ನವದೆಹಲಿ: ವಿಶೇಷ ಸಂಗಾತಿ ಕಾಯ್ದೆಯಡಿ ವಿವಾಹವನ್ನು ಯಾವುದೇ ಸಂಗಾತಿಯ ದೈಹಿಕ ಉಪಸ್ಥಿತಿಯನ್ನು ಒತ್ತಾಯಿಸದೆ, ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ನೋಂದಾಯಿಸಬಹುದು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ. ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ವಿ. ರಾಮಸುಬ್ರಮಣಿಯನ್ ಅವರ ನ್ಯಾಯಪೀಠವು ಈ ಆದೇಶವನ್ನು ನೀಡಿದ್ದು, ಜನರು ಬಯಸಿದರೂ ಕೂಡ ಅವರನ್ನು ಅನುಸರಿಸಲು ಸಾಧ್ಯವಾಗದ ರೀತಿಯಲ್ಲಿ ಕಾನೂನು ಪತ್ರಗಳು ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದು, ಕಾನೂನು ತಂತ್ರಜ್ಞಾನದ ಜೊತೆಯಲ್ಲಿ ಸಾಗಬೇಕು ಎಂದಿದೆ. ಈ ಮೂಲಕ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಆದೇಶದ ವಿರುದ್ಧ ಹರಿಯಾಣ ಸರ್ಕಾರ ಸಲ್ಲಿಸಿದ ಮೇಲ್ಮನವಿಯನ್ನು ವಜಾಗೊಳಿಸಿ, ದಂಪತಿಗಳನ್ನು ವಿಶೇಷ ಕಾನೂನಿನ ಅಡಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ವಿವಾಹ ನೋಂದಣಿ ಮಾಡಲು ಅವಕಾಶ ಮಾಡಿಕೊಟ್ಟಿದೆ.
ಇದೇ ವೇಳೆ ನ್ಯಾಯಪೀಠವು, 45 ದಿನಗಳ ಒಳಗೆ ಹೈಕೋರ್ಟ್ ಆದೇಶವನ್ನು ಪಾಲಿಸುವಂತೆ ಮತ್ತು ದಂಪತಿಗಳು ಮದುವೆ ಪ್ರಮಾಣಪತ್ರವನ್ನು ಹೊಂದಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳುವಂತೆ ನ್ಯಾಯಾಲಯ ಹರಿಯಾಣ ಸರ್ಕಾರಕ್ಕೆ ನಿರ್ದೇಶನ ನೀಡಿತು. ಹರ್ಯಾಣದ ಗುರುಗ್ರಾಮದಲ್ಲಿ ಮದುವೆ ಅಧಿಕಾರಿಯ ಮುಂದೆ ತಮ್ಮ ಮದುವೆಯನ್ನು ಕಾಯ್ದೆಯಡಿ ನೋಂದಾಯಿಸಲು ದಂಪತಿಗಳು ತಮ್ಮ ಅಸಮರ್ಥತೆಯನ್ನು ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ಆದೇಶ ನೀಡಲಾಗಿದೆ. ಪುರುಷ ಯುನೈಟೆಡ್ ಕಿಂಗ್‌ಡಂನಲ್ಲಿ ನೆಲೆಸಿರುವ ಐಟಿ ಕನ್ಸಲ್ಟೆಂಟ್ ಆಗಿದ್ದು, ಮಹಿಳೆ ಯುನೈಟೆಡ್ ಸ್ಟೇಟ್ಸ್‌ನಲ್ಲಿ ನಿವಾಸಿಯಾಗಿದ್ದು, ವೈದ್ಯರಾಗಿದ್ದಾರೆ. ಅವರು ಡಿಸೆಂಬರ್ 2019 ರಲ್ಲಿ ಭಾರತದಲ್ಲಿ ವಿವಾಹವಾದರು ಮತ್ತು ಮರಳಿ ತಮ್ಮ ತಮ್ಮ ಕೆಲಸಕ್ಕೆ ತೆರಳಿದ್ದರು.
ಇದೇ ವೇಳೆ ದಂಪತಿಗಳು ತಮ್ಮ ವಿವಾಹದ ನೋಂದಣಿಗೆ ಅರ್ಜಿ ಸಲ್ಲಿಸಿದರು. ಆದರೆ ಮದುವೆ ನೊಂದಾಣಿ ಅಧಿಕಾರಿಯು ಅವರ ಉಪಸ್ಥಿತಿಯನ್ನು ಏಪ್ರಿಲ್ 3, 2020 ರಂದು ಕೋರಿದ್ದರು. ಆದರೆ ಕೋವಿಡ್ -19 ಕಾರಣದಿಂದಾಗಿ, ಎಲ್ಲಾ ವಿಮಾನಗಳನ್ನು ರದ್ದುಗೊಳಿಸಲಾಗಿದ ಕಾರಣ ಅವರು ಭಾರತಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಈ ವೇಳೆ ಆಗಸ್ಟ್ 2020 ರಲ್ಲಿ, ದಂಪತಿಗಳು ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ನೋಂದಣಿಯನ್ನು ಪ್ರಕ್ರಿಯೆಗೊಳಿಸಲು ಅವಕಾಶ ನೀಡುವಂತೆ ಮನವಿ ಮಾಡಿದರು. ಆದರೆ ಮದುವೆ ನೊಂದಾಣಿ ಅಧಿಕಾರಿ ಅದನ್ನು ನಿರಾಕರಿಸಿದರು. ನಂತರ ದಂಪತಿಗಳು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟನ್ನು ಮೊರೆ ಹೋದರು, ಏಕ ನ್ಯಾಯಾಧೀಶರ ಪೀಠವು ಕಳೆದ ಡಿಸೆಂಬರ್‌ನಲ್ಲಿ ದಂಪತಿಗಳ ವಿನಂತಿಯನ್ನು ವಜಾ ಮಾಡಿತು. ಬಳಿಕ ಸುಪ್ರಿಂಕೋರ್ಟ್‌ನಲ್ಲಿ ಈ ಬಗ್ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ ವೇಳೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ವಿವಾಹ ನೋಂದಣಿ ಮಾಡಬಹುದು ಎಂದು ಆದೇಶ ನೀಡಿದೆ.