Connect with us

Hi, what are you looking for?

Diksoochi News

ರಾಷ್ಟ್ರೀಯ

‘ಬೇಗ ಮದುವೆ ಆಗಬೇಕಿದೆ’: ಚುನಾವಣಾ ಪ್ರಚಾರ ಅಖಾಡದಲ್ಲಿ ರಾಹುಲ್ ಗಾಂಧಿ ಹೀಗೆ ಹೇಳಿದ್ದೇಕೆ?

0

ಲಕ್ನೋ: ರಾಯ್‌ ಬರೇಲಿಯಲ್ಲಿ ನಡೆದ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ರಾಹುಲ್‌ ಗಾಂಧಿ ತಮ್ಮ ಮದುವೆಯ ಬಗ್ಗೆ ಪ್ರಸ್ತಾಪ ಮಾಡಿದರು.

2024 ರ ಲೋಕಸಭೆ ಚುನಾವಣೆಯಲ್ಲಿ ರಾಯ್ ಬರೇಲಿಯಿಂದ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ರಾಹುಲ್ ಗಾಂಧಿ ಅವರು ಇಂದು ಉತ್ತರ ಪ್ರದೇಶ ಕ್ಷೇತ್ರದಲ್ಲಿ ನಡೆದ ರ್‍ಯಾಲಿಯಲ್ಲಿ ಭಾವನಾತ್ಮಕ ಭಾಷಣ ಮಾಡಿದರು. ಈ ವೇಳೆ ಕೆಲವೊಂದು ವಿಚಾರದ ಬಗ್ಗೆ ಗಂಭೀರವಾಗಿ ಧ್ವನಿಯೆತ್ತಿದರೆ, ಕೊನೆಗೆ ಹಾಸ್ಯಮಯ ಪ್ರಸಂಗ ಕೂಡ ನಡೆಯಿತು.

ರಾಹುಲ್‌ ಗಾಂಧಿಯವರ ಭಾಷಣದ ಕೊನೆಗೆ ಸಾರ್ವಜನಿಕರು ಅವರ ವೈವಾಹಿಕ ಜೀವನದ ಬಗ್ಗೆ ಕೇಳಿದ್ದಾರೆ. ನೀವು ಯಾವಾಗ ಮದುವೆಯಾಗುತ್ತೀರಿ ಎಂದು ನೆರೆದಿದ್ದ ಜನ ಕೇಳಿದ್ದಾರೆ. ಇದಕ್ಕೆ ನಗುತ್ತಲೇ ಪ್ರತಿಕ್ರಿಯಸಿದ ರಾಗಾ, ಈಗ ನಾನು ಶೀಘ್ರದಲ್ಲೇ ಮದುವೆಯಾಗಬೇಕಾಗಿದೆ ಎಂದು ಹೇಳಿ ವೇದಿಕೆಯಿಂದ ತೆರಳಿದರು.

Advertisement. Scroll to continue reading.

ರಾಹುಲ್‌ ಗಾಂಧಿಯವರು ಈ ಹಿಂದೆಯೂ ತಮ್ಮ ಮದುವೆ ವಿಚಾರವಾಗಿ ಸಾಕಷ್ಟು ಸುದ್ದಿಯಾಗಿದ್ದರು. ನನ್ನ ಬಾಳ ಸಂಗಾತಿಯಾಗುವವರಿಗೆ ತಾಯಿ ಸೋನಿಯಾ ಗಾಂಧಿ ಮತ್ತು ಅಜ್ಜಿ ಇಂದಿರಾ ಗಾಂಧಿ ಇಬ್ಬರ ಗುಣಗಳು ಇರಬೇಕು. ಅಂತಹ ಸಂಗಾತಿಯೊಂದಿಗೆ ಜೀವನ ನಡೆಸಲು ನಾನು ಬಯಸುತ್ತೇನೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!