ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಅಕ್ರಮ ಕೋವಿ ಹೊಂದಿದ್ದ ವ್ಯಕ್ತಿಯೊಬ್ಬನನ್ನು ಚೇರ್ಕಾಡಿ ಗ್ರಾಮದಲ್ಲಿ ಬಂಧಿಸಲಾಗಿದೆ. ಜಯಂತ ನಾಯ್ಕ(46) ಬಂಧಿತ ಆರೋಪಿ.
ಬ್ರಹ್ಮಾವರ ಠಾಣಾ ವ್ಯಾಪ್ತಿಯ ಚೇರ್ಕಾಡಿ ಗ್ರಾಮದ ಬೀಟ್ ಸಿಬ್ಬಂದಿ ಕೋವಿ ಪರಿಶೀಲನೆಯ ಸಮಯದಲ್ಲಿ ಚೇರ್ಕಾಡಿ ಗ್ರಾಮದ ಬಾಯರ್‌ಬೆಟ್ಟು, ಹಲಗೆ ಗುಂಡಿ ನಿವಾಸಿ ಜಯನಾಯ್ಕ SBML ಲೈಸನ್ಸ್ ಹೊಂದಿದ ಆಯುಧದೊಂದಿಗೆ ಅನಧೀಕೃತವಾಗಿ ಇನ್ನೊಂದು ಆಯುಧವನ್ನು ಹೊಂದಿದ ಬಗ್ಗೆ ಮಹತ್ವದ ಮಾಹಿತಿ ಪಡೆದ ಪೊಲೀಸರು, ಪೊಲೀಸ್ ವೃತ್ತ ನಿರೀಕ್ಷಕರಾದ ಅನಂತ ಪದ್ಮನಾಭರವರ ಮಾಗದರ್ಶನದಲ್ಲಿ ಬ್ರಹ್ಮಾವರ ಪೊಲೀಸ್ ಠಾಣಾ ಪಿ.ಎಸ್.ಐ ಗುರುನಾಥ ಹಾದಿಮನಿರವರು ಸಿಬ್ಬಂದಿಯವರೊಂದಿಗೆ ತೆರಳಿ ಮನೆಯನ್ನು ಶೋಧಿಸಿದಾಗ ಲೈಸನ್ಸ್ ಹೊಂದಿದ SBML ಕೋವಿಯೊಂದಿಗೆ ಅನಧಿಕೃತವಾಗಿ ಇನ್ನೊಂದು ಕೋವಿ ಹೊಂದಿರುವುದು ಪತ್ತೆಯಾಗಿದೆ.

ಲೈಸನ್ಸ್ ಹೊಂದಿದ SBML ಕೋವಿ ಹಾಗೂ ಅನಧಿಕೃತವಾಗಿ ಇಟ್ಟುಕೊಂಡಿದ್ದ ಇನ್ನೊಂದು ಕೋವಿ, 22 ಸೀಸದ ಬಾಲ್ಸ್ , 5 ಕೇಪು, ಚೂಪಾಗಿರುವ 7 ಸೀಸದ ಭಾಗಗಳು, ಒಂದು ಪ್ಲಾಸ್ಟಿಕ್
ಬಾಟಲಿಯಲ್ಲಿರುವ ಮಸಿ, ಚೆರಿಯನ್ನು ಹಾಗೂ ಆಯುಧ ಪರವಾನಿಗೆ ಸೇರಿದಂತೆ ಒಟ್ಟು 30,000 ಮೌಲ್ಯದ ವಸ್ತುಗಳನ್ನು ಆರೋಪಿಯಿಂದ ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅ.ಕ್ರ 170/2021 ಕಲಂ 3(1),25 ಶಸ್ತ್ರಾಸ್ತ್ರ ನಿಷೇಧ ಕಾಯಿದೆ ಮತ್ತು ಕಲಂ 420 ಐಪಿಸಿಯಂತೆ ಪ್ರಕರಣ ದಾಖಲಾಗಿದೆ. ಬ್ರಹ್ಮಾವರ ಪೊಲೀಸ್ ಠಾಣಾ ಮೇಲಿನ ಪ್ರಕರಣದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ವಿಷ್ಣುವರ್ಧನ , ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರಚಂದ್ರರವರ ಮಾರ್ಗದರ್ಶನದಂತೆ ಶ್ರೀ ಸುಧಾಕರ ನಾಯ್ಕ, ಪೊಲೀಸ್ ಉಪಾಧೀಕ್ಷಕರು, ಉಡುಪಿ ಉಪವಿಭಾಗರವರ ಹಾಗೂ ಅನಂತ ಪದ್ಮನಾಭ, ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕರ ರವರ ನಿರ್ದೇಶನದಂತೆ ಪತ್ತೆ ಹಚ್ಚಲಾಗಿದೆ. ಕಾರ್ಯಾಚರಣೆಯಲ್ಲಿ ಬ್ರಹ್ಮಾವರ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಗುರುನಾಥ ಬಿ ಹಾದಿಮನಿ ಅವರೊಂದಿಗೆ ಮಪಿಎಸ್‌ಐ, ಶ್ರೀಮತಿ ಸುನೀತಾ ಕೆ.ಆರ್, ಬ್ರಹ್ಮಾವರ ಪೊಲೀಸ್ ಠಾಣಾ ಸಿಬ್ಬಂದಿಗಳಾದ ಹೆಚ್.ಸಿ ಪ್ರವೀಣ್ ಶೆಟ್ಟಿಗಾರ್, ಹೆಚ್.ಸಿ ವೆಂಕಟರಮಣ ದೇವಾಡಿಗ, ಹೆಚ್.ಸಿ ಉದಯ ಅಮೀನ್, ಪಿ.ಸಿ ದಿಲೀಪ್, ಮಹೆಚ್‌ಸಿ ಸಬಿತ, ಮಹೆಚ್‌ಸಿ ಪುಷ್ಪಲ
ತಾ, ಚಾಲಕ ಅಣ್ಣಪ್ಪ ಮತ್ತು ಸಂತೋಷ ಕುಮಾರ್ ಮೊದಲಾದವರು ಭಾಗವಹಿಸಿದ್ದರು.