ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಆಲ್ ಇಂಡಿಯ ಬಂಟ್ಸ್ ಛೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರೀಸ್ ಮುಂಬೈ ಇವರ ವತಿಯಿಂದ ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿರುವ ಕಾಡೂರು ಗ್ರಾಮದ ಮುಂಡಾಡಿಯ ಯುಕ್ತಿ ಶೆಟ್ಟಿ (9) ವರ್ಷ ಇವರ ಚಿಕಿತ್ಸೆಗೆ 1 ಲಕ್ಷ ರೂಪಾಯಿಯ ಚೆಕ್ ನ್ನು ಐಬಿಸಿಸಿ ಅಧ್ಯಕ್ಷರಾದ ಕೆ.ಸಿ ಶೆಟ್ಟಿ ಕುತ್ಪಾಡಿ ಅವರು ಹಸ್ತಾಂತರಿಸಿದರು. ಬಳಿಕ ಮಾತನಾಡಿದ ಅವರು, ಪುಟಾಣಿ ಯುಕ್ತಿ ಆದಷ್ಟು ಶೀಘ್ರ ಗುಣಮುಖರಾಗಿ, ಉತ್ತಮ ಶಿಕ್ಷಣ ಪಡೆದು ಸಮಾಜದಲ್ಲಿ ಎತ್ತರಕ್ಕೇರಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಬಿಲ್ಲಾಡಿ ಗ್ರಾಮಪಂಚಾಯತ್ ಮಾಜಿ ಅದ್ಯಕ್ಷ ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ, ವಿಶ್ವಜ್ಞಾನ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ಸುಧೀರ್ ಶೆಟ್ಟಿ ಮುಂಡಾಡಿ ಮುಂತಾದವರು ಉಪಸ್ಥಿತರಿದ್ದರು.
Advertisement. Scroll to continue reading.