Connect with us

Hi, what are you looking for?

Diksoochi News

ಕರಾವಳಿ

ಕುಂದಾಪುರ : ನನ್ನ ವಿರುದ್ಧ ಮಾಡಲಾದ ಅಪಪ್ರಚಾರಗಳಿಗೆ ಕಾನೂನು ಹೋರಾಟ ನಡೆಸುವೆ: ಶ್ರೀಮತಿ ಬಾಳಿಕೆರೆ

0

ವರದಿ : ದಿನೇಶ್ ರಾಯಪ್ಪನಮಠ

ಕುಂದಾಪುರ: ಕಳೆದ ನಾಲ್ಕು ವರ್ಷಗಳಿಂದ ಸ್ಥಳೀಯ ಗ್ರಾ.ಪಂ ಸದಸ್ಯನೋರ್ವ ನಿರಂತರವಾಗಿ ಮಾನಸಿಕ ಕಿರುಕುಳ ನೀಡುತ್ತಿದ್ದು, ಇದೀಗ ಆತನ ಸಹೋದರನ ಜೊತೆಗೂಡಿ ನನ್ನ ಕುರಿತು ಆಧಾರ ರಹಿತ ಆರೋಪಗಳನ್ನು ಮಾಧ್ಯಮವೊಂದಕ್ಕೆ ನೀಡಿ ನನ್ನನ್ನು ತೇಜೋವಧೆ ಮಾಡಿದ್ದಾರೆ. ನನ್ನ ವಿರುದ್ದ ಅಪಪ್ರಚಾರ ನಡೆಸಿದ ಎಲ್ಲರ ವಿರುದ್ದವೂ ಕಾನೂನು ಹೋರಾಟ ನಡೆಸುತ್ತೇನೆ ಎಂದು ಕಟ್ಬೇಲ್ತೂರು ಗ್ರಾ.ಪಂನಲ್ಲಿ ಉದ್ಯೋಗ ಮಿತ್ರ ಕೆಲಸ ನಿರ್ವಹಿಸುತ್ತಿರುವ ಶ್ರೀಮತಿ ಬಾಳಿಕೆರೆ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಶನಿವಾರ ಇಲ್ಲಿನ ಬಗ್ವಾಡಿ ಸಮೀಪದಲ್ಲಿರುವ ಗಣಪತಿ ಕಟ್ಟೆ ಬಳಿಯ ಸಮುದಾಯ ಭವನದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

Advertisement. Scroll to continue reading.

