ಬೆಳಗಾವಿ: ಕಳೆದ ಎರಡು ಮೂರು ದಿನಗಳಿಂದ ಸುರಿಯುತ್ತಿರುವಂತ ಭಾರೀ ಮಳೆಯಿಂದಾಗಿ, ನಿನ್ನೆ ತಡರಾತ್ರಿ ಮನೆ ಕುಸಿಸಲದು, ಕೂದಲೆಳೆ ಅಂತರದಲ್ಲಿ 8 ಜನರು ಪಾರಾಗಿರುವ ಘಟನೆ ಬೆಳಗಾವಿಯ ಅಗಸಗಿ ಗ್ರಾಮದಲ್ಲಿ ನಡೆದಿದೆ.
ಅಗಸಗಿ ಗ್ರಾಮದ ಕಲ್ಮೇಶ್ವರ ಗಲ್ಲಿಯಲ್ಲಿ ಬಾಳು ಕಡೋಲ್ಕರ್ ಹಾಗೂ ಬಸವಣ್ಣಿ ಕಡೋಲ್ಕರ್ ಸಹೋದರರ ಮನೆ ಕುಸಿದಿದೆ. ನಿನ್ನೆ ತಡ ರಾತ್ರಿ 8 ಜನರು ಮಲಗಿದ್ದಂತ ಸಂದರ್ಭದಲ್ಲಿ ಮನೆಯ ಛಾವಣಿ ಕುಸಿತದ ಶಬ್ದ ಕೇಳಿದೆ. ಇದರಿಂದ ಕೂಡಲೇ ಎಚ್ಚರಗೊಂಡ 8 ಜನರು, ಮನೆಯಿಂದ ಮಕ್ಕಳನ್ನು ಸೇರಿದಂತೆ ಎಲ್ಲರೂ ಓಡಿ ಹೊರ ಬಂದಿದ್ದಾರೆ. ಬಳಿಕ ಮನೆ ಕುಸಿದಿದ್ದು, ಅಪಾಯ ತಪ್ಪಿದೆ.
ಒಂದು ವಾರದ ಹಿಂದಷ್ಟೇ ಬೆಳಗಾವಿಯ ಬಡಲ ಅಂಕಲಗಿ ಗ್ರಾಮದಲ್ಲಿ ಗೋಡೆ ಕುಸಿತದಿಂದ ಒಂದೇ ಕುಟುಂಬದ ಏಳು ಸದಸ್ಯರು ಧಾರುಣವಾಗಿ ಸಾವನ್ನಪ್ಪಿದ್ದರು.
Advertisement. Scroll to continue reading.