ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಬ್ಯಾಂಕುಗಳು ಅಂದರೆ ಮೇಲು ವರ್ಗದವರಿಗೆ ಮಾತ್ರ ಇದ್ದ ಅವಧಿಯಲ್ಲಿ ಕೆಳ ಮತ್ತು ಮಧ್ಯಮ ವರ್ಗದವರಿಗೆ ಮತ್ತು ಮಹಿಳೆಯರಿಗೆ ಹಣಕಾಸು ನೆರವು ಮತ್ತು ಆರ್ಥಿಕ ಅಗತ್ಯತೆಗೆ ಸಂದಿಸಲು ಮಾಡಲಾದ ಬ್ಯಾಂಕ್ ದಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಎಂದು ಶಿರಿಯಾರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರದೀಪ್ ಬಲ್ಲಾಳ್ ಹೇಳಿದರು.
ಸೋಮವಾರ ದ. ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಸಾೈಬರಕಟ್ಟೆ ಶಾಖೆಯಲ್ಲಿ ನಬಾರ್ಡ್ ಸಹಭಾಗಿತ್ವದಲ್ಲಿ ಜರುಗಿದ ಗ್ರಾಹಕರಿಗೆ ಆರ್ಥಿಕ ಅರಿವು ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸ್ವಸಹಾಯ ಸಂಘದ ಮೂಲಕ ಗ್ರಾಮ ಮತ್ತು ಮನೆಮನೆಗಳನ್ನು ತಲುಪಿ ಜನರ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದರು.
ದಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧಿಕಾರಿ ಕರುಣಾಕರ ದಾಸ್ ಮಾತನಾಡಿ, ಬ್ಯಾಂಕ್ ಗ್ರಾಹಕ ಮಹಿಳೆಯರ ಮೊಬೈಲಗಳಿಗೆ ಬರುವ ಹಣದ ಆಮಿಷದ ಮೇಸೆಜ್‍ಗೆ ಮರುಳಾಗಿ ಹಣ ಕಳೆದುಕೊಳ್ಳಬೇಡಿ ,ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಹೊರ ರಾಜ್ಯದ ಅಧಿಕಾರಿಗಳು ಇದ್ದು ಭಾಷೆಯ ತೊಡಕಾಗಿ ಜನರು ಸಂಕಷ್ಟ ಎದುರಿಸುತ್ತಿದ್ದಾರೆ . ನಮ್ಮ ಎಲ್ಲಾಶಾಖೆಯಲ್ಲಿ ಇಲ್ಲಿನ ಜನರೇ ಇದ್ದು ನಿಮ್ಮ ಆರ್ಥಿಕ ಸೇವೆಗೆ ಸಿದ್ಧರಿದ್ದೇವೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿನಿವೃತ್ತ ಬ್ಯಾಂಕ್ ಅಧಿಕಾರಿ ಸೀತಾರಾಮ ಮಡಿವಾಳ ಮಾತನಾಡಿ, ದಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಕರಾವಳಿ ಜಿಲ್ಲೆಯಲ್ಲಿ ಇದೀಗ ರಾಷ್ಟ್ರೀಕೃತ ಬ್ಯಾಂಕ್‍ಗೆ ಸರಿ ಸಮಾನವಾಗಿ ಠೇವಣಿ, ಭದ್ರತೆ ಮತ್ತು ಸೇವೆಯಲ್ಲಿದ್ದು ಸ್ವಸಹಾಯ ಸಂಘದ ಗ್ರಾಹಕರು ಮತ್ತು ಸಾರ್ವಜನಿಕರಿಗೆ ಅತೀ ಸರಳ ರೀತಿಯಲ್ಲಿ ಸಾಲ ನೀಡಿ ಗ್ರಾಹಕರ ಮನ ಗೆಲ್ಲುತ್ತಿದೆ ಎಂದರು.
ಶಿರಿಯಾರ ವ್ಯವಸಾಯ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವ ಠಾಣಾಧಿಕಾರಿ ಚಂದ್ರ ಶೇಖರ ಶೆಟ್ಟಿ, ದಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಉಡುಪಿ ವಲಯ ಮೇಲ್ವಿಚಾರಕ ರಾಜಾರಾಮ್ ಶೆಟ್ಟಿ, ಬಾರಕೂರು ಶಾಖಾ ವ್ಯವಸ್ಥಾಪಕ ಹಿರಿಯಣ್ಣ ಉಪಸ್ಥಿತರಿದ್ದರು. ಬ್ರಹ್ಮಾವರ ಶಾಖಾ ವ್ಯವಸ್ಥಾಪಕ ವರದರಾಜ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಸಾೈಬರಕಟ್ಟೆ ಶಾಖಾ ಸಿಬ್ಬಂದಿ ಮಿಥುನ್ ಮೊಗವೀರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.