ರಾಮ ಶೆಟ್ಟಿ ಎನ್ನುವ ಪಂಚಾಯತ್ ಸದಸ್ಯ ಕಳೆದ ನಾಲ್ಕು ವರ್ಷಗಳಿಂದಲೂ ನನ್ನ ವಿರುದ್ದ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾ ನ್ಯಾಯಯುತವಾಗಿ ನನಗೆ ಹಾಗೂ ನನ್ನ ಕುಟುಂಬಕ್ಕೆ ಸಿಗಬೇಕಾದ ಸರ್ಕಾರಿ ಯೋಜನೆಗಳಿಗೆ ಅಡ್ಡಗಾಲು ಹಾಕುತ್ತಾ ಬಂದಿದ್ದಾನೆ. ಇದುವರೆಗೂ ಅವರು ನನ್ನ ವಿರುದ್ದ ನಡೆಸಲಾದ ಎಲ್ಲಾ ಅಪಪ್ರಚಾರಗಳನ್ನು ಸಹಿಸಿಕೊಂಡು ಬಂದಿರುವೆ. ಇದೀಗ ನನ್ನ ವಿದ್ಯಾರ್ಹತೆಯನ್ನು ಪ್ರಶ್ನಿಸಿ ಸ್ಥಳೀಯ ಖಾಸಗಿ ಚಾನೆಲ್ ಒಂದಕ್ಕೆ ಸುಳ್ಳು ಮಾಹಿತಿಗಳನ್ನು ನೀಡಿ ನನ್ನ ತೇಜೋವಧೆಗೆ ಮುಂದಾಗಿದ್ದಾರೆ. ಮಾಧ್ಯಮದಲ್ಲಿ ನನ್ನ ವಿರುದ್ದ ಬಂದಿರುವ ಎಲ್ಲಾ ಮಾಹಿತಿಗಳು ಸಂಪೂರ್ಣ ಸುಳ್ಳು. ನಾನು ನಾಲ್ಕನೇ ತರಗತಿ ತನಕ ಮಾತ್ರ ಕಲಿತಿದ್ದೇನೆ ಎನ್ನುವುದಾಗಿ ಹೇಳಿಕೆ ನೀಡಿದ್ದಾರೆ. ನಾನು ಏಳನೇ ತರಗತಿಯ ತನಕವೂ ವ್ಯಾಸಂಗ ಮಾಡಿದ್ದೇನೆ. ಏಳನೇ ತರಗತಿ ತನಕ ನನ್ನ ಜೊತೆಗಿದ್ದ ನನ್ನ ಸಹಪಾಠಿಗಳ ಹೆಸರನ್ನೂ ನಾನು ಹೇಳಬಲ್ಲೆ. ಇದೀಗ ಕಳೆದ ಕೆಲ ವರ್ಷಗಳ ಹಿಂದೆ ನಾನು ಎಸ್ಎಸ್ಎಲ್ಸಿ ಪರೀಕ್ಷೆ ಕಟ್ಟಿ ತೇರ್ಗಡೆಯಾಗಿದ್ದೇನೆ. ನನ್ನ ವಿದ್ಯಾರ್ಹತೆಯ ದಾಖಲೆಗಳೆಲ್ಲವೂ ನನ್ನ ಬಳಿ ಇವೆ. ಯಾರೂ ಬಂದು ನೋಡಿದರೂ ನೋಡಬಹುದು ಎಂದು ಶ್ರೀಮತಿ ಬಾಳಿಕೆರೆ ಮಾಧ್ಯಮಗಳಿಗೆ ತಮ್ಮ ವಿದ್ಯಾರ್ಹತೆಯ ದಾಖಲೆಗಳನ್ನು ಪ್ರದರ್ಶಿಸಿದರು.

ನನ್ನ ವಿರುದ್ದ ಮಾಡಲಾದ ಅಪಪ್ರಚಾರಗಳಿಂದ ಮನನೊಂದು ಮನೆಯಲ್ಲೇ ಕೂತಿದ್ದೇನೆ. ಇಬ್ಬರು ಹೆಣ್ಣು ಮಕ್ಕಳೊಂದಿಗೆ ಕಷ್ಟದ ಜೀವನ ಸಾಗಿಸುತ್ತಿದ್ದೇನೆ. ಕಷ್ಪಪಟ್ಟು ಬ್ಯಾಂಕ್ ಲೋನ್ ಮಾಡಿ ಪುಟ್ಟದೊಂದು ಮನೆ ಕಟ್ಟಿಸಿಕೊಂಡಿದ್ದೇನೆ. ನನ್ನ ವಿರುದ್ದ ಮಾನಹಾನಿಕಾರ ಸುದ್ದಿ ಪ್ರಕಟಿಸಿದ ಬಳಿಕ ನನ್ನ ಎರಡು ಹೆಣ್ಣು ಮಕ್ಕಳು ಮನೆಯಿಂದ ಹೊರಗಡೆ ಹೋಗುತ್ತಿಲ್ಲ ಎಂದು ಕಣ್ಣಿರು ಹಾಕಿದರು.

