸೂಚಿಸಿದ್ದರು. ಆದರೆ ಸೋಂಕಿನ ಯಾವುದೇ ಲಕ್ಷಣಗಳು ಕಾಣಿಸಿರಲಿಲ್ಲ. ಅವರ ಕಿಡ್ನಿಗಳು ಸಹ ಬ್ಲಾಕ್ ಆಗಿರಲಿಲ್ಲ.

ತಮ್ಮ ತಲೆಗೂದಲನ್ನು ನೇರ ಮಾಡಲು ಗ್ಲಿಯೋಕ್ಸಿಲಿಕ್ ಆಸಿಡ್ ಇರುವ ರಾಸಾಯನಿಕವನ್ನು ಬಳಸಲಾಗಿತ್ತು ಎಂಬುದನ್ನು ಆಕೆ ವೈದ್ಯರಿಗೆ ತಿಳಿಸಿದ್ದರು. ಅವರ ನೆತ್ತಿಯಲ್ಲಿ ಉರಿಯೂತ ಹಾಗೂ ಹುಣ್ಣು ಆಗಲು ಇದೇ ಕಾರಣ ಎಂದು ವೈದ್ಯರು ತೀರ್ಮಾನಕ್ಕೆ ಬಂದರು.

ಗುಂಗುರು ಅಥವಾ ಸುಕ್ಕುಗಟ್ಟಿದ ಕೂದಲುಗಳನ್ನು ನೇರ, ನುಣುಪು ಹಾಗೂ ಸಡಿಲಗೊಳಿಸಲು ಹೇರ್ ಸ್ಟ್ರೇಟನಿಂಗ್ ಮಾಡಲಾಗುತ್ತದೆ. ಈ ತಂತ್ರಜ್ಞಾನವು 1890ರ ಸಂದರ್ಭದಿಂದಲೂ ಬಳಕೆಯಲ್ಲಿದೆ. ಇದರಲ್ಲಿ ಬಳಸುವ ಕೆಲವು ರಾಸಾಯನಿಕಗಳನ್ನು ನಿಷೇಧಿಸಲು ಅಮೆರಿಕದ ಎಫ್‌ಡಿಎ ಕಳೆದ ವರ್ಷ ಪ್ರಸ್ತಾಪಿಸಿತ್ತು. ಇವುಗಳಲ್ಲಿ ಭಾರಿ ಪ್ರಮಾಣದ ವಿಷಕಾರಿ ಅಂಶವಿದ್ದು, ಕ್ಯಾನ್ಸರ್‌ಗೆ ಎಡೆಮಾಡಿಕೊಡಬಹುದು ಎಂದು ಅದು ಹೇಳಿದೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!