Connect with us

Hi, what are you looking for?

Diksoochi News

ಕರಾವಳಿ

ಮಂಗಳೂರು ಕಾಲೇಜಿನ ಟಾಯ್ಲೆಟ್‌ನಲ್ಲಿ ಚಿತ್ರೀಕರಣ ಪ್ರಕರಣ: ಮೊಬೈಲ್‌ನಲ್ಲಿತ್ತು 6 ನಿಮಿಷದ ವಿಡಿಯೋ

0

ಮಂಗಳೂರು: ನಗರದ ಬಾವುಟಗುಡ್ಡೆ ಮೆಡಿಕಲ್ ಕಾಲೇಜಿನ ಟಾಯ್ಲೆಟ್‌ನಲ್ಲಿ ಮೊಬೈಲ್‌ ಇಟ್ಟು ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದು, ಮೊಬೈಲ್‌ನಲ್ಲಿ 6 ನಿಮಿಷದ ವಿಡಿಯೋ ಪತ್ತೆಯಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ಸುರತ್ಕಲ್‌ನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ, ಉಡುಪಿ ಕಾಪು ಮೂಲದ ಅಪ್ರಾಪ್ತ ಬಾಲಕನನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.

ನಗರದ ಬಾವುಟಗುಡ್ಡೆ ಮೆಡಿಕಲ್ ಕಾಲೇಜಿನ ಡೆಂಟಲ್ ವಿಭಾಗಕ್ಕೆ ಚಿಕಿತ್ಸೆಗೆಂದು 17 ವರ್ಷದ ಬಾಲಕ ಬರುತ್ತಿದ್ದ. ಈ ಹಿಂದೆ ಎರಡು ಬಾರಿ ತಾಯಿ ಜತೆ ಬಂದಿದ್ದ ಈತ, ಮಂಗಳವಾರ ತಾಯಿಗೆ ಅಸೌಖ್ಯವಿದ್ದ ಕಾರಣ ತಾನೊಬ್ಬನೇ ಬಂದಿದ್ದ. ಮೆಡಿಕಲ್ ಕಾಲೇಜಿನಲ್ಲಿ 30 ರೂ. ಫೀಸ್ ಕಟ್ಟಿ ಅಪಾಯಿಂಟ್‌ಮೆಂಟ್ ಪಡೆದಿದ್ದು, ಬಳಿಕ ಟಾಯ್ಲೆಟ್‌ಗೆ ಹೋಗಿ ಮೊಬೈಲ್ ಇಟ್ಟು ವಿಡಿಯೋ ಆನ್ ಮಾಡಿದ್ದ.

Advertisement. Scroll to continue reading.

ಬಾಲಕ ಬರುವಾಗ ತಾಯಿಯ ಮೊಬೈಲ್ ತಂದಿದ್ದ. ಟಾಯ್ಲೆಟ್‌ನಲ್ಲಿ ಮೊಬೈಲ್ ಇಟ್ಟು ಹೊರಗೆ ತಿರುಗಾಡಲು ಹೋಗಿದ್ದ. ಪೊಲೀಸರು ಮೊಬೈಲ್ ವಶಕ್ಕೆ ಪಡೆದು ನಂಬರ್ ಆಧಾರದಲ್ಲಿ ಪರಿಶೀಲನೆ ನಡೆಸಿ ಅಪ್ರಾಪ್ತ ಬಾಲಕನ ತಾಯಿಯನ್ನು ಬರಲು ಹೇಳಿದ್ದಾರೆ. ಕೆಲ ಹೊತ್ತಿನ ಬಳಿಕ ತಾಯಿಯ ಜತೆ ಬಾಲಕನೂ ಆಗಮಿಸಿದ್ದಾನೆ.

