Connect with us

Hi, what are you looking for?

Diksoochi News

ಕರಾವಳಿ

ಬ್ರಹ್ಮಾವರ : ಸ್ವಚ್ಛ ಹಂದಟ್ಟುವಿನತ್ತ ನಮ್ಮ ಚಿತ್ತ ಧ್ಯೇಯ ವಾಕ್ಯದಡಿ ಸ್ವಚ್ಛತಾ ಕಾರ್ಯ

0

ವರದಿ : ಬಿ.ಎಸ್.ಆಚಾರ್ಯ

ಬ್ರಹ್ಮಾವರ : “ಸ್ವಚ್ಛ ಹಂದಟ್ಟುವಿನತ್ತ ನಮ್ಮ ಚಿತ್ತ” ಎನ್ನುವ ಧ್ಯೇಯದ ಅಡಿಯಲ್ಲಿ ಗ್ರಾಮಪಂಚಾಯತ್ ಸದಸ್ಯರಾದ ಪ್ರಕಾಶ್ ಹಂದಟ್ಟು ಮತ್ತು ಪೂಜಾ ಹಂದಟ್ಟು ಇವರ ನೇತೃತ್ವದಲ್ಲಿ ಹಂದಟ್ಟಿನಲ್ಲಿ ಹಲವು ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದಂತ ಹುಲ್ಲನ್ನು ಕಟಾವು ಮಾಡುವುದರ ಮೂಲಕ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಬಳಿಕ ಹಸಿಹುಲ್ಲನ್ನು ನ ಗೋವಿಗಾಗಿ ಮೇವು ಅಭಿಯಾನಕ್ಕೆ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಗೋವಿಗಾಗಿ ಮೇವು ಸ್ಥಾಪಕ ಸಂಚಾಲಕ ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ, ಕೋಟ ಶಿವರಾಮಕಾರಂತರಂತಹ ವಿಶ್ವ ಶ್ರೇಷ್ಠ ಸಾಹಿತಿಗಳನ್ನು, ಕೋಟ ಶ್ರೀನಿವಾಸ ಪೂಜಾರಿಯವರಂತಹ ನಾಯರನ್ನು ದೇಶಕ್ಕೆ ಕೊಟ್ಟ ಕೋಟದ ಪುಣ್ಯ ಭೂಮಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಚ ಭಾರತದ ಪರಿಕಲ್ಪನೆಯೊಂದಿಗೆ ಗೋಮಾತೆಯ ಸೇವೆ ಮಾಡಿರುವ ಯುವ ಸಂಘಟನೆಗಳ ಕಾರ್ಯ ರಾಜ್ಯಕ್ಕೆ ಮಾದರಿ ಎಂದರು.

ಗೋವಿಗಾಗಿ ಮೇವು ಅಭಿಯಾನದ ಕೋಟ ವಲಯಾಧ್ಯಕ್ಷ ಪ್ರದೀಪ್ ಪೂಜಾರಿ, ಸಾಮಾಜಿಕ ಜಾಲತಾಣ ಸಂಚಾಲಕ ಪ್ರದೀಪ್ ಪಡುಕೆರೆ, ಮಹಿಳಾ ಅದ್ಯಕ್ಷೆ ವಿದ್ಯಾ ಸಾಲ್ಯಾನ್, ಪಾಂಚ ಜನ್ಯದ,ಕ್ರಷ್ಣಮೂರ್ತಿ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು. ಗ್ರಾಮಪಂಚಾಯತ್ ಕೋಟತಟ್ಟು, ಗೆಳೆಯರ ಬಳಗ ಯುವಕಸಂಘ ದಾನುಗುಂದು,ಅಭಿಯಾನ್ ಪ್ರೆಂಡ್ಸ್‌ ನಾಗಬನ ಹಂದಟ್ಟು,ಪಾಂಚಜನ್ಯ ಸಂಘ ಪಾರಂಪಳ್ಳಿ, ಮಹಿಳಾ ಸಂಘ ಹಂದಟ್ಟು, ಓಂ ಸ್ಟಾರ್ ಪ್ರೆಂಡ್ಸ್ ಗೊಬ್ನರ ಬೆಟ್ಟು, ನಿಸ್ವಾರ್ಥ್ ಸೇವಾ ಟ್ರಸ್ (ರಿ) ಕೋಟ, ಕಟ್ಟೆ ಗೆಳೆಯರು ಹಂದೆ ದೇವಸ್ಥಾನ ಹಂದಟ್ಟು ಮುಂತಾದ ಸಂಘಟನೆಗಳು ಭಾಗವಹಿಸಿದ್ದವು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

