Connect with us

Hi, what are you looking for?

Diksoochi News

ಕ್ರೀಡೆ

VIDEO: 75 ಕೆಜಿ ಭಾರ ಎತ್ತಿ ಅಚ್ಚರಿಗೊಳಿಸಿದ 9ರ ಹರೆಯದ ಹುಡುಗಿ..!

1

ವೇಯ್ಟ್‌ ಲಿಫ್ಟಿಂಗ್‌ನಲ್ಲಿ ತನ್ನದೇ ಆದ ಸಾಧನೆ ಮಾಡಿರುವ ಹುಡುಗಿ ಈಗ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾಳೆ…! ಈಕೆಯ ವಿಡಿಯೋ ಈಗ ಎಲ್ಲ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಸದ್ಯ ಇಂಟರ್‌ನೆಟ್‌ನಲ್ಲಿ ಹಲವಾರು ಫಿಟ್ನೆಸ್ ವಿಡಿಯೋಗಳು ಕಾಣಸಿಗುತ್ತವೆ. ಆದರೆ ಇಲ್ಲೊಬ್ಬಳು ಹುಡುಗಿಯ ಅದ್ಭುತ ಶಕ್ತಿ ಹಾಗೂ ಸಾಧನೆ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಹರಿಯಾಣದ ಪಂಚಕುಲದ 9 ವರ್ಷದ ಬಾಲಕಿ ಅರ್ಷಿಯಾ ಗೋಸ್ವಾಮಿ ತನ್ನ ಅದ್ಭುತ ಶಕ್ತಿ ಮತ್ತು ದೃಢಸಂಕಲ್ಪದಿಂದ ವೇಟ್‌ಲಿಫ್ಟಿಂಗ್ ಜಗತ್ತಿನಲ್ಲಿ ಅಲೆಗಳನ್ನು ಎಬ್ಬಿಸಿದ್ದಾಳೆ. ಈ ಹುಡುಗಿ 75 ಕೆಜಿ ಡೆಡ್‌ಲಿಫ್ಟ್ ಮಾಡುವ ವಿಡಿಯೋ ವೈರಲ್ ಆಗಿದೆ.

ಆರಂಭದಲ್ಲಿ ಫೆಬ್ರವರಿ 29 ರಂದು ಅರ್ಷಿಯಾ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿತ್ತು. ಆದರೆ ಇತ್ತೀಚೆಗೆ ಈ ವಿಡಿಯೋ ಬೇರೆ ಬೇರೆ ಖಾತೆಯಲ್ಲಿ ಹಂಚಿಕೊಂಡ ಬಳಿಕ ಈ ವಿಡಿಯೋ ಈಗ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಮುನ್ನೆಲೆಗೆ ಬಂದಿದೆ.

Advertisement. Scroll to continue reading.

ಅರ್ಷಿಯಾ ಸಾಧನೆ ಮಾಡುತ್ತಿರುವುದು ಇದೇ ಮೊದಲೇನೂ ಅಲ್ಲ. 2021ರಲ್ಲಿ ತನ್ನ ಆರನೇ ವಯಸ್ಸಿನಲ್ಲಿ ಅರ್ಷಿಯಾ 45 ಕೆಜಿ ತೂಕವನ್ನು ಎತ್ತುವ ಮೂಲಕ ಅತ್ಯಂತ ಕಿರಿಯ ಡೆಡ್‌ಲಿಫ್ಟರ್ ಆಗಿ ಗಮನ ಸೆಳೆದಳು. 2023 ರಲ್ಲಿ ಇದೇ ಪುಟಾಣಿ ಸಲೀಸಾಗಿ 60 ಕೆಜಿಯನ್ನು ಡೆಡ್‌ಲಿಫ್ಟಿಂಗ್ ಮಾಡುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದರೆ, ಈಗ 75 ಕೆಜಿಯನ್ನು ಎತ್ತುವ ಮೂಲಕ ತನ್ನ ಸಾಧನೆಯ ಪಯಣವನ್ನು ಮುಂದುವರಿಸಿದ್ದಾಳೆ

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!