ಕೊರೋನಾ ಮೂರನೇ ಅಲೆ ಅತಂಕ ಆರಂಭವಾಗಿದೆ. ಹೀಗಾಗಿ ರಾಜ್ಯ ಸರ್ಕಾರ ವೀಕೆಂಡ್ ಲಾಕ್ ಡೌನ್ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಎಂಟು ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಜಾರಿ ಮಾಡಲಾಗಿದೆ. ದಕ್ಷಿಣ ಕನ್ನಡ, ಬೆಳಗಾವಿ, ವಿಜಯಪುರ, ಕೊಡಗು, ಬೀದರ್ ಕಲ್ಬುರ್ಗಿ, ಮೈಸೂರು, ಚಾಮರಾಜನಗರ, ಕೊಡಗು ಜಿಲ್ಲೆಗಳಿಗೆ ವೀಕೆಂಡ್ ಕರ್ಫ್ಯೂ ಜಾರಿ ಮಾಡಲಾಗಿದೆ. ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆಗಳ ವರೆಗೆ ಕರ್ಫ್ಯೂ ಇರಲಿದೆ. ಆಗಸ್ಟ್ 16 ರ ವರೆಗೆ ಈ ಮಾರ್ಗಸೂಚಿ ಅನ್ವಯವಾಗಲಿದೆ.
- ಮಧ್ಯಾಹ್ನ 2 ಗಂಟೆ ವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶ
- ಮಧ್ಯಾಹ್ನ 2 ವರೆಗೆ ಮಾತ್ರ ಬೀದಿ ಬದಿ ವ್ಯಾಪಾರಕ್ಕೆ ಅವಕಾಶ
- ಜಾತ್ರೆ, ದೇವಾಲಯಗಳಲ್ಲಿ ಅಚರಣೆಗೆ ಅವಕಾಶವಿಲ್ಲ
- ಮದುವೆಗೆ 100 ಜನರಿಗೆ ಅವಕಾಶ
- ಅಂತ್ಯಕ್ರಿಯೆಗೆ 20 ಜನರಿಗೆ ಅವಕಾಶ
- ಹೊಟೇಲುಗಳಲ್ಲಿ ಪಾರ್ಸೆಲ್ ಗೆ, ಹೋಂ ಡೆಲಿವರಿಗೆ ಅವಕಾಶ
- ಅಂತರ್ ಜಿಲ್ಲಾ ಪ್ರಯಾಣಕ್ಕೆ ನಿಷೇಧವಿಲ್ಲ
- ನೌಕರರು ಐಡಿ ತೋರಿಸಿ ಓಡಾಡಬಹುದು
Advertisement. Scroll to continue reading.