Connect with us

Hi, what are you looking for?

Diksoochi News

ಕರಾವಳಿ

ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆಗೆ ವಿಚಾರ; ದ್ವೇಷದ ರಾಜಕೀಯಕ್ಕೆ ಉತ್ತಮ ಮಾದರಿ : ಕೆಪಿಸಿಸಿ ಪ್ಯಾನಲಿಸ್ಟ್‌ ವೆರೋನಿಕಾ ಕರ್ನೆಲಿಯೋ

0

ಉಡುಪಿ : ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರಕಾರ ಬಡವರ ಹಸಿವು ನೀಗಿಸುವ ನಿಟ್ಟಿನಲ್ಲಿ ಇಂದಿರಾ ಕ್ಯಾಂಟಿನ್‌ ಆರಂಭಿಸಿದ್ದು, ಈ ವರೆಗೆ ಉತ್ತಮ ಸೇವೆಯನ್ನು ನೀಡಿಕೊಂಡು ಬಂದಿದೆ. ಸಿದ್ದರಾಮಯ್ಯರವರ ದೂರದೃಷ್ಟಿತ್ವದ ಫಲವಾಗಿ ಬಡವರು ಮತ್ತು ಮಧ್ಯಮ ವರ್ಗದವರು ಕನಿಷ್ಠ ಹಣದಲ್ಲಿ ಉತ್ತಮ ಆಹಾರ ಪಡೆಯುವ ಯೋಜನೆಗೆ ಇಂದಿರಾ ಕ್ಯಾಂಟಿನ್‌ ಎಂದು ಹೆಸರಿಟ್ಟಿರುವುದು ಬಿಜೆಪಿಗರ ಕಣ್ಣು ಕುಕ್ಕುವಂತಾಗಿದೆ. ಬಡವರಿಗೆ ಆಹಾರ ನೀಡುವ ಸಲುವಾಗಿ ಇಂದಿರಾ ಕ್ಯಾಂಟೀನ್ ಆರಂಭಿಸಿದಾಗಲೂ ಕೂಡ ಕೊಂಕು ತೆಗೆದಿದ್ದ ಬಿಜೆಪಿ ಈಗ ಹೆಸರಿನ ವಿಚಾರದಲ್ಲಿ ವಿರೋಧ ಮಾಡಿಕೊಂಡು ಬಂದಿರುವುದು ದೇಶಕ್ಕೆ ಕೊಡುಗೆ ನೀಡಿದವರ ಬಗ್ಗೆ ಯಾವ ರೀತಿಯ ಭಾವನೆ ಹೊಂದಿದೆ ಎನ್ನುವುದನ್ನು ತೋರಿಸುತ್ತದೆ ಎಂದು ಕೆಪಿಸಿಸಿ ಪ್ಯಾನಲಿಸ್ಟ್‌ ವೆರೋನಿಕಾ ಕರ್ನೆಲಿಯೋ ಹೇಳಿದ್ದಾರೆ.

ಇಂದಿರಾಗಾಂಧಿ ಪ್ರಧಾನಿಯಾಗಿ ದೇಶದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಬಡ ಬಗ್ಗರು ಹಸಿವಿನಿಂದ ನರಳಬಾರದು ಎಂಬ ಉದ್ದೇಶವನ್ನು ಇಟ್ಟುಕೊಂಡು ರಾಜ್ಯದ ಎಲ್ಲೆಡೆ ಇಂದಿರಾ ಕ್ಯಾಂಟೀನ್‌ ಪ್ರಾರಂಭಿಸಿದ್ದರು ಇದರಿಂದ ಬಹುತೇಕ ಬಡವರಿಗೆ, ಕೂಲಿ ಕಾರ್ಮಿಕರಿಗೆ, ಭಿಕ್ಷುಕರಿಗೆ ಅನುಕೂಲವಾಗಿದೆ ಸದರಿ ಕ್ಯಾಂಟೀನ್‌ ಹೆಸರನ್ನು ಬದಲಿಸಲು ಹೊರಟಿರುವುದು ಖಂಡನೀಯವಾಗಿದೆ.

ಇತ್ತೀಚೆಗೆ ಮೋದಿ ಸರಕಾರ ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಅವರ ಹೆಸರಿನಲ್ಲಿದ್ದ ಖೇಲ್‌ ರತ್ನ ಪ್ರಶಸ್ತಿಯನ್ನು ಕೇಂದ್ರ ಸರಕಾರ ಏಕಾಏಕಿ ಮರು ನಾಮಕರಣ ಮಾಡಿರುವುದು ನೋಡುವಾಗ ದೇಶಕ್ಕೆ ಕೊಡುಗೆ ನೀಡಿದ ಕಾಂಗ್ರೆಸ್‌ ಪಕ್ಷದ ನಾಯಕರನ್ನು ಗುರಿಯಾಗಿಟ್ಟುಕೊಂಡು ಕೆಲಸ ಮಾಡುತ್ತಿದೆ ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಸಮಯದಲ್ಲಿ ದೇಶದ ಜನತೆಗೆ ನೀಡಿದ ಬರವಸೆಗಳನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಪೆಟ್ರೋಲ್‌, ಡೀಸೆಲ್‌, ಅನಿಲ ಬೆಲೆ ಸೇರಿದಂತೆ ದಿನ ಬಳಿಕೆ ವಸ್ತುಗಳನ್ನು ಹೇಳಿಸುವ ಮೂಲಕ ಜನಸಾಮಾನ್ಯರಿಗೆ ಕಷ್ಟ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಟಿ ರವಿಯವರಿಗೆ ನಿಜವಾಗಿ ಕಾಳಜಿ ಇದ್ದರೆ ಮೋದಿ ಹೆಸರಿನಲ್ಲಿ ನಾಮಕರಣ ಮಾಡಿರುವ ಕ್ರೀಡಾಂಗಣಕ್ಕೆ ಕ್ರೀಡಾಳುಗಳ ಹೆಸರನ್ನು ಇಡುವಂತೆ ಪ್ರಯತ್ನ ಪಡಲಿ ಅದನ್ನು ಬಿಟ್ಟು ದೇಶಕ್ಕೆ ಕೊಡುಗೆ ನೀಡಿದ ಕಾಂಗ್ರೆಸ್‌ ನಾಯಕರ ಹೆಸರನ್ನು ಬದಲಿಸುವ ಮೂಲಕ ದ್ವೇಷ ರಾಜಕಾರಣ ಮಾಡುವುದುನ್ನು ಕೈ ಬಿಡಲಿ ಎಂದು ಅವರು ಆಗ್ರಹಿಸಿದ್ದಾರೆ.

Advertisement. Scroll to continue reading.

ಸಿ.ಟಿ ರವಿರವರು ಕೇವಲ ಪ್ರಚಾರಕ್ಕಾಗಿ ಮೋದಿಯ ದುರಾಡಳಿತವನ್ನು ಮರೆಮಾಚಲು ಬಡವರ ಅನ್ನದಾತೆ ಎಂದೇ ಖ್ಯಾತಿ ಪಡೆದಿರುವ ಇಂದಿರಾ ಗಾಂಧಿ ಅವರ ಹೆಸರಿನಲ್ಲಿರುವ ಇಂದಿರಾ ಕ್ಯಾಂಟೀನ್ ಹೆಸರನ್ನು ಬದಲಾಯಿಸಬೇಕು ಎಂದು ಹೇಳುವ ಮೂಲಕ ನಿಜವಾಗಿಯೂ ಅವರು ಬಡವರ ವಿರೋಧಿಗಳು ಎಂಬುದು ಸಾಬೀತಾಗಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!