ಹಾಸನ : ಚಿಕ್ಕಮಗಳೂರಿಗೆ ಪ್ರವಾಸಕ್ಕೆಂದು ಕರೆದೊಯ್ದು ದಟ್ಟ ಅರಣ್ಯ ಪ್ರದೇಶದಲ್ಲಿ ಮೂವರು ಎಣ್ಣೆ, ಗಾಂಜಾ ಸೇವಿಸಿ ನಟೋರಿಯಸ್ ರೌಡಿಶೀಟರ್‌ನ್ನು ಜೊತೆಯಲ್ಲಿದ್ದ ಸ್ನೇಹಿತರೇ ಕೊಲೆಗೈದಿರುವ ಘಟನೆ ಹಾಸನ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು ಬೆಳಕಿಗೆ ಬಂದಿದೆ.
ಸಂತೋಷ್ (36) ಅಲಿಯಾಸ್ ಪುಲ್ಲಿ ಕೊಲೆಯಾದ ರೌಡಿಶೀಟರ್. ಈತ ಹಾಸನದ ಕಾಲೇಜು ದಿನಗಳಿಂದಲೂ ರೌಡಿಸಂ ಮಾಡುತ್ತಿದ್ದ. ಹದಿನೈದು ವರ್ಷಗಳ ಹಿಂದೆಯೇ ಹಾಸನ ನಗರದ ಸ್ಲೇಟರ್ಸ್ ಹಾಲ್ ಬಳಿ ಗುಂಪೊಂದು ಮಾರಕಾಸ್ತ್ರದಿಂದ ಹಲ್ಲೆಗೈದಿತ್ತು. ಈ ವೇಳೆ ಪ್ರಾಣಾಪಾಯದಿಂದ ಪಾರಾಗಿದ್ದ ಎನ್ನಲಾಗಿದೆ.
ಈತನೊಂದಿಗೆ ಪ್ರೀತಮ್ , ಕೀರ್ತಿ ಜೊತೆಯಾಗಿದ್ದರು. ಆದರೆ ಸಂತೋಷ್ ಅಲಿಯಾಸ್ ಹಲವು ಪ್ರಕರಣ ಪ್ರಮುಖ ಆರೋಪಿಯಾಗಿದ್ದನು. ಬಳಿಕ ಫೆ.9 ರಂದು ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಚಿಕ್ಕಮಗಳೂರಿಗೆ ಪ್ರವಾಸಕ್ಕೆಂದು ತೆರಳಿದ್ದರು. ಆ ವೇಳೆ ಮೂವರು ಎಣ್ಣೆ ಅಮಲು, ಗಾಂಜಾ ಸೇವಿಸಿ ನಟೋರಿಯಸ್ ರೌಡಿಶೀಟರ್‌ನ್ನು ಜೊತೆಯಲ್ಲಿದ್ದ ಸ್ನೇಹಿತರೇ ಮಚ್ಚಿನಿಂದ ಬರ್ಬರ ಹತ್ಯೆಗೈದು ಗುಂಡಿ ತೆಗೆದು ಹೂತು ಹಾಕಿ ವಾಪಸ್ ಮನೆಗೆ ಹಿಂದುರುಗಿದ್ದಾರೆ.

ಬಳಿಕ ಸಂತೋಷ್ ಮನೆ ಬಾರದ ಹಿನ್ನೆಲೆ ಕುಟುಂಬಸ್ಥರು ಹಾಸನ ಬಡಾವಣೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರಡ. ಕುಟುಂಬಸ್ಥರ ವಿಚಾರ ವೇಳೆ ಮೂವರು ಪ್ರವಾಸಕ್ಕೆ ಹೋಗಿದ್ದು ಪೊಲೀಸರಿಗೆ ತಿಳಿದಿದ್ದಾರೆ.
ಬಳಿಕ ಪ್ರೀತಮ್‍ಗೌಡ, ಸ್ನೇಹಿತ ಕೀರ್ತಿ ವಶಕ್ಕೆ ಪಡೆಯಲಾಗಿದೆ. ಇಬ್ಬರ ವಿಚಾರ ವೇಳೆ ತಾವೇ ಕೊಲೆ ಮಾಡಿ ಹೂತು ಹಾಕಿರುವುದಾಗಿ ಬಾಯಿ ಬಿಟ್ಟಿದ್ದಾರೆ ಎನ್ನಲಾಗಿದೆ.
ಸಂತೋಷ್, ಪ್ರೀತಮ್ ಹಾಗೂ ಕೀರ್ತಿ ಹತ್ತಿರ ಎಲ್ಲಾ ಕೆಲಸ ಮಾಡಿಸುತ್ತಿದ್ದ. ಆದರೆ ಸರಿಯಾಗಿ ಪಾಲು ಕೊಡುತ್ತಿರಲಿಲ್ಲ. ಇದರಿಂದ ಪ್ರೀತಮ್ ಹಾಗೂ ಸ್ನೇಹಿತರು ಪುಲ್ಲಿ ಮೇಲೆ ಗರಂ ಆಗಿದ್ದಲ್ಲದೇ ಮೂವರ ನಡುವೆ ಮನಸ್ತಾಪವಿತ್ತು. ಜಗಳವಾಡಿದರೆ ಪುಲ್ಲಿ ನಮ್ಮನ್ನು ಮುಗಿಸಿ ಬಿಡುತ್ತಾನೆ ಎಂದು ಆತನನ್ನೇ ಕೊಲೆ ಮಾಡಲು ಸ್ಕೆಚ್ ಹಾಕಿದ್ದರು.
ಪುಲ್ಲಿ ಯಾವಾಗಲೂ ಮಚ್ಚನ್ನು ಜೊತೆಯಲ್ಲಿಯೇ ಇಟ್ಟುಕೊಂಡಿರುತ್ತಿದ್ದ. ಪುಲ್ಲಿ ಬಗ್ಗೆ ಚೆನ್ನಾಗಿ ತಿಳಿದಿದ್ದ ಸಂತೋಷ್ ಹಾಗೂ ಪ್ರೀತಂ ಚಿಕ್ಕಮಗಳೂರಿಗೆ ಟ್ರಿಪ್ ಹೋಗೋಣ ಎಂದು ಫೆ.9 ರಂದು ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ತೆರಳಿದ್ದರು. ಈ ವೇಳೆ ಪುಲ್ಲಿಯನ್ನು ಹತ್ಯೆ ಮಾಡಿದ್ದರು.

ಪೊಲೀಸರು ಇಬ್ಬರು ಕೊಲೆ ಆರೋಪಿಗಳನ್ನು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ ಒಂದು ಕಾರು ಹಾಗೂ ಮಚ್ಚನ್ನು ವಶಕ್ಕೆ ಪಡೆದಿದ್ದಾರೆ.
