ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಪ್ರತೀ ವರ್ಷ ಸ್ವಾತಂತ್ರ್ಯ ದಿನದಂದು ನಾನಾ ಜನಪರ ಕಾರ್ಯ ಮಾಡುತ್ತಿದ್ದ ಬ್ರಹ್ಮಾವರ ಫೌಂಡೇಶನ್ ವತಿಯಿಂದ ಈ ವರ್ಷ ಅನಾರೋಗ್ಯದಿಂದ 2 ಕಾಲುಗಳನ್ನು ಕಳಕೊಂಡು ಅಂಗವಿಕಲ ಸ್ಥಿತಿಯಲ್ಲಿರುವ ಸಾಲಿಕೇರಿಯ ತಿಮ್ಮಪ್ಪ ಶೆಟ್ಟಿಗಾರ್ ಅವರಿಗೆ 89,000 ಸಾವಿರ ರೂ. ವೆಚ್ಚದ ತ್ರಿಚಕ್ರ ಚಾಲಿತ ಮೋಟಾರು ವಾಹನವನ್ನು ಭಾನುವಾರ ಸಂಜೆ ಸಾಲಿಕೇರಿ ಶ್ರೀ ದುರ್ಗಾಪರಮೇಶ್ವರಿ ವೀರಭದ್ರ ದೇವಸ್ಥಾನದ ಸಭಾಂಗಣದಲ್ಲಿ ಬ್ರಹ್ಮಾವರ ತಹಶೀಲ್ದಾರ ರಾಜಶೇಖರ ಮೂರ್ತಿಯವರಿಂದ ಹಸ್ತಾಂತರಿಸಲಾಯಿತು.
ಪೌಂಡೇಶನ್ ಅಧ್ಯಕ್ಷ ಗೋವಿಂದ ರಾಜ್ ಹೆಗ್ಡೆ , ಬ್ರಹ್ಮಾವರ ಬಂಟರ ಸಂಘದ ಅಧ್ಯಕ್ಷ ರಾಜಾರಾಮ್ ಶೆಟ್ಟಿ , ದೇವಸ್ಥಾನದ ಆಡಳಿತ ಮೋಕ್ತೇಸರ ಬಾಲಕೃಷ್ಣ ಶೆಟ್ಟಿಗಾರ್, ವಕೀಲರ ಸಂಘದ ಮಾಜಿ ಅಧ್ಯಕ್ಷ ರತ್ನಾಕರ ಶೆಟ್ಟಿ, ಬ್ರಹ್ಮಾವರ ಕಂದಾಯ ನೀರೀಕ್ಷಕ ಲಕ್ಷ್ಮೀನಾರಾಯಣ ಭಟ್ ಉಪಸ್ಥಿತರಿದ್ದರು.
Advertisement. Scroll to continue reading.