ಪ್ರತೀ ಯುವತಿಗೂತನ್ನ ಮದುವೆ ಹಾಗೂ ಮದುವೆಯಾಗುವ ಹುಡುಗನ ಬಗ್ಗೆ ಹಲವು ಕನಸುಗಳಿರುತ್ತವೆ. ಹುಡುಗ ಸುಂದರವಾಗಿರಬೇಕು, ಒಳ್ಳೆ ಹೈಟು, ಪರ್ಸನಾಲಿಟಿ ಇರಬೇಕು ಎಂದು ಯೋಚಿಸುವುದು ಸಾಮಾನ್ಯ. ಆದರೆ ಆಫ್ರಿಕಾದ ಬುಡಕಟ್ಟು ಜನಾಂಗದ ಯುವತಿಯರು ದೊಡ್ಡ ಹೊಟ್ಟೆ ಹೊಂದಿರುವ ಹುಡುಗರನ್ನೇ ಮದುವೆಯಾಗಲು ಮುಗಿಬೀಳುತ್ತಾರೆ.
ಹೌದು, ಹೊಟ್ಟೆ ದೊಡ್ಡದಿದ್ದಷ್ಟು ಯುವಕರ ಸೌಂದರ್ಯ ಹೆಚ್ಚುತ್ತದೆ ಎಂಬದು ಇಲ್ಲಿನ ಜನರ ನಂಬಿಕೆ. ಇದಲ್ಲದೇ ವರ್ಷಕೊಮ್ಮೆ ಇಲ್ಲಿ ದೊಡ್ಡ ಹೊಟ್ಟೆಯ ಯುವಕನನ್ನು ವರಿಸಲು ಯುವತಿಯರಿಗಾಗಿ ಸ್ವಯಂವರ ನಡೆಯುತ್ತದೆ.
ದಕ್ಷಿಣ ಇಥಿಯೋಪಿಯಾದ ಓಮೋ ಕಣಿವೆಯಲ್ಲಿ ವಾಸಿಸುವ ಬೋಡಿ ಬುಡಕಟ್ಟು ಜನಾಂಗದಲ್ಲಿ ಈ ರೀತಿಯಲ್ಲಿ ಮದುವೆ ನಡೆಯುತ್ತದೆ. ಪ್ರತಿ ವರ್ಷ ಈ ಬುಡಕಟ್ಟಿನಲ್ಲಿ ಅತ್ಯಂತ ದಪ್ಪ ಹೊಟ್ಟೆ ಹೊಂದಿರುವ ವ್ಯಕ್ತಿ ಎಂಬ ಸ್ಪರ್ಧೆ ನಡೆಯುತ್ತದೆ. ಇದರಲ್ಲಿ ಗೆಲ್ಲುವವರನ್ನು ಹಳ್ಳಿಯ ಅತ್ಯಂತ ಸುಂದರ ವ್ಯಕ್ತಿ ಎಂದು ಪರಿಗಣಿಸಲಾಗುತ್ತದೆ.
ಬೋಡಿ ಬುಡಕಟ್ಟಿನ ಮಹಿಳೆಯರು ದಪ್ಪಗಿರುವ ಪುರುಷರಿಂದ ಆಕರ್ಷಿತರಾಗುತ್ತಾರೆ. ಈ ಪುರುಷರನ್ನು ಮದುವೆಯಾಗಲು ಯುವತಿಯರು ಮುಗಿಬೀಳುತ್ತಾರೆ. ಈ ಸ್ಪರ್ಧೆಯನ್ನು ಗೆಲ್ಲಲು, ಬುಡಕಟ್ಟಿನ ಪುರುಷರು 6 ತಿಂಗಳ ಮುಂಚಿತವಾಗಿ ತಯಾರಿ ಪ್ರಾರಂಭಿಸುತ್ತಾರೆ. ಬೊಜ್ಜು ಹೆಚ್ಚಿಸಲು ಅವರು ಎಲ್ಲ ಪ್ರಯತ್ನಗಳನ್ನು ಮಾಡುತ್ತಾರೆ. 6 ತಿಂಗಳುಗಳ ವರೆಗೆ ಇದರಲ್ಲಿ ಹಸುವಿನ ರಕ್ತ ಮತ್ತು ಹಾಲು ಕುಡಿಯುವುದು ಅತ್ಯುತ್ತಮವೆಂದು ಈ ಜನಾಂಗದಲ್ಲಿ ಪರಿಗಣಿಸಲಾಗಿದೆ.