ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ
ಅಂಕೋಲಾ : ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಂಬಾರದಲ್ಲಿ ನಡೆದಿದೆ.
17 ವರ್ಷದ ಶಿಲ್ಪಾಗೌಡ ಮೃತ ದುರ್ದೈವಿ. ಬೆಳಂಬಾರದಲ್ಲಿ ತಾಳೇಬೈಲಿನ ಪಿಯುಸಿ ವಾಣಿಜ್ಯ ವಿಭಾಗದ ವ್ಯಾಸಂಗ ಮಾಡುತ್ತಿದ್ದಳು.
ಮಾರ್ಚ್ 9 ರಂದು ದ್ವಿತೀಯ ಪರೀಕ್ಷೆ ಆರಂಭವಾಗಿದೆ. ಆಕೆ ಎರಡು ಪರೀಕ್ಷೆಯನ್ನು ಬರೆದಿದ್ದಳು. ಆದರೆ ಪೋಷಕರು ಕೂಲಿ ಕೆಲಸಕ್ಕೆ ಅಂತಾ ಹೋಗಿದ್ದಾಗ ಆಕೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.
Advertisement. Scroll to continue reading.

ಕೆಲ ಹೊತ್ತಿನ ನಂತರ ಆಕೆ ವಾಂತಿ ಮಾಡಿಕೊಳ್ಳುತ್ತಿರುವುದನ್ನು ಗಮನಿಸಿದ ಸ್ಥಳೀಯರು ಅಂಕೋಲಾದ ಖಾಸಗಿ ಆಸ್ಪತ್ರೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಿದ್ದಾರೆ. ಆದರೆ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮಾರ್ಗ ಮಧ್ಯೆದಲ್ಲೇ ಸಾವನ್ನಪ್ಪಿದ್ದಾಳೆ. ಆತ್ಮಹತ್ಯೆಗೆ ಕಾರಣವೇನು ಎಂಬುದು ತಿಳಿದುಬಂದಿಲ್ಲ.
ಈ ಸಂಬಂಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Advertisement. Scroll to continue reading.

In this article:ankola, death, Diksoochi news, diksoochi Tv, diksoochi udupi, Sucide, uttara kannada

Click to comment