Connect with us

Hi, what are you looking for?

Diksoochi News

ಕರಾವಳಿ

ಕೋಟ: ಗಿರಿ ಫ್ರೆಂಡ್ಸ್ ಚಿತ್ರಪಾಡಿ ಸಾಲಿಗ್ರಾಮ ವತಿಯಿಂದ ಗುರುವಂದನೆ, ಸಾಧಕರಿಗೆ ಗೌರವ

0

ವರದಿ : ದಿನೇಶ್ ರಾಯಪ್ಪನಮಠ

ಕೋಟ: ಗಿರಿ ಫ್ರೆಂಡ್ಸ್ ಚಿತ್ರಪಾಡಿ ಸಾಲಿಗ್ರಾಮ ಮತ್ತು ಚಿತ್ರಪಾಡಿ ಶಾಲೆಯ 93-94ರ 7ನೇ ತರಗತಿಯ ಹಳೆ ವಿದ್ಯಾರ್ಥಿಗಳ ಸಹಯೋಗದೊಂದಿಗೆ ಶಿಕ್ಷಕರ ದಿನಾಚರಣೆಯ ಅಂಗವಾಗಿ ಗುರುವಂದನೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಗಣೇಶ ಕೃಪಾ ಕಲ್ಯಾಣ ಮಂಟಪದಲ್ಲಿ ಭಾನುವಾರ ಜರುಗಿತು.
ಕಾರ್ಯಕ್ರಮವನ್ನು ಪ್ರಾಥಮಿಕ ಆರೋಗ್ಯ ಕೇಂದ್ರ ಸಾಲಿಗ್ರಾಮ ಇದರ ವೈದ್ಯಾಧಿಕಾರಿ ಡಾ.ರಾಘವೆಂದ್ರ ರಾವ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ
ಮಾತನಾಡಿದ ಅವರು, ಸರ್ವಪಲ್ಲಿ ರಾಧಕೃಷ್ಣನ್‍ರವರು ಹಲವಾರು ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿದ್ದು ಮಾತ್ರವಲ್ಲದೆ ಮೊದಲ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿ ಶಿಕ್ಷಣವನ್ನು ಪ್ರೀತಿಸುತ್ತಿದ್ದರು. ವಿದ್ಯೆ ನಮಗೆ ಸಂಸ್ಕಾರ ಗುಣ ಎಲ್ಲವನ್ನು ಕೊಡುತ್ತದೆ. ವಿದ್ಯೆ ಇಲ್ಲದಿದ್ದವನು ಕೂಡ ಇಂದಿನ ದಿನದಲ್ಲಿ ದುಡಿದು ಬೆಳೆಯುತ್ತಿದ್ದಾನೆ.ವಿದ್ಯಾರ್ಥಿಗಳು ಯಾವುದೇ ಕಾರಣಕ್ಕು ಗುರುಗಳನ್ನು ನಿಂದಿಸಬಾರದು ಹಾಗೂ ಗುರುಗಳು ಸಹ ಲಘುವಾಗಿರಬೇಕು. ಎಲ್ಲರಿಗೂ ತಿಳಿದಿರಬೇಕು ಕೋವಿಡ್ ಮಹಾಮಾರಿ ಇರುವ ಕಾರಣ ಸಾಮಾಜಿಕ ಅಂತರ ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಸುವುದು ಒಳ್ಳೆಯದು ಎಂದರು.
ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಗಾಗಿ ಎರ್ಪಡಿಸಿದ್ದ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಮತ್ತು2020-21ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡಾ 80ಕ್ಕಿಂತ ಅಧಿಕ ಅಂಕಗಳಿಸಿದ ಚಿತ್ರಪಾಡಿ ಶಾಲೆಯ ಹಳೆ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವುದರೊಂದಿಗೆ ಶಾಲೆಯಲ್ಲಿ ಸೇವೆ ಸಲ್ಲಿಸಿದ ನಿವೃತ್ತ ಮುಖ್ಯೊಪಾಧ್ಯರಾದ ಸಿದ್ದಯ್ಯ ಶೆಟ್ಟಿ ಹಾಗೂ ರಾಜೀವಿ ಯವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಗಿರಿ ಫ್ರೆಂಡ್ಸ್ ಚಿತ್ರಪಾಡಿ ಸಾಲಿಗ್ರಾಮ ಅಧ್ಯಕ್ಷ ರವಿ ಪೂಜಾರಿ,ಗೌರವಾಧ್ಯಕ್ಷ ನಾಗೆಂದ್ರ ಆಚಾರ್,ಸಂಚಾಲಕ ಸತ್ಯನಾರಯಣ ನಾೈರಿ,ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೊಪಾಧ್ಯಾಯಿನಿ ಜ್ಯೊತಿ,ಉದ್ಯಮಿಗಳಾದ ರಾಘವೆಂದ್ರ ಕೊಠಾರಿ ಚೆನ್ನೈ, ಸುಧಾಕರ ಬಂಗೇರ ಸಾಸ್ತನ, ಕಾರ್ಯದರ್ಶಿ ಸುನೀಲ್ ಕುಂದರ್, ಪ್ರಭಾಕರ ಗಾಣಿಗ, ಅರುಣ್ ಕುಂದರ್, ರಾಘವೇಂದ್ರ ಹೊಳ್ಳ, ಗಜೇಂದ್ರ, ಕ್ರಷ್ಣ, ಶ್ರೀಪತಿ, ಸಂತೋಷ್, ರಾಘವೇಂದ್ರ ದೇವಾಡಿಗ ಸರ್ವ ಸದಸ್ಯರು ಉಪಸ್ಥಿತರಿದ್ದರು. ಗಿರಿ ಪ್ರೆಂಢ್ಸ್ ಸಂಚಾಲಕ ಸತ್ಯನಾರಾಯಣ ನಾಯಿರಿ ಪ್ರಸ್ತಾವನೆ ಸಲ್ಲಿಸಿದರು. ಫ್ರೆಂಡ್ಸ್ ಕಾರ್ಯದರ್ಶಿ ಸುನಿಲ್ ಕುಂದರ್ ವಂದನೆ ಸಲ್ಲಿಸಿದರು. ಕಾರ್ಯಕ್ರಮವನ್ನು ಗಿರಿ ಪ್ರೆಂಡ್ಸನ ನಿಕಟ ಪೂರ್ವ ಅಧ್ಯಕ್ಷ ಸತೀಶ್ ಆಚಾರ್ ನಿರೂಪಿಸಿದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!