Connect with us

Hi, what are you looking for?

Diksoochi News

ಕರಾವಳಿ

ಕ್ಯಾನ್ಸರ್ ನಿಂದ ಬಳಲುತ್ತಿರುವ ದೈಹಿಕ ಶಿಕ್ಷಕರಿಗೆ ಬೇಕಿದೆ ನಿಮ್ಮ ಸಹಾಯ ಹಸ್ತ

0

ವರದಿ : ಬಿ.ಎಸ್.ಆಚಾರ್ಯ

ಬ್ರಹ್ಮಾವರ : ಸುರೇಶ್ ಶೆಟ್ಟಿ ಗಿಳಿಯಾರು ಇವರು ಉಡುಪಿ ದೈಹಿಕ ಶಿಕ್ಷಣ ಕ್ಷೇತ್ರದಲ್ಲಿ ಚಿರಪರಿಚಿತರಾಗಿದ್ದು,
ಪ್ರಸ್ತುತ ಸುರೇಶಶೆಟ್ಟಿ ಶ್ರೀ ವಿದ್ಯೇಶ ವಿದ್ಯಾಮಾನ್ಯ ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆ ಹೇರಾಡಿ ಬಾರ್ಕೂರಿನಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಸುದೀರ್ಘ ಹದಿನಾರು ವರ್ಷಗಳ ಕಾಲ ವಿದ್ಯಾರ್ಥಿಗಳನ್ನು ತರಬೇತುಗೊಳಿಸಿ ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡಿರುತ್ತಾರೆ. ಜಿಲ್ಲಾ ಅತ್ಯುತ್ತಮ ಪ್ರಶಸ್ತಿ ಪುರಸ್ಕೃತರೂ ಹೌದು. ಕೇವಲ ತನ್ನ ಕ್ಷೇತ್ರದ ಸಾಧನೆಗೆ ಮಾತ್ರ ಇವರ ಹೆಸರು ಸೀಮಿತವಲ್ಲ, ಕಾರುಣ್ಯಮಯಿ ಅಂತಃಕರಣಕ್ಕೂ ಹೆಸರುವಾಸಿ. ಯಾರೇ ಕಷ್ಟವೆಂದರು ಮರೆಯಲ್ಲಿ ನಿಂತು ಸಹಾಯ ಮಾಡಿ ಪ್ರಚಾರ ಬಯಸದ ವ್ಯಕ್ತಿತ್ವ. ಅವರಿಂದ ಸಹಾಯ ಪಡೆದವರದೆಷ್ಟೊ ಮಂದಿ.
ದೈಹಿಕವಾಗಿ, ಮಾನಸಿಕವಾಗಿ ಸದೃಢವಾಗಿ ಇರುವಾಗಲೇ ಸುರೇಶ್ ಶೆಟ್ಟಿಯವರ ಆರೋಗ್ಯಕ್ಕೆ ಅನಿರೀಕ್ಷಿತವಾಗಿ 2015 ರಂದು ಸುನಾಮಿ ರೂಪದಲ್ಲಿ ರಕ್ತದ ಕ್ಯಾನ್ಸರ್ ಅಪ್ಪಳಿಸಿದೆ. ಆಗ ಧೃತಿಗೆಡದೆ ಚಿಕಿತ್ಸೆಯನ್ನು ಪಡೆದು 2018ಕ್ಕೆ ಸಂಪೂರ್ಣ ಗುಣಮುಖರಾಗುತ್ತಾರೆ. ಈ ಸಂದರ್ಭದಲ್ಲಿ ಸುಮಾರು 30 ಲಕ್ಷಕ್ಕೂ ಮಿಕ್ಕಿ ಚಿಕಿತ್ಸಾ ವೆಚ್ಚವನ್ನು ಯಾರ ಬಳಿಯೂ ಕೈ ಚಾಚದೆ ಕೇವಲ ಹತ್ತಿರದ ಸಂಬಂಧಿಗಳು ಹಾಗೂ ಸ್ವತಃ ಸಾಲದ ರೂಪದಲ್ಲಿ ಪಡೆದು ಚಿಕಿತ್ಸಾ ವೆಚ್ಚವನ್ನು ಭರಿಸಿ ಕೊಂಡಿರುತ್ತಾರೆ.
