Connect with us

Hi, what are you looking for?

Diksoochi News

ಅಂತಾರಾಷ್ಟ್ರೀಯ

ಅಮೆರಿಕದಲ್ಲಿ ಸ್ಪೆಲ್ಲಿಂಗ್‌ ಬೀ ಸ್ಪರ್ಧೆ: ಭಾರತೀಯ ಮೂಲದ ಬಾಲಕ ವಿಜೇತ!

0

ವಾಷಿಂಗ್ಟನ್‌: ಅಮೆರಿಕದಲ್ಲಿ ನಡೆದ ರಾಷ್ಟ್ರೀಯ ಸ್ಪೆಲ್ಲಿಂಗ್ ಬೀ ಸ್ಪರ್ಧೆಯಲ್ಲಿ 12 ವಯಸ್ಸಿನ ಭಾರತೀಯ-ಅಮೆರಿಕನ್ ಬಾಲಕ ವಿಜೇತನಾಗಿದ್ದಾರೆ.

ಫ್ಲೋರಿಡಾದಲ್ಲಿರುವ 7ನೇ ತರಗತಿಯ ವಿದ್ಯಾರ್ಥಿ ಬೃಹತ್ ಸೋಮ, ಟೈಬ್ರೇಕರ್‌ನಲ್ಲಿ 29 ಪದಗಳನ್ನು ಸರಿಯಾಗಿ ಉಚ್ಛರಿಸಿದ ನಂತರ ಸ್ಕ್ರಿಪ್ಸ್ ನ್ಯಾಷನಲ್ ಸ್ಪೆಲ್ಲಿಂಗ್ ಬೀ ಗೆದ್ದಿದ್ದಾರೆ.

ಗುರುವಾರ ನಡೆದ ಸ್ಕ್ರಿಪ್ಸ್ ನ್ಯಾಷನಲ್ ಸ್ಪೆಲಿಂಗ್ ಬೀಯಲ್ಲಿ ಬೃಹತ್ ಜಯಶಾಲಿಯಾಗಿ ಹೊರಹೊಮ್ಮಿದ್ದಾರೆ. 41.74 ಲಕ್ಷ ರೂ. ನಗದು ಮತ್ತು ಇತರ ಬಹುಮಾನಗಳನ್ನು ಗೆದ್ದಿದ್ದಾರೆ. 90 ಸೆಕೆಂಡುಗಳಲ್ಲಿ 29 ಪದಗಳನ್ನು ಸರಿಯಾಗಿ ಉಚ್ಛರಿಸಿದರು. ಮಿಂಚಿನ ಸುತ್ತಿನಲ್ಲಿ 20 ಪದಗಳನ್ನು ಸರಿಯಾಗಿ ಉಚ್ಛರಿಸಿದ ಫೈಜಾನ್ ಝಕಿ ಅವರನ್ನು ಸೋಲಿಸಿದ್ದಾರೆ.

Advertisement. Scroll to continue reading.

ಬಹೃತ್‌ ಸೋಮ 2024 ರ ಸ್ಕ್ರಿಪ್ಸ್ ರಾಷ್ಟ್ರೀಯ ಸ್ಪೆಲ್ಲಿಂಗ್ ಬೀ ಚಾಂಪಿಯನ್. ನಂಬಲಸಾಧ್ಯವಾದ ಜ್ಞಾಪಕಶಕ್ತಿಯುಳ್ಳ ಹುಡುಗ‌. 2022 ರಲ್ಲಿ ಹರಿಣಿ ಲೋಗನ್ ಅವರ ಸ್ಟ್ಯಾಂಡಿಂಗ್ ಸ್ಪೆಲ್-ಆಫ್ ದಾಖಲೆಯನ್ನೂ ಮುರಿದಿದ್ದಾರೆ. ಆಗ ಲೋಗನ್‌ 26ರ ಪೈಕಿ 22 ಪದಗಳನ್ನು ಸರಿಯಾಗಿ ಉಚ್ಛರಿಸಿದ್ದರು ಎಂದು ಸಂಘಟಕರು ತಿಳಿಸಿದ್ದಾರೆ.