ಹೆಮ್ಮಾಡಿ ಪಂಚಾಯತ್ ಇರುವ ಸಂದರ್ಭ ಕಳೆದ ಹದಿನಾಲ್ಕು ವರ್ಷಗಳಿಂದ ಉದ್ಯೋಗ ಮಿತ್ರ ಕೆಲಸ ಮಾಡಿಕೊಂಡು ಬಂದಿದ್ದೇನೆ. ಇದು ವರ್ಷಕ್ಕೆಕೇವಲ ನೂರು ದಿನ ಮಾತ್ರ ಕೆಲಸ ಇದ್ದುದರಿಂದ ಜೀವನ ನಿರ್ವಹಣೆಗೆ ಕಳೆದ ಕೆಲ ವರ್ಷಗಳಿಂದ ಆಶಾ ಕಾರ್ಯಕತರ್ೆಯಾಗಿಯೂ ಸೇವೆ ಸಲ್ಲಿಸುತ್ತಿದ್ದೇನೆ. ಪಂಚಾಯತ್ ಸದಸ್ಯ ನನಗೆ ನಿರಂತರವಾಗಿ ಕಿರುಕುಳ ಕೊಡುತ್ತಿರುವ ಬಗ್ಗೆ ಹಿಂದೊಮ್ಮೆ ಬೈಂದೂರು ಶಾಸಕ ಬಿ.ಎಂ ಸುಕುಮಾರ್ ಶೆಟ್ಡಿಯವರ ಮನೆಗೆ ತೆರಳಿ ನನ್ನ ಕಷ್ಟಗಳನ್ನು ಹೇಳಿಕೊಂಡೆ. ಓರ್ವ ಶಾಸಕರಾದವರು ನನ್ನ ಕಷ್ಟಗಳಿಗೆ ಸ್ಪಂದಿಸುವ ಬದಲು ಪಂಚಾಯತ್ ಸದಸ್ಯ ಮಾಡುವ ಅನಾಚಾರಗಳನ್ನು ಸಮರ್ಥಿಸಿಕೊಂಡರು. ಹಿಂದಿನ ಅವಧಿಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಗ್ರಾ.ಪಂ ಆಡಳಿತ ನಡೆಸುತ್ತಿದ್ದಾಗ ನಾಣು ಅವರಿಂದ ಮನೆ ನಿಮರ್ಾಣದ ಕುರಿತಂತೆ ಕೆಲವು ಕೆಲಸಗಳನ್ನು ಮಾಡಿಕೊಂಡಿದ್ದೆ. ಇದೇ ಕಾರಣಕ್ಕೆ ನಾನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತೆ ಎಂದು ಜರಿದರು. ಈಗ ಬಿಜೆಪಿ ಬೆಂಬಲಿತ ಸದಸ್ಯರು ಆಡಳಿತದಲ್ಲಿದ್ದಾರೆ. ಅವರಲ್ಲಿಯೂ ನಾನು ಸಹಾಯ ಕೇಳುತ್ತೇನೆ. ಆಡಳಿತ ಪಕ್ಷದಲ್ಲಿರುವ ಸದಸ್ಯರ ಬಳಿ ಸಹಾಯ ಕೇಳುವುದರಲ್ಲಿ ತಪ್ಪೇನಿದೆ. ಎರಡೆರಡು ಕೆಲಸ ನಿನಗ್ಯಾಕೆ ಎಂದು ಶಾಸಕರು ನನ್ನನ್ನು ಪ್ರಶ್ನೆ ಮಾಡುತ್ತಾರೆ. ನನ್ನ ಕೆಲಸದ ಬಗ್ಗೆ ಈ ರೀತಿ ಪ್ರತಿಕ್ರಿಯಿಸುವ ಶಾಸಕರು ಅವರದ್ದೇ ಅಧೀನದಲ್ಲಿ ನಡೆಯುವ ಶಾಲೆಯಲ್ಲೇ ದೈಹಿಕ ಶಿಕ್ಷಕರಾಗಿ ಅದೇ ಪಂಚಾಯತ್ ಸದಸ್ಯನನ್ನು ಸೇರಿಸಿಕೊಂಡಿರುವುದು ಹಾಸ್ಯಾಸ್ಪದ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀಮತಿ ಬಾಳಿಕೆರೆ ಪುತ್ರಿ ಪ್ರೇಕ್ಷಾ ಹಾಗೂ ಅಕ್ಕ ಗಿರಿಜಾ, ಮೊಗವೀರ ರಕ್ಷಣಾ ವೇದಿಕೆಯ ಜಿಲ್ಲಾ ಸಂಚಾಲಕ ಚಂದ್ರ ಕಂಡ್ಲೂರು, ಗ್ರಾಮಸ್ಥರಾದ ಚಂದ್ರ ಮೊಗವೀರ, ದಿನೇಶ್ ಮೊಗವೀರ, ಜೈಕನರ್ಾಟಕ ಮೀನು ವ್ಯಾಪರಸ್ಥರ ಸಹಕಾರಿ ಸಂಘದ ಅಧ್ಯಕ್ಷ ಆರ್. ಮಂಜುನಾಥ್ ಬಾಳಿಕೆರೆ ಇದ್ದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!