ವರದಿ :ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಬಾರಕೂರು ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದಲ್ಲಿ 54ನೇ ವರ್ಷದ ಶ್ರೀ ಗಣೇಶೋತ್ಸವ ಸಮಿತಿಯಿಂದ ದೇವಸ್ಥಾನದ ಗಣಪತಿ ಗುಡಿಯಲ್ಲಿ ಶನಿವಾರ ಜರುಗಲಿದೆ.
ಶನಿವಾರ ಬೆಳಿಗ್ಗೆ 8ಕ್ಕೆ ಗಣೇಶ ವಿಗ್ರಹ ಪ್ರತಿಷ್ಠಾಪನೆ , ಬಳಿಕ ಗಣಹೋಮ ಮಧ್ಯಾಹ್ನ 12-30 ಕ್ಕೆ ಮೂಡುಗಣಪತಿ ಸೇವೆ. ಮಹಾಪೂಜೆ, ಸಂತರ್ಪಣೆ , ಸಂಜೆ ರಂಗಪೂಜೆ ,ವಿಸರ್ಜನಾ ಪೂಜೆ ,ಬಳಿಕ ಬಟ್ಟೆವಿನಾಯಕ ದೇವಸ್ಥಾನ ಕೋಟೆಕೆರೆಯಲ್ಲಿ ಗಣೇಶ ಮೂರ್ತಿ ಜಲಸ್ತಂಭನಗೊಳ್ಳಲಿದೆ.
ಗಮನ ಸೆಳೆಯುತ್ತಿದೆ ಮೂರ್ತಿ:
ಗಣೇಶೋತ್ಸವ ದ ಗಣಪತಿ ಮೂರ್ತಿಯನ್ನು ಉತ್ತರ ಕನ್ನಡ ಜಿಲ್ಲೆಯ ಕರ್ಕಿ ಸುರೇಶ ಭಂಡಾರಿಯವರು ನಿರ್ಮಿಸಿದ್ದು ಅವರ ಕಲಾ ಕೇಂದ್ರದಲ್ಲಿರುವ ಮುದಿ ವಯಸ್ಸಿನ ವ್ಯಕ್ತಿಯ ಚಿತ್ರವನ್ನು ಕಂಡ ಬಾರಕೂರು ಶ್ರೀ ಪಟ್ಟಾಭಿರಾಮ ಚಂದ್ರ ದೇವಸ್ಥಾನದ ಗಣೇಶೋತ್ಸವ ಸಮಿತಿಯ ಪಧಾದಿಕಾರಿಗಳು ಅದನ್ನು ತಂದಿದ್ದಾರೆ. ಇಂದು ಇಲ್ಲಿ ನಡೆಯುವ ಕಾರ್ಯ ಕ್ರಮದ ಒಂದು ಭಾಗದಲ್ಲಿ ಎತ್ತರವಾದ ಪೀಠವನ್ನು ರಚಿಸಿ ಅದಕ್ಕೊಂದು ಸಂದೇಶದ ಪದವನ್ನು ಬರೆದು ಸಾರ್ವಜನಿಕರಿಗೆ ಒಂದು ಉತ್ತಮ ಸಂದೇಶ ನೀಡಿದ್ದಾರೆ. ಮುದಿ ವಯಸ್ಸಿನವರನ್ನು ನಿರ್ಲಕ್ಷ ಮಾಡದಿರಿ ಎನ್ನುವ ಸಂದೇಶವನ್ನು ಬರೆದು ಎರಡು ಭಾಗದಲ್ಲಿ ಬೆಳಕಿನ ವ್ಯವಸ್ಥೆಯನ್ನು ಮಾಡಿದ್ದಾರೆ. ಶುಕ್ರವಾರ ಸಂಜೆ ಉಡುಪಿ ಶ್ರೀ ಲಕ್ಮೀ ವೆಂಟೇಶ ಮಹಿಳಾ ಕಲಾರಂಗ ಇವರಿಂದ ಮುಂಡಾಶಿ ಶ್ವೇತಾ ಸುಧಾ ಪೈ ಪ್ರಸ್ತುತಿಯಲ್ಲಿ ಹುಬ್ಳಿ ಹೊಳೆಮಾ ಕೊಂಕಣಿ ನಾಟಕ ಜರುಗಿತು. ಬಂದವರನ್ನು ಮೂರ್ತಿ ವಿಶೇಷವಾಗಿ ಗಮನ ಸೆಳೆದಿದೆ