Connect with us

Hi, what are you looking for?

Diksoochi News

ಸಿನಿಮಾ

ಸಲ್ಮಾನ್‌ ಖಾನ್‌ ನಿವಾಸದ ಹೊರಗೆ ಗುಂಡಿನ ದಾಳಿ

0

ಮುಂಬೈ: ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಅವರ ಮುಂಬೈನ ನಿವಾಸದ ಹೊರಗೆ ಇಂದು ಮುಂಜಾನೆ ಗುಂಡಿನ ಸದ್ದು ಕೇಳಿ ಬಂದಿದ್ದು, ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಸಿತು.

ಭಾನುವಾರ ಮುಂಜಾನೆ 5 ಗಂಟೆ ಸುಮಾರಿಗೆ ಬಾಂದ್ರಾದಲ್ಲಿರುವ ಸಲ್ಮಾನ್ ಖಾನ್ ಅವರ ಮನೆಯ ಹೊರಗೆ ಬೈಕ್‌ನಲ್ಲಿ ಬಂದ ಅಪರಿಚಿತ ವ್ಯಕ್ತಿ ಗಾಳಿಯಲ್ಲಿ ಹಲವಾರು ಸುತ್ತು ಗುಂಡು ಹಾರಿಸಿದ್ದಾನೆ. ನಂತರ ಸ್ಥಳದಲ್ಲಿ ಪರಾರಿಯಾಗಿದ್ದಾನೆ. ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮುಂಬೈ ಪೊಲೀಸರು ಘಟನೆಯ ಕುರಿತು ತನಿಖೆ ಆರಂಭಿಸಿದ್ದು, ಗುಂಡು ಹಾರಿಸಿದ ವ್ಯಕ್ತಿ ಪತ್ತೆಗೆ ಬಲೆ ಬೀಸಿದ್ದಾರೆ. ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯ್‌, ಸಲ್ಮಾನ್ ‌ಖಾನ್‌ ಹತ್ಯೆ ಮಾಡುವುದಾಗಿ ಹೇಳಿದ್ದ. ತಾನು ಟಾರ್ಗೆಟ್‌ ಮಾಡಿರುವ 10 ಮಂದಿ ಹೆಸರಿನ ಪಟ್ಟಿಯಲ್ಲಿ ಸಲ್ಮಾನ್‌ ಖಾನ್‌ ಮೊದಲಿಗರಾಗಿದ್ದಾರೆ ಎಂದಿದ್ದ. 1998 ರ ಕೃಷ್ಣಮೃಗ ಬೇಟೆ ಆರೋಪ ಹೊತ್ತಿರುವ ಬಾಲಿವುಡ್‌ ನಟನ ಮೇಲೆ ಬಿಷ್ಣೋಯ್‌ ಹಗೆ ಸಾಧಿಸುತ್ತಿದ್ದಾನೆ.

Advertisement. Scroll to continue reading.

ಬಿಷ್ಣೋಯ್ ತನ್ನ ಸಹಾಯಕ ಸಂಪತ್ ನೆಹ್ರಾ ಬಳಸಿಕೊಂಡು ಸಲ್ಮಾನ್‌ ಖಾನ್‌ ಅವರ ಬಾಂದ್ರಾ ನಿವಾಸದ ಮೇಲೆ ಕಣ್ಣಿಟ್ಟಿದ್ದ. ವಿಚಾರ ತಿಳಿಯುತ್ತಿದ್ದಂತೆ ನೆಹ್ರಾನನ್ನು ಹರಿಯಾಣ ಪೊಲೀಸರ ವಿಶೇಷ ಕಾರ್ಯಪಡೆ ವಶಪಡಿಸಿಕೊಂಡಿದೆ.