ದಿ ಇ ಡಬ್ಲ್ಯೂ ಸ್ಕ್ರಿಪ್ಸ್ ಕಂಪನಿಯ ಅಧ್ಯಕ್ಷ ಮತ್ತು ಸಿಇಒ ಆಡಮ್ ಸಿಮ್ಸನ್ ಅವರು ಬೃಹತ್‌ಗೆ ಚಾಂಪಿಯನ್‌ಶಿಪ್ ಟ್ರೋಫಿ ನೀಡಿದ್ದಾರೆ. ಕೇವಲ 12 ವಯಸ್ಸಿನಲ್ಲೇ ಬೃಹತ್‌ ಹುಡುಗ ತುಂಬಾ ಜ್ಞಾನ ಹೊಂದಿದ್ದಾನೆ ಎಂದು ಬಣ್ಣಿಸಿದ್ದಾರೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

You May Also Like

ಕರಾವಳಿ

0 ಉಡುಪಿ: ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ವಿದ್ಯಾಲಯದ ಪ್ರಾರಂಭೋತ್ಸವ ಕಾರ್ಯಕ್ರಮ ಪಿಯು ಕಾಲೇಜು ಸಭಾಂಗಣದಲ್ಲಿ ನಡೆಯಿತು. ಪ್ರಾರಂಭೋತ್ಸವವನ್ನು ಭಾರತ ಮಾತೆ, ಸರಸ್ವತಿ, ಓಂಕಾರ ಭಾವಚಿತ್ರಕ್ಕೆ ದೀಪಬೇಳಗಿಸಿ, ಪುಷ್ಪಾರ್ಚನೆ ಮಾಡುವ ಮೂಲಕ...

ರಾಷ್ಟ್ರೀಯ

0 ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ಭಾನುವಾರ ಸಂಜೆ 7.15ರಿಂದ  ಮೋದಿ ಅವರ ಜತೆ 71 ಸಚಿವರು ಪ್ರತಿಜ್ಞಾವಿಧಿ ಸ್ವೀಕರಿಸಿದರು....

ರಾಜ್ಯ

0 ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನವಾಗಿದೆ. ಇಂದು ಬೆಳಗಿನ ಜಾವ ಮೈಸೂರಿನ ಫಾರ್ಮ್‌ ಹೌಸ್‌ನಲ್ಲಿದ್ದ ದರ್ಶನ್ ಬಂಧನವಾಗಿದೆ. ದರ್ಶನ್ ಜೊತೆಯಲ್ಲಿ ಇಬ್ಬರು ಬಾಡಿಗಾರ್ಡ್‌ಗಳನ್ನು ಸಹ ಪೊಲೀಸರು ಬಂಧಿಸಿದ್ದಾರೆ....

ರಾಷ್ಟ್ರೀಯ

0 ನವದೆಹಲಿ :  ಭಾನುವಾರ ನರೇಂದ್ರ ಮೋದಿ 3ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಮೋದಿ ಜೊತೆಗೆ 71 ಸಂಸದರು ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಇದೀಗ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ....

ಸಿನಿಮಾ

0 ಚಾಲೆಂಜಿಂಗ್ ಸ್ಟಾರ್ ಖ್ಯಾತಿಯ ನಟ ದರ್ಶನ್‌ ಅವರನ್ನು ಪೊಲೀಸರು ಬೆಳ್ಳಂಬೆಳಗ್ಗೆ ಬಂಧನ ಮಾಡಿದ್ದಾರೆ. ಮೈಸೂರಿನ ನಿವಾಸದಲ್ಲಿ ನಟ ದರ್ಶನ್‌ ಬಂಧನಕ್ಕೊಳಗಾಗಿದ್ದು, ಈ ಪ್ರಕರಣ ಇದೀಗ ಇಡೀ ಸ್ಯಾಂಡಲ್‌ವುಡ್‌ ಬೆಚ್ಚಿ ಬೀಳುವಂತೆ ಮಾಡಿದೆ....

error: Content is protected !!