ಒರಿಸ್ಸಾ ಕಡಲ ಕಿನಾರೆಯಲ್ಲಿ ಅರಳಿದ ವಿಷ್ಣುದಾದಾ ಮರಳು ಶಿಲ್ಪ
Published
0
ಚಂದನವನ: ಸೆಪ್ಟೆಂಬರ್ 18 ರಂದು ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ 71 ನೇ ಜನ್ಮ ದಿನಾಚರಣೆ. ಕನ್ನಡಿಗರ ಮನೆ, ಮನದಲ್ಲಿ ನೆಲೆಯಾಗಿರುವ ಸಾಹಸಸಿಂಹನ ಹೆಜ್ಜೆ ಗುರುತು ಒಡಿಸ್ಸಾದತ್ತಲೂ ಪಸರಿಸಿದೆ. ಹೌದು, ಒಡಿಸ್ಸಾದ ಮೆರೀನ್ ಡ್ರೈವ್ ಬೀಚ್ ನಲ್ಲಿ ಕೋಟಿಗೊಬ್ಬನ ಮರಳು ಶಿಲ್ಪ ರಚನೆಗೊಂಡಿದೆ. ಹೆಸರಾಂತ ಶಿಲ್ಪಿ ಮನೀಶ್ ಕುಮಾರ್ ಅವರು ಶಿಲ್ಪ ರಚಿಸಿದ್ದು, ವೀರಕಪುತ್ರ ಶ್ರೀನಿವಾಸ್ ಹಣಕಾಸು ವ್ಯವಸ್ಥೆ ಮಾಡಿದ್ದಾರೆ.
6 ಅಡಿ ಎತ್ತರ, 15 ಅಡಿ ಅಗಲದ ದಾದಾ ಮರಳು ಶಿಲ್ಪ ಇದೀಗ ಎಲ್ಲರ ಕಣ್ಮನ ಸೆಳೆಯುತ್ತಿದೆ.