Connect with us

Hi, what are you looking for?

Diksoochi News

ಕರಾವಳಿ

ಬ್ರಹ್ಮಾವರ : ಬಾರಕೂರಿನ ದೇವಾಲಯಗಳಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ

0

ವರದಿ : ಬಿ.ಎಸ್.ಆಚಾರ್ಯ

ಬ್ರಹ್ಮಾವರ : ಇಂದು ಶ್ರಾವಣ ಮಾಸದ ಶುಕ್ರವಾರ ನಾಡಿನೆಲ್ಲೆಡೆಯಲ್ಲಿ ಮಹಿಳೆಯರು ಮತ್ತು ಮಹಿಳಾ ಸಂಘಗಳು ಸಾಮೂಹಿಕವಾಗಿ ವರಮಹಾಲಕ್ಷ್ಮೀ ಪೂಜೆಯನ್ನು ಮಾಡುವ ಸಂಪ್ರದಾಯವಿದೆ. ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ಸಾಮಾಜಿಕ ಅಂತರ ಮತ್ತು ನಿಯಮಗಳ ಪಾಲನೆಯಿಂದ ಬಹತೇಕ ಕಡೆಯಲ್ಲಿ ಸರಳವಾಗಿ ನಡೆಯಿತು.


ದೇವಾಲಯಗಳ ನಗರ ಬಾರಕೂರಿನಲ್ಲಿ ಶ್ರೀಕಾಳಿಕಾಂಭಾ ದೇವಸ್ಥಾನದ ಮಹಿಳಾ ಬಳಗದಿಂದ ಶ್ರೀ ವೇಣುಗೋಪಾಲ ಕೃಷ್ಣ ದೇವಸ್ಥಾನ ಮೂಡುಕೇರಿ ಬಾರಕೂರು, ಶ್ರೀ ವೀರಭದ್ರ ದೇವಸ್ಥಾನ ಬಾರಕೂರು, ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಬಾರಕೂರು , ಶ್ರೀ ಏಕನಾಥೇಶ್ವರೀ ದೇವಸ್ಥಾನ ಬಾರಕೂರು, ಕಚ್ಚೂರು ಶ್ರೀ ಮಾಲ್ತೀ ದೇವಿ ದೇವಸ್ಥಾನ ಬಾರಕೂರು ಮತ್ತು ಬ್ರಹ್ಮಾವರ ರಥಬೀದಿಯ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಜರುಗಿತು. ಕೆಲವು ದೇವಸ್ಥಾನದಲ್ಲಿ ಮಹಿಳೆಯರಿಂದ ಭಜನೆ , ಸ್ತ್ರೋತ್ರ ಲಕ್ಷ್ಮೀ ನಾಮಾರ್ಚನೆ ಜರುಗಿತು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!