Connect with us

Hi, what are you looking for?

Diksoochi News

ಕರಾವಳಿ

ದಿಕ್ಸೂಚಿ ನ್ಯೂಸ್ ವಿಶೇಷ ವರದಿ : 158 ವರ್ಷಗಳ ಪುರಾತನ ಮನೆಯಾಗಿದೆ ದಂತ ಚಿಕಿತ್ಸಾಲಯ!

0

ವರದಿ : ಬಿ.ಎಸ್.ಆಚಾರ್ಯ

ಬ್ರಹ್ಮಾವರ : 158 ವರ್ಷಗಳ ಪುರಾತನ ವಿಶಿಷ್ಟ ವಿನ್ಯಾಸ ರಚನೆಯಿಂದ ನಿರ್ಮಾಣವಾದ ಮನೆಯೊಂದು 55 ವರ್ಷಗಳಿಂದ ಖಾಸಗಿ ಔಷಧಾಲಯವಾಗಿದ್ದು, ಈಗ ಪ್ರಸಿದ್ಧ ದಂತ ಚಿಕಿತ್ಸಾಲಯವಾಗಿಯೂ ಆಗಿದೆ.
ಹೌದು, ಇದು ದೇವಾಲಯಗಳ ನಗರ ಬಾರಕೂರು ರಥ ಬೀದಿಯಲ್ಲಿ ಇರುವ 158 ವರ್ಷದ ಹಳೆ ಮನೆ.
ಆದರೆ ಇದು ಉಡುಪಿ ಭಾಗದಲ್ಲಿ ಪ್ರಥಮವಾಗಿ ರೂಪುಗೊಂಡ ವೈದ್ಯಾಲಯ.

ಶಂಕರನಾರಾಯಣದ ಡಾ. ಶೇಷಗಿರಿ ರಾವ್
ಮದರಾಸಿನಲ್ಲಿ ಜಿಸಿಐ ಎಂ ಎನ್ನುವ ವ್ಯೆದ್ಯ
ವಿಜ್ಞಾನ ಪದವಿ ಮುಗಿಸಿ ಬಾರ್ಕೂರು ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ 10 ವರ್ಷ ಉತ್ತಮ ಸೇವೆ ನೀಡಿ ಬೇರೆ ದೂರದ ಊರಿಗೆ ವರ್ಗಗೊಂಡಾಗ, ಊರ ಜನತೆ ಅವರನ್ನು ಅಲ್ಲೇ ಉಳಿಯುವಂತೆ ಮನವಿ ಮಾಡಿದ ಫಲವಾಗಿ ಸಹಸ್ರಾರು ಮಂದಿಗೆ ಈ ಮನೆ ಆರೋಗ್ಯ ಭಾಗ್ಯ ಕರುಣಿಸಿದ ಧನ್ವಂತರಿಯಾಗಿದೆ.
ಇದೇ ಮನೆಯಲ್ಲಿ ಬಾಲ್ಯವನ್ನು ಕಳೆದ ಡೆಂಟಲ್ ಸರ್ಜನ್ ಡಾ ವೆಂಕಟ್ರಾಜ್ ತಂದೆಯವರ ಕ್ಲಿನಿಕ್‍ನ ಒಂದು ಭಾಗದಲ್ಲಿ 45 ವರ್ಷದಿಂದ ಡೆಂಟಲ್ ಸರ್ಜರಿಯಲ್ಲಿ ಫೆಮಸ್ ಆಗಿದ್ದು, 10 ವರ್ಷದ ಹಿಂದೆ ಮೃತರಾದ ತಂದೆಯವರ ಅದೇ ಜಾಗದಲ್ಲಿ ಇದ್ದಾರೆ.

Advertisement. Scroll to continue reading.
ಡಾ.ವೆಂಕಟ್ರಾಜ್

ಇದೊಂದು ವಿಶಿಷ್ಠ ವಿನ್ಯಾಸದ ಮನೆ :

ಕೇವಲ ಮೂರು ಸೆಂಟ್ಸ್ ಜಾಗದಲ್ಲಿ ಮಹಡಿ, ಸ್ನಾನಗೃಹ ಸೇರಿದಂತೆ 8 ಪುಟ್ಟ ಪುಟ್ಟಕೋಣೆಗಳಿದೆ. ಎರಡು ಕಡೆಯಲ್ಲಿ ಹಿತ್ತಿಲ ಬಾಗಿಲು ಇದ್ದು, ನಾಲ್ಕು
ಭಾಗದಿಂದ ಮಳೆ ನೀರು ಬೀಳುವ ವ್ಯವಸ್ಥೆ ಇದೆ.
ಮಹಡಿಯಲ್ಲಿ ಮೂರು ಕೋಣೆ. ಮಹಡಿಯ ಮೆಟ್ಟಿಲ
ಅಡಿ 5\7 ಅಡಿಯ ಆಹಾರ ಶೇಖರಣೆ ಕೋಣೆ.
ಪ್ರಧಾನ ದ್ವಾರವೂ ಸೇರಿದಂತೆ ಬಾಗಿಲುಗಳೆಲ್ಲವೂ ಸಣ್ಣದು. ಹಾಗಾಗಿ ತಲೆ ತಗ್ಗಿಸಿಯೇ ಹೋಗಬೇಕು. ಎರಡು ಅಡಿ ಅಗಲ ಮಣ್ಣಿನ ಗೋಡೆ ಮರದ ಪಕ್ಕಾಸು, ಹೆಂಚಿನ ಈ ಮನೆಗೆ ಬಾರ್ಕೂರಿಗೆ ಕರೆಂಟ್ ಹೊಂದಿದ ಮೊದಲ ಮನೆ. ದೊಡ್ಡ ಸ್ವಿಚ್ ಬೋರ್ಡ್. 60 ವರ್ಷದ ಹಿಂದಿನ ಗೋಡೆ ಗಡಿಯಾರ ಇಂದಿಗೂ ಸರಿಯಾದ ಸಮಯವನ್ನು ನೀಡುತ್ತಿದೆ.
ಇಂದಿಗೂ ಈ ಭಾಗದ ಜನರು ಆರೋಗ್ಯ ಹದಗೆಟ್ಟಾಗ
ಇಲ್ಲಿಗೆ ಬಂದವರು ಗುಣ ಮುಖರಾಗುವುದರ ಹಿಂದೆ
ವೈದ್ಯರ ಚಿಕಿತ್ಸೆಯ ಜತೆಗೆ, ಕಟ್ಟಡದ ವಿನ್ಯಾಸದ ಪ್ರಭಾವದಿಂದ ಪ್ರಶಾಂತ ತೆ ಮತ್ತು ಪ್ರಪುಲ್ಲತೆ ನೀಡುತ್ತಿದೆ ಎನ್ನಲಾಗಿದೆ.

ಕೆಲವು ವರ್ಷದ ಹಿಂದೆ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಬಂದು ಇದರ ವಿನ್ಯಾಸವನ್ನು ದಾಖಲು ಮಾಡಿಕೊಂಡು ಹೋಗಿದ್ದು 158 ವರ್ಷದ ಈ ಮನೆ ಇನ್ನೂ ನವಚೈತನ್ಯದೊಂದಿಗೆ ಇದ್ದು 3 ತಲೆಮಾರುಗಳ ಸಹಸ್ರಾರು ಜನರ ಆರೋಗ್ಯ ಕೇಂದ್ರವಾಗಿದೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!