ಕನ್ನಡದ ಖ್ಯಾತ ನಿರ್ಮಾಣ ಸಂಸ್ಥೆಯಲ್ಲಿ ಒಂದಾದ ಹೊಂಬಾಳೆ ಫಿಲಂಸ್ ಹೊಸ ಹೊಸ ಪ್ರಾಜೆಕ್ಟ್ ಬ್ಯಾಕ್ ಟು ಬ್ಯಾಕ್ ಘೋಷಣೆ ಮಾಡುತ್ತಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ‘ಲೂಸಿಯಾ’ ಪವನ್ ಕುಮಾರ್ ಕಾಂಬಿನೇಷನ್ನಲ್ಲಿ ‘ದ್ವಿತ್ವ’ , ರಕ್ಷಿತ್ ಶೆಟ್ಟಿ ಜೊತೆ ‘ರಿಚರ್ಡ್ ಆಂಟೋನಿ’ ಚಿತ್ರ ಅನೌನ್ಸ್ ಮಾಡಿದ್ದರು.
ಈಗ ಮತ್ತೊಂದು ಚಿತ್ರ ತಯಾರಿಸಲು ಮುಂದಾಗಿದೆ . 11ನೇ ಸಿನಿಮಾ ಆರಂಭಿಸುತ್ತಿರುವುದಾಗಿ ಮಾಹಿತಿ ನೀಡಿದೆ. ಆಗಸ್ಟ್ 6 ರಂದು ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಮತ್ತು ಟೈಟರ್ ಅನಾವರಣ ಮಾಡುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದೆ.
ಯಾವ ಹೀರೋ ಈ ಸಿನೆಮಾದಲ್ಲಿ ನಟಿಸುತ್ತಿದ್ದಾರೆ ಎಂದು ಮಾಹಿತಿ ಇನ್ನೂ ಹೊರಗೆ ಬಿದ್ದಿಲ್ಲ. ಅನೌನ್ಸ್ ಮೆಂಟ್ ಪೋಸ್ಟರ್ ನಲ್ಲಿ “ನಿನ್ನೊಳಗಿನ ಕಿಚ್ಚು ನಿನ್ನನ್ನು ಸುಡದಿರಲಿ” ಎಂದು ಕ್ಯಾಪ್ಶನ್ ನೀಡಿದೆ. ‘ಕಿಚ್ಚು’ ಪದವನ್ನು ನೋಡಿ ಚಿತ್ರಪ್ರೇಮಿಗಳು ಇದು “ಕಿಚ್ಚ ಸುದೀಪ್” ಜೊತೆ ಸಿನಿಮಾ ಎಂದು ಹೇಳುತ್ತಿದ್ದಾರೆ. ಹಲವು ನಟರುಗಳ ಹೆಸರು ಕೇಳಿಬರುತ್ತಿದ್ದು
ರಿಷಬ್ ಶೆಟ್ಟಿ ಹೆಸರೂ ಕೇಳಿ ಬರುತ್ತಿದೆ.