Connect with us

Hi, what are you looking for?

Diksoochi News

ಕ್ರೀಡೆ

ಎಚ್ಚರ ತಪ್ಪಿದರೆ 5 ರನ್ ಪೆನಾಲ್ಟಿ!: ಟಿ20 ವಿಶ್ವಕಪ್‌ನ ಈ ನಿಯಮದ ಬಗ್ಗೆ ನಿಮಗೆಷ್ಟು ಗೊತ್ತು?

0

2024ರ ಟಿ20 ವಿಶ್ವಕಪ್ ಮೆಗಾ ಈವೆಂಟ್ ಜೂನ್ 2ರಿಂದ ಪ್ರಾರಂಭವಾಗಲಿದೆ. 2007ರಿಂದ ಆರಂಭವಾದ ಈ ಮಿನಿ ವಿಶ್ವಸಮರ ಈಗಾಗಲೇ 8 ಆವೃತ್ತಿಗಳನ್ನು ಮುಗಿಸಿದ್ದು, 9ನೇ ಸೀಸನ್‌ ‌ಗೆ ಕಾಲಿಟ್ಟಿದೆ. ಕಳೆದಿರುವ 8 ಆವೃತ್ತಿಗಳಲ್ಲೂ ಐಸಿಸಿ ಹಲವು ನೂತನ ನಿಯಮಗಳನ್ನು ಈ ಮಾದರಿಯಲ್ಲಿ ಅಳವಡಿಸಿಕೊಂಡಿದೆ. ಅದರಂತೆ ಈ ಬಾರಿಯೂ ನೂತನ ನಿಯಮವೊಂದು ಅಳವಡಿಸಿಕೊಂಡಿದೆ. ಆ ನಿಯಮವೇ ಸ್ಟಾಪ್ ಕ್ಲಾಕ್ ನಿಯಮ.

ಟಿ20 ವಿಶ್ವಕಪ್‌ನಲ್ಲಿ ನಿಗದಿತ ಸಮಯದಲ್ಲಿ ತಮ್ಮ ಓವರ್‌ಗಳನ್ನು ಪೂರ್ಣಗೊಳಿಸದ ತಂಡಗಳಿಗೆ ಈ ನಿಯಮ ದುಬಾರಿಯಾಗುವುದಂತೂ ಖಚಿತ. ಪ್ರಯೋಗವಾಗಿ ಈ ನಿಯಮವು ಯಶಸ್ವಿಯಾದ ನಂತರ ಐಸಿಸಿ, ಈ ವಿಶ್ವಕಪ್‌ನಿಂದ ವೈಟ್ ಬಾಲ್ ಮಾದರಿಯಲ್ಲಿ ಸ್ಟಾಪ್ ಕ್ಲಾಕ್ ನಿಯಮವನ್ನು ಬಳಸಲು ಮುಂದಾಗಿದೆ.

ಏನಿದು ಸ್ಟಾಪ್ ಕ್ಲಾಕ್ ನಿಯಮ?

ಈ ನಿಯಮದ ಪ್ರಕಾರ ಎರಡು ಓವರ್‌ಗಳ ನಡುವೆ ತಂಡಕ್ಕೆ ಮುಂದಿನ ಓವರ್ ಆರಂಭಿಸಲು 60 ಸೆಕೆಂಡ್‌ ಸಮಯಾವಕಾಶವನ್ನು ನೀಡಲಾಗುತ್ತದೆ. ಈ ಸಮಯದ ಮಧ್ಯಂತರದಲ್ಲಿ ಬೌಲಿಂಗ್ ತಂಡವು ಮುಂದಿನ ಓವರ್ ಅನ್ನು ಪ್ರಾರಂಭಿಸಬೇಕಾಗುತ್ತದೆ. ಒಂದು ಓವರ್ ಮುಗಿದ ತಕ್ಷಣ, ಮೂರನೇ ಅಂಪೈರ್ ಈ ನಿಯಮವನ್ನು ಅನುಷ್ಠಾನಕ್ಕೆ ತರುತ್ತಾರೆ. ಈ ಸಮಯದ ಮಿತಿಯೊಳಗೆ ಓವರ್ ಪ್ರಾರಂಭವಾಗದಿದ್ದರೆ, ಮೈದಾನದಲ್ಲಿರುವ ಅಂಪೈರ್, ಬೌಲಿಂಗ್ ತಂಡಕ್ಕೆ ಎರಡು ಎಚ್ಚರಿಕೆಗಳನ್ನು ನೀಡುತ್ತಾರೆ. ಮೂರನೇ ಎಚ್ಚರಿಕೆಯಲ್ಲಿ ಐದು ರನ್‌ಗಳ ದಂಡ ವಿಧಿಸಲಾಗುತ್ತದೆ. ಈ ರನ್‌ಗಳು ಬ್ಯಾಟಿಂಗ್ ತಂಡದ ಖಾತೆಗೆ ಸೇರ್ಪಡೆಯಾಗಲಿವೆ.

Advertisement. Scroll to continue reading.

