Connect with us

Hi, what are you looking for?

Diksoochi News

ಕರಾವಳಿ

ಹುಟ್ಟೂರಿಗೆ ಆಗಮಿಸಿದ ಸಚಿವ ಕೋಟಗೆ ಭವ್ಯ ಸ್ವಾಗತ; ಅಮೃತೇಶ್ವರಿ ದೇವಸ್ಥಾನಕ್ಕೆ ಭೇಟಿ

0

ವರದಿ : ದಿನೇಶ್ ರಾಯಪ್ಪನಮಠ

ಕೋಟ: ರಾಜ್ಯ ಬಿಜೆಪಿ ಸರಕಾರದಲ್ಲಿ ಮೂರನೆ ಬಾರಿಗೆ ಸಚಿವರಾಗಿ ಅಧಿಕಾರ ವಹಿಸಿಕೊಂಡ ಕೋಟ ಶ್ರೀನಿವಾಸ ಪೂಜಾರಿ ಶುಕ್ರವಾರ ಸಂಜೆ ತನ್ನ ಹುಟ್ಟೂರು ಕೋಟ ತಲುಪಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರುಗಳು ಹಾಗೂ ಅಭಿಮಾನಿಗಳು ಭವ್ಯ ಸ್ವಾಗತ ನೀಡಿದರು.ಕೋಟದ ಮಹಾತೋಬಾರ ಹಿರೇಮಹಾಲಿಂಗೇಶ್ವರ ದೇವಳದ ಸನಿಹ ರಾಷ್ಟ್ರೀಯ ಹೆದ್ದಾರಿಯಿಂದ ಮೆರಮೆಣಿಯ ಪಾದಯಾತ್ರೆ ಮೂಲಕ ಕೋಟ ಅಮೃತೇಶ್ವರಿ ದೇವಳದವರೆಗೆ ಸಚಿವರನ್ನು ಕರೆತರಲಾಯಿತು. ದಾರಿಯುದ್ದಕ್ಕೂ ಅಲ್ಲಲ್ಲಿ ಸೇರಿದ್ದ ಸಂಘ ಸಂಸ್ಥೆಗಳು, ಮಸೀದಿಯ ಪ್ರಮುಖರು ಸಚಿವರನ್ನು ಹಾರ ಪುಷ್ಪ ನೀಡಿ ಸ್ವಾಗತಿಸಿಕೊಂಡರು.
ಶ್ರೀ ದೇವಳದಲ್ಲಿ ಪತ್ನಿ ಶಾಂತ, ಕುಟುಂಬಸ್ಥರ ಮೂಲಕ ವಿಶೇಷ ಪೂಜೆ ಸಲ್ಲಿಸಲಾಯಿತು.
ಶ್ರೀ ದೇವಳದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ಹಿರಿಯ ಅರ್ಚಕ ಪ್ರತಿನಿಧಿ ರಾಮನಾಥ ಜೋಗಿ, ಐರೋಡಿ ವಾಸುಕೀ ಸುಬ್ರಹ್ಮಣ್ಯ ದೇವಳದ ಸುಬ್ರಹ್ಮಣ್ಯ ಭಟ್ ಸಚಿವರನ್ನು ಶಾಲು ಹೊದಿಸಿ ಗೌರವಿಸಿದರು.


ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಸಹಜವಾಗಿ ವಿಧಾನಪರಿಷತ್ ಸಭಾ ನಾಯಕನೆಂಬ ನೆಲೆಗಟ್ಟಿನಲ್ಲಿ ಪಕ್ಷದ ಮುಖಂಡರುಗಳು, ಮುಖ್ಯಮಂತ್ರಿಗಳು, ರಾಜ್ಯಾಧ್ಯಕ್ಷರು ನನ್ನನ್ನು ಮತ್ತೆ ಪುನಹ ಮಂತ್ರಿ ಮಾಡಿದ್ದಾರೆ. ಈ ಅವಕಾಶವನ್ನು ಸದುಪಯೋಗಿಸಿಕೊಂಡು ಜನಸಾಮಾನ್ಯರಿಗೆ ಸರಕಾರದಿಂದ ಹಾಗೂ ಇಲಾಖೆಯಿಂದ ಸಿಗುವ ಸವಲತ್ತುಗಳನ್ನು ತಳಮಟ್ಟದಲ್ಲಿ ತಲುಪಿಸುವ ಮಹದಾಸೆಯನ್ನು ವ್ಯಕ್ತಪಡಿಸುತ್ತೇನೆ. ಭ್ರಷ್ಟಾಚಾರ ಮುಕ್ತ ಪಾರದರ್ಶಕ ಆಡಳಿತ ನಡೆಸುವ ನಮ್ಮ ಪ್ರಧಾನಿ ಕನಸಿನಂತೆ ಕಾರ್ಯನಿರ್ವಹಿಸಲಾಗುವುದು. ಸರಕಾರ ಯಾವ ಇಲಾಖೆ ನೀಡುತ್ತದೆಯೋ ಅದನ್ನು ಸಮರ್ಪಕವಾಗಿ ನಿಭಾಯಿಸಿ ಆಡಳಿತವನ್ನು ಮನೆಬಾಗಿಲಿಗೆ ಕೊಂಡ್ಯೋಯಲು ಇಚ್ಛೆ ವ್ಯಕ್ತಪಡಿಸಿ, ಹಿಂದೆ ನೀಡಿದ್ದ ಮುಜರಾಯಿ ಇಲಾಖೆಯಲ್ಲಿ ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಂಡು ಯಶಸ್ವಿಗೊಳಿಸಲಾಗಿದೆ. ಹಿಂದುಳಿದ ಇಲಾಖೆಯ ಮಹಿಳಾ ಹಾಸ್ಟೆಲ್ ಗಳಲ್ಲಿ ಮಕ್ಕಳಿಗೆ ಕರಾಟೆ ಕಲಿಸುವ ಕಾರ್ಯದ ಬಗ್ಗೆ ಯೋಚಿಸಿದ್ದೆ ಸರಕಾರ ಯಾವ ಇಲಾಖೆ ನೀಡುದತ್ತೆ ಅದನ್ನು ಸಮರ್ಥವಾಗಿ ನಿಭಾಯಿಸಬಲ್ಲೆ,ಮುಖ್ಯಮಂತ್ರಿಗಳ ನಿರ್ದೇಶನದಂತೆ ಕೊಡುಗು ಜಿಲ್ಲೆಯ ಉಸ್ತುವಾರಿ ಕ್ರಮಗಳ ಪ್ರಗತಿಪರಪರಿಶೀಲನಾ ಸಭೆಗಳನ್ನು ಅಲ್ಲಿನ ಶಾಸಕರಾದ ಬೊಪಯ್ಯನವರ ಮುಂದಾಳತ್ವದಲ್ಲಿ ಸಭೆ ಕರೆಯಲಾಗಿದೆ. ಅಲ್ಲಿನ ಅಭಿವೃದ್ಧಿ ಕುರಿತಂತೆ ಕಾರ್ಯಪ್ರವೃತ್ತರಾಗುತ್ತೇನೆ ಉಸ್ತುವಾರಿ ಜಿಲ್ಲೆ ಬದವಾವಳೆ ಕುರಿತಂತೆ ಸರಕಾರದ ಮಟ್ಟದಲ್ಲಿ ಉಸ್ತುವಾರಿ ಜಿಲ್ಲೆಗಳ ಬದಲಾವಣೆಯೂ ಆಗಬಹುದು, ಆಗಿನ ಸಿದ್ಧರಾಮಯ್ಯ ಸರಕಾರ ಓಬಿಸಿ ಮಿಸಲಾತಿಗಾಗಿ 200ಕೋಟಿ ರೂ ಕಾಯ್ದಿರಿಸಿದೆ ಆದರೆ ಅವರ ಆಡಳಿತದಲ್ಲಿ ಹಣ ಬಿಡುಗಡೆಯಾಗಲಿಲ್ಲ. ಆ ಸಂದರ್ಭದಲ್ಲೆ ನಾನು ವಿಪಕ್ಷ ನಾಯಕನಾಗಿ ಅದನ್ನು ಪ್ರಶ್ನೆ ಮಾಡಿದ್ದೆನೆ ಹಿಂದುಳಿದ ಆಯೋಗ ಹಾಗೂ ವರ್ಗಗಳ ಇಲಾಖೆ ಮೂಲಕ ಹಣ ಬಿಡುಗಡೆಯಾಗಬೇಕು ಇದೀಗ ಕೋಟ್9ನಲ್ಲಿರುವ ದಿಸೆಯಿಂದ ಯಾವುದೇ ತಿರ್ಮಾನ ತೆಗೆದುಕೊಳ್ಳಲಿಲ್ಲ ಅಲ್ಲಿನ ತಿರ್ಮಾನದಂತೆ ಮುಂದೆ ಕ್ರಮಕೈಗೊಳ್ಳಲಾಗುವುದು,ಮುಖ್ಯಮಂತ್ರಿಗಳು ಯಾವ ಇಲಾಖೆಯನ್ನು ನೀಡಿದ್ದರೂ ಅದನ್ನು ಸಮರ್ಥವಾಗಿ ನಿಭಾಯಿಸಿ ಬಡವರ ಬಗ್ಗೆ ವಿಶೇಷ ಕಾಳಜಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು,ಸಚಿವ ಸ್ಥಾನ ವಂಚಿತರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟ ವಿಚಾರವಾಗಿದೆ ಸರಕಾರದ ಮಟ್ಟದಲ್ಲಿ ಆ ಬಗ್ಗೆ ತಿರ್ಮಾನ ಕೈಗೊಳ್ಳುತ್ತಾರೆ ಎಂದು ಉತ್ತರಿಸಿದರು.


