ದಿವಂಗತ, ಸಾಹಸಸಿಂಹ ಡಾ. ವಿಷ್ಣುವರ್ಧನ್ ಬಗೆಗೆ ಸಂದರ್ಶನವೊಂದರಲ್ಲಿ ಅವಹೇಳನಕಾರಿ ಮಾತನಾಡಿದ್ದ ತೆಲುಗು ನಟ ವಿಜಯ್ ರಂಗರಾಜು ವಿರುದ್ಧ ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ದೂರು ದಾಖಲಿಸಿದ್ದಾರೆ.
ಕಳೆದ ತಿಂಗಳು ವೆಬ್ಸೈಟ್ ವೊಂದು ವಿಜಯ್ ರಂಗರಾಜು ಸಂದರ್ಶನ ಮಾಡಿತ್ತು. ಈ ವೇಳೆ ಸಾಹಸಸಿಂಹ ವಿಷ್ಣುವರ್ಧನ್ ಬಗೆಗೆ ಆತ ಕೆಟ್ಟದಾಗಿ ಮಾತನಾಡಿದ್ದಾರೆ. ಆರಾಧ್ಯ ದೈವವಾಗಿರುವ ವಿಷ್ಣುದಾದಾ ಬಗೆಗೆ ಇಂತಹ ಮಾತುಗಳನ್ನಾಡಿರೋ ತೆಲುಗು ನಟನ ವಿರುದ್ಧ ದಾದಾ ಅಭಿಮಾನಿಗಳು ಫುಲ್ ಗರಂ ಆಗಿದ್ದಾರೆ. ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿಷ್ಣು ಸೇನಾ ಸಮಿತಿ ಕರ್ನಾಟಕ ಚಲನಚಿತ್ರ ಮಂಡಳಿ ದೂರು ನೀಡಿದೆ.
ಹಿರಿಯ ನಟ ಜಗ್ಗೇಶ್ ಕೂಡ ಈ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಕೂಡ ತರಾಟೆಗೆ ತೆಗೆದುಕೊಂಡಿದ್ದಾರೆ. ವಿಷ್ಣುದಾದಾ ಅಳಿಯ ಅನಿರುದ್ಧ್ ರವರೂ ಈ ಬಗ್ಗೆ ಖಡಕ್ ಆಗೆ ಪ್ರತಿಕ್ರಿಯಿಸಿದ್ದಾರೆ. ಚಂದನವನ ಕಂಡ ಅಪೂರ್ವ ಕಲಾವಿದನ ಬಗ್ಗೆ ಇಂತಹ ಹೇಳಿಕೆ ನೀಡಿರುವ ವಿಜಯ್ ರಂಗರಾಜು ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಎಲ್ಲರೂ ಆಗ್ರಹಿಸಿದ್ದಾರೆ.