ಆದರೆ ವಿಧಿಲಿಖಿತ 2021 ಅಗಸ್ಟ್ ನಲ್ಲಿ ಪುನಃ ಅದೇ ಖಾಯಿಲೆ ಮರುಕಳಿಸಿದ್ದು, ಚಿಕಿತ್ಸೆ ಆರಂಭಗೊಂಡಿದೆ. ಈಗಾಗಲೇ ಸುಮಾರು ಐದು ಲಕ್ಷಕ್ಕೂ ಮಿಕ್ಕಿ ಚಿಕಿತ್ಸಾ ವೆಚ್ಚವಾಗಿರುತ್ತದೆ, ಅದನ್ನು ಸ್ವತಃ ಬರಿಸಿಕೊಂಡಿರುತ್ತಾರೆ. ಈಗ ಮುಂದಿನ ಚಿಕಿತ್ಸೆಗಾಗಿ ಬೆಂಗಳೂರಿನ HCG ಆಸ್ಪತ್ರೆಗೆ ದಾಖಲಾಗಿದ್ದು ಇದರ ವೆಚ್ಚವು 25ರಿಂದ 30ಲಕ್ಷಕ್ಕೂ ಮೀರಿರುತ್ತದೆ. ಆದರೆ ಇದನ್ನು ಬರಿಸುವ ಸ್ಥಿತಿಯಲ್ಲಿ ಇವರ ಕುಟುಂಬ ಇರುವುದಿಲ್ಲ. ಆದ್ದರಿಂದ ಅವರು ಕುಟುಂಬ ಧೈನ್ಯವಾಗಿ ಸಹಾಯಕ್ಕಾಗಿ ಬೇಡಿಕೊಂಡಿರುತ್ತಾರೆ.
ಅವರು ಬೇಗನೆ ಗುಣಮುಖರಾಗಿ ನಮ್ಮೊಂದಿಗೆ ಲವಲವಿಕೆಯಿಂದ ಬಾಳುವ ಜೀವನ ಅವರದಾಗಲಿ ಎಂದು ಹೃದಯಪೂರ್ವಕವಾಗಿ ಹಾರೈಸೋಣ. ನಮ್ಮ ಕಿರು ಕಾಣಿಕೆ ನೀಡೋಣ.
ನಿಮ್ಮ ಒಂದೊಂದು ರೂಪಾಯಿಯು ಒಂದು ಜೀವ ಹಾಗೂ ಒಂದು ಕುಟುಂಬ ಉಳಿಸುವಲ್ಲಿ ಬಹಳ ಸಹಾಯವಾಗುತ್ತದೆ. ಗುಣಮುಖವಾದ ನಂತರ ಇವರಿಂದ ಇನ್ನೊಂದು ಜೀವ, ಜೀವನಕ್ಕೆ ಸಹಾಯ ಆಗುವುದರಲ್ಲಿ ಅನುಮಾನ ಬೇಡ. ಕೇವಲ ಧನಸಹಾಯ ಮಾತ್ರವಲ್ಲ ನಿಮ್ಮ ಪ್ರಾರ್ಥನೆಯಲ್ಲೂ ಇವರ ಹೆಸರಿರಲಿ.

ಧನಸಹಾಯ ಮಾಡಲಿಚ್ಛಿಸುವ ಸಹೃದಯಿಗಳು ಕೆಳಗಿನ ಬ್ಯಾಂಕ್ ಖಾತೆಗೆ ಜಮಾ ಮಾಡಬಹುದು.
Name: Suresh Shetty
Account number: 4792500101719701
IFSC: KARB0000479
Branch name: Mannnagudda, Mangaluru

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!