ಈ ಸಂದರ್ಭದಲ್ಲಿ ಕೋಟ ಗ್ರಾಮಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ,ಬಿಜೆಪಿ ಹಿಂದುಳಿದ ವರ್ಗಗಳ ಮೊರ್ಚಾ ರಾಜ್ಯ ಕಾರ್ಯದರ್ಶಿ ವಿಠ್ಠಲ್ ಪೂಜಾರಿ ಐರೋಡಿ,ಸಾಲಿಗ್ರಾಮ ಪ.ಪಂ ಸದಸ್ಯ ಸಂಜೀವ ದೇವಾಡಿಗ ,ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷೆ ಅಶ್ವಿನಿ ದಿನೇಶ್, ಕುಂದಾಪುರ ಮಂಡಲ ಬಿಜೆಪಿ ಹಿಂದುಳಿದ ವರ್ಗಗಳ ಮೊರ್ಚಾ ಅಧ್ಯಕ್ಷ ಸತೀಶ್ ಕುಂದರ್,ಕೋಟ ಗ್ರಾಮಪಂಚಾಯತ್ ಸದಸ್ಯರಾದ ಸಂತೋಷ್ ಪ್ರಭು,ಚಂದ್ರ ಪೂಜಾರಿ,ಕೋಟತಟ್ಟು ಗ್ರಾ.ಪಂ ಉಪಾಧ್ಯಕ್ಷ ವಾಸು ಪೂಜಾರಿ, ಕೋಟ ಶ್ರೀನಿವಾಸ ಪೂಜಾರಿ ಅಭಿಮಾನಿ ಬಳಗದ ಪ್ರಸಾದ್ ಬಿಲ್ಲವ, ಮನೋಹರ ಪೂಜಾರಿ,ಸುರೇಶ್ ಗಾಣಿಗ,ಪ್ರಶಾಂತ್ ಸೂರ್ಯ,ಅಕ್ಷಯ ಪೂಜಾರಿ,ಸುರೇಶ್ ಗಿಳಿಯಾರು, ಕೋಟ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷ ಸದಾನಂದ ಪೂಜಾರಿ, ಬಿಜೆಪಿ ಮುಖಂಡರುಗಳಾದ ಕರಣ್ ಪೂಜಾರಿ, ದಿನೇಶದ ಗಾಣಿಗ, ಅಮೃತೇಶ್ವರಿ ದೇವಳದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಸತೀಶ್ ಹೆಗ್ಡೆ,ಸುಶೀಲಸೋಮಶೇಖರ್,ರಾಮದೇವ ಐತಾಳ್,ಸುಂದರ್ ಕೆ ಮತ್ತಿತರರು ಉಪಸ್ಥಿತರಿದ್ದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!