ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆದ ನಾಲ್ಕನೇ ಓವಲ್ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದೆ. ಭಾರತದ ಬೌಲರ್ ಗಳ ಕಠಿಣ ಹೋರಾಟದಿಂದ ಈ ಗೆಲುವು ಭಾರತಕ್ಕೆ ಒಲಿದಿದೆ.
ಇಂಗ್ಲೆಂಡ್ ನತ್ತ ವಾಲಿದ್ದ ಪಂದ್ಯವನ್ನು ಟೀಂ ಇಂಡಿಯಾದ ಬೌಲರ್ ಗಳು ತಮ್ಮ ಬಿಗಿಯಾದ ಬೌಲಿಂಗ್ ದಾಳಿ ನಡೆಸಿ ಪಂದ್ಯ ಭಾರತದ ಕಡೆಗೆ ತಿರುಗಿಸಿದರು. ಯಾರ್ಕರ್ ಕಿಂಗ್ ಬುಮ್ರಾ ಪ್ರಮುಖ 2 ವಿಕೆಟ್ ಗಳಾದ ಓಲಿ ಪೋಪ್ ಹಾಗೂ ಜಾನಿ ಬೈರ್ಸ್ಟೋ ವಿಕೆಟ್ ಪಡೆದು ಪಂದ್ಯದ ದಿಕ್ಕನೆ ಬದಲಿಸಿದರು. ಭಾರತ ತಂಡಕ್ಕೆ ಕಾಡುತ್ತಿದ್ದ ಇಂಗ್ಲೆಂಡ್ ನಾಯಕ ಜೋ ರೂಟ್ನನ್ನು ಶಾರ್ದೂಲ್ ಠಾಕೂರ್ ಔಟ್ ಮಾಡಿದರು. ಈ ಮೂಲಕ ಗೆಲುವು ಸಾಧಿಸುವಲ್ಲಿ ಭಾರತ ತಂಡ ಯಶಸ್ವಿಯಾಗಿದೆ.