ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಕೊರೋನಾ ಮೂರನೇ ಅಲೆ ಭೀತಿ ದೇಶವನ್ನು ಕಾಡುತ್ತಿದೆ. ಜನತೆ ಮಾತ್ರ ಕೊರೋನಾ ನಿಯಮಗಳನ್ನು ಉಲ್ಲಂಘಿಸುವುತ್ತಿದ್ದಾರೆ. ಬ್ರಹ್ಮಾವರದಲ್ಲಿ ನಿಯಮ ಉಲ್ಲಂಘಿಸಿದವರಿಗೆ ಬ್ರಹ್ಮಾವರ ತಹಶೀಲ್ದಾರ್ ರಾಜಶೇಖರ ಮೂರ್ತಿ ಮತ್ತು ಕಂದಾಯ ಇಲಾಖೆಯ ತಂಡ ಮಂಗಳವಾರ ಸಂಜೆ ಹಲವರಿಗೆ ದಂಡ ವಿಧಿಸಿದರು.
ಬಸ್ ನಿಲ್ದಾಣದ ಬಳಿ ಸಂಚರಿಸುವ ಕಾರು, ರಿಕ್ಷಾ, ಮತ್ತು ಬಸ್ ನಲ್ಲಿ ಕುಳಿತವರಿಗೆ ದ್ವಿಚಕ್ರ ವಾಹನ ಸವಾರರಿಗೆ ದಂಡ ವಿಧಿಸಿದರು. ಪ್ರತಿಯೊಬ್ಬರಿಂದ 100 ರೂ.ನಂತೆ ಇಂದು 8 ಜನರಿಗೆ 800 ರೂ ರಶೀದಿಯನ್ನು ನೀಡಲಾಗಿದೆ. ಕಂದಾಯ ಅಧಿಕಾರಿಗಳಾದ ರಾಘವೇಂದ್ರ ನಾಯ್ಕ್, ಕೋಟ ಹೋಬಳಿಯ ರಾಜು, ಬ್ರಹ್ಮಾವರ ಹೋಬಳಿಯ ಲಕ್ಷ್ಮೀನಾರಾಯಣ ಭಟ್, ಗ್ರಾಮ ಲೆಕ್ಕಿಗ ಶಿವರಾಜ್, ಸುಧಾಕರ ನಾಯರಿ, ವಾಹನ ಚಾಲಕ ನಾಗೇಶ್ ಹಾಜರಿದ್ದರು.
Advertisement. Scroll to continue reading.