You May Also Like

ಸಿನಿಮಾ

0 ಬೆಂಗಳೂರು: ಯುವ ನಟ ಚೇತನ್ ಚಂದ್ರ ಮೇಲೆ ಬೆಂಗಳೂರಿನಲ್ಲಿ ಹಲ್ಲೆ ನಡೆದಿದೆ. ಕನಕಪುರ ರಸ್ತೆಯ ಕಗ್ಗಲಿಪುರದಲ್ಲಿ ಚೇತನ್ ಚಂದ್ರ ಮೇಲೆ ಅಟ್ಯಾಕ್ ಮಾಡಲಾಗಿದೆ. ಸುಮಾರು 20 ಮಂದಿ ಅಟ್ಯಾಕ್ ಮಾಡಿದ್ದಾರೆ ಎಂದು...

ರಾಷ್ಟ್ರೀಯ

0 ಮುಂಬೈ: ವಾಣಿಜ್ಯ ನಗರಿ ಮುಂಬೈಯ ಘಾಟ್ಕೋಪರ್ ಪ್ರದೇಶದಲ್ಲಿ ಹೋರ್ಡಿಂಗ್ ಕುಸಿದು ಬಿದ್ದು ಮೃತಪಟ್ಟವರ ಸಂಖ್ಯೆ 14 ಕ್ಕೆ ಏರಿದ್ದು, 74 ಜನರು ಗಾಯಗೊಂಡಿದ್ದಾರೆ ಎಂದು ಮಹಾನಗರ ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ. ನಿನ್ನೆ ಸೋಮವಾರ...

ರಾಷ್ಟ್ರೀಯ

0 ನವದೆಹಲಿ: ಬಿಹಾರದ ಮಾಜಿ ಡಿಸಿಎಂ ಹಾಗೂ ಬಿಜೆಪಿ ಹಿರಿಯ ನಾಯಕ ಸುಶೀಲ್ ಮೋದಿ ನಿಧನರಾಗಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು. ಆರು ತಿಂಗಳ ಹಿಂದೆಯೇ ತಮಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು ಎಂದು ಹೇಳಿಕೊಂಡಿದ್ದ...

ಜ್ಯೋತಿಷ್ಯ

0 ದಿನಾಂಕ: ೧೩-೦೫-೨೪, ವಾರ : ಸೋಮವಾರ, ನಕ್ಷತ್ರ : ಪುನರ್ವಸು, ತಿಥಿ: ಷಷ್ಠಿ ನೀವು ಪ್ರಮುಖ ಸಭೆಗೆ ಹಾಜರಾಗಬಹುದು. ಪ್ರೇಮ ಸಂಬಂಧಗಳಲ್ಲಿ ತೀವ್ರತೆ ಹೆಚ್ಚಾಗುವ ಸಾಧ್ಯತೆಗಳಿವೆ. ಕೆಲಸದ ಸ್ಥಳದಲ್ಲಿ ನೀವು ಸ್ನೇಹಿತರಿಂದ...

ಕರಾವಳಿ

0 ಉಡುಪಿ : ವಿಧಾನ ಪರಿಷತ್ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ರಘುಪತಿ ಭಟ್ ಗೆ ಟಿಕೆಟ್ ಕೈ ತಪ್ಪಿತ್ತು. ಈ ಬಗ್ಗೆ ಅಸಾಮಾಧಾನ ಹೊರಹಾಕಿದ್ದರು ಕೂಡಾ.   ಅವರು ಇದೀಗ ಪಕ್ಷೇತರ ಅಭ್ಯರ್ಥಿಯಾಗಿ...

error: Content is protected !!