ಕಳೆದ ವರ್ಷ ಏಪ್ರಿಲ್ 11 ರಂದು ಬಂದ ಮತ್ತೊಂದು ಬೆದರಿಕೆ ಕರೆಯನ್ನು ಅನುಸರಿಸಿ ಮುಂಬೈ ಪೊಲೀಸರು ಸಲ್ಮಾನ್‌ ಖಾನ್ ಅವರ ಭದ್ರತೆಯನ್ನು Y+ ಗೆ ಹೆಚ್ಚಿಸಿದ್ದರು. ಖಾನ್‌ಗೆ ಬೆದರಿಕೆ ಇಮೇಲ್ ಕಳುಹಿಸಿದ್ದಕ್ಕಾಗಿ ಯುನೈಟೆಡ್ ಕಿಂಗ್‌ಡಂನಲ್ಲಿರುವ ಭಾರತೀಯ ವಿದ್ಯಾರ್ಥಿಯ ವಿರುದ್ಧ ಲುಕ್‌ಔಟ್ ನೋಟಿಸ್‌ ಹೊರಡಿಸಲಾಗಿದೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

You May Also Like

ರಾಷ್ಟ್ರೀಯ

0 ಅಹ್ಮದಾಬಾದ್: ಪ್ರಧಾನಿ ನರೇಂದ್ರ ಮೋದಿ ತವರು ರಾಜ್ಯ ಗುಜರಾತ್ ನಲ್ಲಿ ಬಿಜೆಪಿ ಆಂತರಿಕ ಭಿನ್ನಮತದ ಬೇಗೆಯನ್ನು ಎದುರಿಸುತ್ತಿದೆ. ಸಹಕಾರ ಕ್ಷೇತ್ರದಲ್ಲಿ ಐಎಫ್ಎಫ್ ಸಿಒ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆ ವೇಳೆ ಭಿನ್ನಮತ ಸ್ಪಷ್ಟವಾಗಿ...

ಅರೆ ಹೌದಾ!

1 ಟೋಕಿಯೋ: ಕಾಲ ಆಧುನಿಕವಾಗುತ್ತಿದ್ದಂತೆ ಯುವಜನತೆಯ ಯೋಚನೆಯಲ್ಲೂ ಬಹು ಬದಾಲಾವಣೆ ಉಂಟಾಗುತ್ತಿದೆ. ಜತೆಗೆ ಕೌಟುಂಬಿಕ ಜೀವನ ಪದ್ಧತಿಯೂ ಬದಲಾಗುತ್ತಿದೆ. ಹಿಂದೆಲ್ಲ ಕುಟುಂಬ, ಮದುವೆ ಜೀವನದ ಅವಿಭಾಜ್ಯ ಅಂಗವಾಗಿತ್ತು. ಬಳಿಕ ಮದುವೆಯ ಸಾಂಪ್ರದಾಯಿಕ ವ್ಯವಸ್ಥೆಯನ್ನು...

ರಾಜ್ಯ

1 ಮಡಿಕೇರಿ: ಬಾಲಕಿಯ ರುಂಡ ಕತ್ತರಿಸಿ ಭೀಕರವಾಗಿ ಹತ್ಯೆ ಮಾಡಿದ್ದ ಆರೋಪಿ ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯ ಹತ್ಯೆ ಮಾಡಿದ್ದ ಆರೋಪಿ ಪ್ರಕಾಶ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆ...

ರಾಜ್ಯ

0 ಬೆಂಗಳೂರು : ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರು ಆಸ್ಪತ್ರೆಗೆ ದಾಖಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ, ತೀವ್ರ ನಿಗಾ ತಂಡದಿಂದ ಚಿಕಿತ್ಸೆ ನೀಡಲಾಗುತ್ತಿದೆ. ಎಸ್‌.ಎಂ. ಕೃಷ್ಣ ಅವರನ್ನು ಏಪ್ರಿಲ್ 29 ರಂದು...

ಜ್ಯೋತಿಷ್ಯ

0 ದಿನಾಂಕ : ೧೨-೦೫-೨೪, ವಾರ : ಭಾನುವಾರ ಹಣದ ಖರ್ಚು ಹೆಚ್ಚಿರಲಿದೆ. ಇದರಿಂದ ನಿಮ್ಮ ಬಜೆಟ್ ಅಸಮತೋಲನವಾಗಬಹುದು. ಹಣದ ವಿಚಾರಕ್ಕೆ ನಿಮ್ಮ ಹಾಗೂ ಸಂಗಾತಿ ನಡುವೆ ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆ ಇದೆ....

error: Content is protected !!