ವರದಿ : ಬಿ.ಎಸ್.ಆಚಾರ್ಯ
ಉಡುಪಿ : ರೈಲ್ವೆ ನಿಲ್ಡಾಣದಲ್ಲಿ ಟಿಕೇಟಿಲ್ಲದೆ ಬೆಂಗಳೂರಿನಿಂದ ಬಂದ 17 ವರ್ಷ ಪ್ರಾಯದ ಬಾಲಕನನ್ನು ರಕ್ಷಿಸಲಾಗಿದೆ. ಆತನು ಮನೆ ಬಿಟ್ಟು
ಬಂದಿದ್ದು ಆರ್ ಪಿ ಎಫ್ ಸಬ್ ಇನ್ಸ್ಪೆಕ್ಟರ್ ಸುಧೀರ್ ಶೆಟ್ಟಿ ಮಕ್ಕಳ ಸಹಾಯವಾಣಿಗೆ ಕರೆ ಮಾಡಿದ್ದು, ಮಕ್ಕಳ ಸಹಾಯವಾಣಿಯವರು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಿದ್ದಾರೆ. ಕೂಡಲೇ ರೈಲ್ವೆ ನಿಲ್ದಾಣಕ್ಕೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್, ಸಮಾಜ ಕಾರ್ಯಕರ್ತ ಯೋಗೀಶ್ ಭೇಟಿ ನೀಡಿ ಬಾಲಕನನ್ನು ಸಮಾಲೋಚನೆ ನಡೆಸಿ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರು ಪಡಿಸಿದರು. ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ರೊನಾಲ್ಡ್ ಫುರ್ಟಾಡೋ ಅವರ ಆದೇಶದಂತೆ ಅಪ್ರಾಪ್ತ ಬಾಲಕನಿಗೆ ಸ್ಫೂರ್ತಿ ವಿಶ್ವಾಸದ ಮನೆ ಶಂಕರಪುರದಲ್ಲಿ ತಾತ್ಕಾಲಿಕ ಪುನರ್ವಸತಿ ಕಲ್ಪಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಆರ್ ಪಿ ಎಫ್ ಸಿಬ್ಬಂದಿಗಳಾದ ಗುರುರಾಜ್, ಎಸ್.ಕೆ ಯಾದವ್ , ಜಿಲ್ಲಾ ನಾಗರಿಕ ಸೇವಾ ಸಮಿತಿಯ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತಾ, ಮಕ್ಕಳ ಸಹಾಯವಾಣಿಯ ಜ್ಯೋತಿ ಪಾಲ್ಗೊಂಡಿದ್ದರು.