ಡಿ. 23 ರಂದು ಪ್ರಯೋಗವಾಗಿ ಜಾರಿ

ಐಸಿಸಿ ಡಿಸೆಂಬರ್ 2023 ರಿಂದ ವೈಟ್ ಬಾಲ್ ಮಾದರಿಯಲ್ಲಿ ಈ ನಿಯಮವನ್ನು ಜಾರಿಗೆ ತಂದಿದೆ. ಈ ನಿಯಮವು ಪಂದ್ಯದ ಸಮಯದಲ್ಲಿ 20 ನಿಮಿಷಗಳ ಸಮಯವನ್ನು ಉಳಿಸುತ್ತದೆ. ಈ ಯಶಸ್ಸಿನಿಂದ ಉತ್ತೇಜಿತವಾದ ಐಸಿಸಿ, ಈ ನಿಯಮವನ್ನು ಟಿ20 ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಜಾರಿಗೆ ತರುತ್ತಿದೆ.

ಅನ್ವಯವಾಗದ ಸಂದರ್ಭ

ವಾಸ್ತವವಾಗಿ ಪಂದ್ಯದ ವೇಳೆ ಕೆಲವು ಸಂದರ್ಭಗಳಲ್ಲಿ ಈ ನಿಯಮ ಬಳಸಲಾಗುವುದಿಲ್ಲ. ಆದಾಗ್ಯೂ, ಈ ನಿಯಮವನ್ನು ಬಳಸುವುದು ಹಾಗೂ ಬಳಸದಿರುವುದು ಸಂಪೂರ್ಣವಾಗಿ ಮೂರನೇ ಅಂಪೈರ್ ಮೇಲೆ ಅವಲಂಬಿತವಾಗಿರುತ್ತದೆ. ಹೊಸ ಬ್ಯಾಟ್ಸ್‌ಮನ್ ಕ್ರಿಸ್​ಗೆ ಬರುವ ಸಂದರ್ಭದಲ್ಲಿ ಈ ನಿಯಮ ಅನ್ವಯವಾಗುವುದಿಲ್ಲ. ಅಲ್ಲದೆ ಅಧಿಕೃತ ಪಾನೀಯಗಳ ವಿರಾಮದ ಸಮಯದಲ್ಲೂ ಈ ನಿಯಮದಿಂದ ರಿಯಾಯಿತಿ ಇರುತ್ತದೆ. ಬ್ಯಾಟ್ಸ್‌ಮನ್ ಅಥವಾ ಫೀಲ್ಡರ್‌ಗೆ ಗಾಯವಾದಾಗ ಅಥವಾ ಫೀಲ್ಡಿಂಗ್ ತಂಡದಿಂದ ಸಮಯ ವ್ಯರ್ಥವಾಗದ ಸಂದರ್ಭದಲ್ಲೂ ಈ ನಿಯಮವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

You May Also Like

ಕರಾವಳಿ

0 ಉಡುಪಿ: ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ವಿದ್ಯಾಲಯದ ಪ್ರಾರಂಭೋತ್ಸವ ಕಾರ್ಯಕ್ರಮ ಪಿಯು ಕಾಲೇಜು ಸಭಾಂಗಣದಲ್ಲಿ ನಡೆಯಿತು. ಪ್ರಾರಂಭೋತ್ಸವವನ್ನು ಭಾರತ ಮಾತೆ, ಸರಸ್ವತಿ, ಓಂಕಾರ ಭಾವಚಿತ್ರಕ್ಕೆ ದೀಪಬೇಳಗಿಸಿ, ಪುಷ್ಪಾರ್ಚನೆ ಮಾಡುವ ಮೂಲಕ...

ರಾಷ್ಟ್ರೀಯ

0 ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ಭಾನುವಾರ ಸಂಜೆ 7.15ರಿಂದ  ಮೋದಿ ಅವರ ಜತೆ 71 ಸಚಿವರು ಪ್ರತಿಜ್ಞಾವಿಧಿ ಸ್ವೀಕರಿಸಿದರು....

ರಾಜ್ಯ

0 ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನವಾಗಿದೆ. ಇಂದು ಬೆಳಗಿನ ಜಾವ ಮೈಸೂರಿನ ಫಾರ್ಮ್‌ ಹೌಸ್‌ನಲ್ಲಿದ್ದ ದರ್ಶನ್ ಬಂಧನವಾಗಿದೆ. ದರ್ಶನ್ ಜೊತೆಯಲ್ಲಿ ಇಬ್ಬರು ಬಾಡಿಗಾರ್ಡ್‌ಗಳನ್ನು ಸಹ ಪೊಲೀಸರು ಬಂಧಿಸಿದ್ದಾರೆ....

ರಾಷ್ಟ್ರೀಯ

0 ನವದೆಹಲಿ :  ಭಾನುವಾರ ನರೇಂದ್ರ ಮೋದಿ 3ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಮೋದಿ ಜೊತೆಗೆ 71 ಸಂಸದರು ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಇದೀಗ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ....

ಸಿನಿಮಾ

0 ಚಾಲೆಂಜಿಂಗ್ ಸ್ಟಾರ್ ಖ್ಯಾತಿಯ ನಟ ದರ್ಶನ್‌ ಅವರನ್ನು ಪೊಲೀಸರು ಬೆಳ್ಳಂಬೆಳಗ್ಗೆ ಬಂಧನ ಮಾಡಿದ್ದಾರೆ. ಮೈಸೂರಿನ ನಿವಾಸದಲ್ಲಿ ನಟ ದರ್ಶನ್‌ ಬಂಧನಕ್ಕೊಳಗಾಗಿದ್ದು, ಈ ಪ್ರಕರಣ ಇದೀಗ ಇಡೀ ಸ್ಯಾಂಡಲ್‌ವುಡ್‌ ಬೆಚ್ಚಿ ಬೀಳುವಂತೆ ಮಾಡಿದೆ....

error: Content is protected !!