ಸದ್ಯ ಕಿರುತೆರೆಯಲ್ಲಿ ‘ಸೀತಾರಾಮ’ ಜನಪ್ರಿಯ ಧಾರಾವಾಹಿ. ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಈ ಧಾರಾವಾಹಿಗೆ ತನ್ನದೇ ಆದ ಅಭಿಮಾನಿ ಬಳಗವಿದೆ. ಅದರಲ್ಲೂ ಅಗ್ನಿಸಾಕ್ಷಿಯ ಸನ್ನಿಧಿ ಖ್ಯಾತಿಯ ವೈಷ್ಣವಿಗೌಡ ಈ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ವೈಷ್ಣವಿಗೆ ಅವರದೇ ಆದ ಫ್ಯಾನ್ಸ್ ಫಾಲೋವರ್ಸ್ ಇದ್ದು, ಸೀತಾರಾಮ ಬಗ್ಗೆ ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಆದರೆ, ಈಗ ವೈಷ್ಣವಿ ಗೌಡ ಮೇಲೆ ಪ್ರಕರಣ ದಾಖಲಾಗಿದೆ.
ಸೀರಿಯಲ್ ಶೂಟಿಂಗ್ ನಲ್ಲಿ ಎಡವಟ್ಟು:
ಧಾರಾವಾಹಿಯ ದೃಶ್ಯವೊಂದರಲ್ಲಿ ವೈಷ್ಣವಿ ಗೌಡ ಹಾಗೂ ಅವರ ಸ್ನೇಹಿತೆ ಸ್ಕೂಟರಿನಲ್ಲಿ ಪ್ರಯಾಣ ಮಾಡುತ್ತಾ ಇರುತ್ತಾರೆ. ಆದರೆ ಈ ಸಂದರ್ಭದಲ್ಲಿ ಸ್ಕೂಟಿಯಲ್ಲಿ ಹಿಂದೆ ಕುಳಿತು ಪ್ರಯಾಣ ಮಾಡುತ್ತಿರುವ ವೈಷ್ಣವಿ ಗೌಡ ಅವರು ಸೀರಿಯಲ್ ಶೂಟಿಂಗ್ ವೇಳೆ ಹೆಲ್ಮೆಟ್ ಧರಿಸಿರುವುದಿಲ್ಲ.
ಧಾರಾವಾಹಿಯನ್ನು ಹಲವಾರು ಜನರು ನೋಡುತ್ತಾರೆ. ನಟ – ನಟಿಯರನ್ನು ಅನುಕರಿಸುತ್ತಾರೆ ಎನ್ನುವ ಕಾರಣಕ್ಕೆ ಇದೀಗ ಅವರಿಗೆ ದಂಡ ವಿಧಿಸಲಾಗಿದೆ.
ಈ ಸೀರಿಯಲ್ ದೃಶ್ಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದಂತೆ ಗಮನಿಸಿದ ಮಂಗಳೂರಿನ ಜಯಪ್ರಕಾಶ್ ಎಕ್ಕೂರು ಎಂಬುವವರು ಮಂಗಳೂರು ನಗರ ಪೊಲೀಸರಿಗೆ ಈ ಬಗ್ಗೆ ದೂರು ಸಲ್ಲಿಸಿದ್ದಾರೆ. ಸಮಾಜಕ್ಕೆ ಇದರಿಂದ ತುಂಬಾ ತಪ್ಪು ಸಂದೇಶ ರವಾನೆ ಆಗುತ್ತಾ ಇದೆ ಎಂದು ಹೇಳಿದ್ದಾರೆ. ಆ ಕಾರಣದಿಂದ ಅವರು ಕಂಪ್ಲೇಂಟ್ ಮಾಡಿದ್ಧಾರೆ. ಈ ಕೂಡಲೇ ಆ ನಟಿಯ ಮೇಲೆ, ಸೀರಿಯಲ್ ನಿರ್ದೇಶಕ ಮತ್ತು ವಾಹಿನಿ ಮೇಲೆ ಕಟ್ಟು ನಿಟ್ಟಿನ ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ಜಯಪ್ರಕಾಶ್ ಬರೆದಿದ್ದಾರೆ.
ದೂರಿನ ಆಧಾರದ ಮೇಲೆ ಮಂಗಳೂರು ಪೂರ್ವ ಸಂಚಾರ ಠಾಣೆಗೆ ಈ ಕೇಸ್ ವರ್ಗಾವಣೆಯಾಗಿತ್ತು. ವಾಹಿನಿ ಮತ್ತು ನಟಿಗೆ ನೋಟಿಸ್ ರವಾನಿಸಲಾಗಿತ್ತು. ಜತೆತಗೆ ಈ ಸೀರಿಯಲ್ ಶೂಟಿಂಗ್ ಬೆಂಗಳೂರಿನ ನಂದಿನಿ ಲೇಔಟ್‌ನಲ್ಲಿ ನಡೆದಿದ್ದರಿಂದ ಆ ಭಾಗದ ರಾಜಾಜಿನಗರ ಪೊಲೀಸ್ ಠಾಣೆಗೆ ಪ್ರಕರಣವನ್ನು ವರ್ಗಾಯಿಸಲಾಗಿದೆ. ಆ ನಂತರದಲ್ಲಿ ತಲಾ 500 ರೂಪಾಯಿ ದಂಡ ವಿಧಿಸಲಾಗಿದೆ. ಗಾಡಿಯ ಓನರ್ ಸವಿತಾ ಎನ್ನುವವರಿಗೂ 500 ರೂ ದಂಡ ವಿಧಿಸಲಾಗಿದೆ.