ವರದಿ : ದಿನೇಶ್ ರಾಯಪ್ಪನಮಠ
ಕೋಟ: ಕೋಟ ಅಮೃತೇಶ್ವರಿ ದೇವಳದ ಸನಿಹ ನಿವಾಸಿ ಅರ್ಚಕ ಪ್ರತಿನಿಧಿ ದಿಕ್ಷಾ ದಾಮೋದರ ಜೋಗಿ ಪುತ್ರಿ 6 ವರ್ಷದ ಮಾನ್ಯ ಇವಳ ಲಿವರ್ ಟ್ರಾನ್ಸ್ ಪ್ಲ್ಯಾಂಟ್ ಚಿಕಿತ್ಸೆಗೆ ವೈದ್ಯರ ನಿರ್ದೇಶನದಂತೆ 16 ಲಕ್ಷ ರೂ ಅಗತ್ಯವಿದ್ದು ಅದರಂತೆ ಕೋಟ ಪರಿಸರದ ಸ್ಥಳೀಯ ಗಣ್ಯರ ಮೂಲಕ ಸಭೆ ನಡೆಸಿ ಸಾಮಾಜಿ ಜಾಲ ತಾಣ ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಮೊರೆಹೋಗಿದ್ದು ಅದರಂತೆ ಉಡುಪಿಯ ರಿಸರ್ವ್ ಪೆÇೀಲಿಸ್ ಇಲಾಖೆ ಉಡುಪಿ ಇನ್ಸ್ಪೆಕ್ಟರ್ ಮೂರ್ತಿ ನಾಯಕ್ ಬಾರಿ ಮೊತ್ತದ ಹಣ ನೀಡಿ ಆ ಮಗುವಿನ ಚಿಕಿತ್ಸೆ ಆರ್ಥಿಕ ಸಹಕಾರ ನೀಡಿದ್ದಾರೆ. ಈ ಮಾನವೀಯತೆ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.
ಗುರುವಾರ ಕೋಟ ಅಮೃತೇಶ್ವರಿ ದೇವಳದ ಅವರ ಗೃಹಕ್ಕೆ ತನ್ನ ಇನ್ನುಳಿದ ಸಿಬ್ಬಂದಿಗಳೊಂದಿಗೆ ತೆರಳಿ ಸಹಾಯಹಸ್ತ ಚಾಚಿದರು. ಇದಕ್ಕೂ ಮೊದಲು ಬುಧವಾರ ಉಡುಪಿ ಹೈವೆ ಪೆಟ್ರೋಲ್ ಪೋಲಿಸ್ ವಾಹನದ ಚಾಲಕ ಸಿಬ್ಬಂದಿ ಪ್ರಶಾಂತ್ ಪಡುಕರೆ ಗೃಹಕ್ಕೆ ತೆರಳಿ ಸಹಾಯಹಸ್ತ ಚಾಚಿ ತನ್ನ ವಾಟ್ಸಪ್ ಸ್ಟೇಟಸ್ ಸಾಮಾಜಿಕ ಜಾಲತಾಣ ಬಳಸಿಕೊಂಡು ಆರ್ಥಿಕ ಸಹಾಯಹಸ್ತ ಚಾಚಿದ್ದಾರೆ. ಈ ಮೂಲಕ ಕಾನೂನು ಪರಿಪಾಲಿಸುವ ಆರಕ್ಷಕರು ಮಾನವೀಯತೆ ಮೈಗೂಡಿಸಿಕೊಂಡಿದ್ದು ವ್ಯಾಪಕ ಪ್ರಶಂಸೆ ಪಾತ್ರರಾಗಿದ್ದಾರೆ.
ಈ ಸಂದರ್ಭದಲ್ಲಿ ದೀಕ್ಷಾ ದಾಮೋದರ ಜೋಗಿ, ಉಡುಪಿ ಎ.ಆರ್.ಎಸ್.ಐ ಪಾಂಡುರಂಗ, ಎಎಸ್‍ಐ ಜಯಕರ,ಹೈವೆಪ್ರೇಟೋಲ್ ಚಾಲಕ ಪ್ರಶಾಂತ್ ಪಡುಕರೆ,ಕೋಟ ಗ್ರಾಮಪಂಚಾಯತ್ ಸದಸ್ಯ ಸಂತೋಷ್ ಪ್ರಭು,ಅರ್ಚಕ ಯುವ ಸಂಘದ ಪ್ರಮುಖರು, ಮತ್ತಿತರರು ಇದ್ದರು.