ಬಾಲಕ ಕೃತ್ಯಕ್ಕೆ ಬಳಸಿದ ಮೊಬೈಲ್‌ ಅನ್ನು ತನಿಖಾಧಿಕಾರಿಗಳು ಪರಿಶೀಲನೆ ನಡೆಸಿದಾಗ ಕೃತ್ಯದ ಮಾದರಿಯ ಅವಧಿ ಯಾವುದೇ ಫೋಟೋ, ವಿಡಿಯೋಗಳು ಪತ್ತೆಯಾಗಿಲ್ಲ. ಪೊಲೀಸರು ಮೊಬೈಲ್ ವಶಪಡಿಸಿಕೊಂಡು ಮತ್ತಷ್ಟು ತನಿಖೆಗೊಳಪಡಿಸಿದ್ದಾರೆ. ಬಾಲಕನನ್ನು ಬಾಲಪರಾಧ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಅಪ್ರಾಪ್ತ ಬಾಲಕ ಟಾಯ್ಲೆಟ್‌ನಲ್ಲಿ ವಿಡಿಯೋ ಚಿತ್ರೀಕರಣಕ್ಕೆ ಇಟ್ಟ ಮೇಲೆ ಸುಮಾರು 6 ನಿಮಿಷದ ವಿಡಿಯೊ ಚಿತ್ರೀಕರಣವಾಗಿದೆ. ಈ ಅವಧಿಯಲ್ಲಿ ಮಹಿಳೆಯೊಬ್ಬರು ಟಾಯ್ಲೆಟ್‌ಗೆ ಬಂದು ಹೋಗಿರುವುದು ಸೆರೆಯಾಗಿದೆ.

ಆದರೆ ಮಹಿಳೆಯ ತಲೆ ಮಾತ್ರ ಕಂಡು ಬರುತ್ತಿದ್ದು, ವಿಡಿಯೋ ಸ್ಪಷ್ಟವಾಗಿ ಸೆರೆಯಾಗಿಲ್ಲ. ಇದಾದ ನಂತರ ಮೊಬೈಲ್‌ಗೆ ಕರೆ ಬಂದಿದೆ.

Advertisement. Scroll to continue reading.

ಟಾಯ್ಲೆಟ್ ವಿಡಿಯೋ ಚಿತ್ರೀಕರಣಕ್ಕಿಟ್ಟ ಕಿಡಿಗೇಡಿ ಇನ್ನೂ 17 ವರ್ಷದವನು. ಅಪ್ರಾಪ್ತನಾಗಿರುವ ಕಾರಣ ಆತನನ್ನು ತನಿಖೆಗೆ ಒಳಪಡಿಸುವುದೇ ತನಿಖಾಧಿಕಾರಿಗಳಿಗೆ ದೊಡ್ಡ ಸವಾಲಾಗಿದೆ. ತನಿಖೆ ವೇಳೆ ಮುಗ್ಧನಂತೆ ವರ್ತಿಸುವ ಈತ ಸ್ಪಷ್ಟವಾಗಿ ಯಾವುದಕ್ಕೂ ಉತ್ತರ ನೀಡುತ್ತಿಲ್ಲ.

Click to comment

Leave a Reply

Your email address will not be published. Required fields are marked *

You May Also Like

ಕರಾವಳಿ

0 ಪೆರ್ಡೂರು : ಆರ್‌.ಸಿ.ಸಿ ಬೆಳ್ಳರ್ಪಾಡಿ, ರೋಟರಿ ಕ್ಲಬ್ ಮಣಿಪಾಲ ಟೌನ್, ಕರ್ನಾಟಕ ಅರಣ್ಯ ಇಲಾಖೆ ಹೆಬ್ರಿ ವಲಯ ಪೆರ್ಡೂರು ಶಾಖೆ ಇವರ ಸಹಯೋಗದಲ್ಲಿ ವನಮಹೋತ್ಸವ, ಸಸಿ ವಿತರಣೆ ಮತ್ತು ಸನ್ಮಾನ ಸಮಾರಂಭ...

error: Content is protected !!