Connect with us

Hi, what are you looking for?

Diksoochi News

ಕರಾವಳಿ

ಕೋಟ : ಬ್ಲಾಕ್ ಕಾಂಗ್ರೆಸ್ ನಿಂದ ಬೃಹತ್ ಪಂಜಿನ ಮೆರವಣಿಗೆ

0

ವರದಿ : ದಿನೇಶ್ ರಾಯಪ್ಪನಮಠ


ಕೋಟ: ಬಿಜೆಪಿ ಹಿಂದುತ್ವದ ಆಧಾರದ ಮೇಲೆ ಹಿಂದುಳಿಗಳ ಓಟು ಪಡೆದು ಅಧಿಕಾರಕ್ಕೆ ಬಂದಿದೆ ಆದರೆ ಹಿಂದೂ ವಿರೋಧಿ ನೀತಿ ಅನುಸರಿಸಿದೆ ಎಂದು ಕೊಪ್ಪ ಕೆಪಿಸಿಸಿ ಮಾಧ್ಯಮ ವಕ್ತಾರ ಸುಧೀರ್ ಕುಮಾರ ಮುರೋಳಿ ಹೇಳಿದ್ದಾರೆ.
ಕೋಟ ಬ್ಲಾಕ್ ಕಾಂಗ್ರೆಸ್ ವತಿಯಿಂದ ಭಾನುವಾರ ಹಿಂದೂ ಧಾರ್ಮಿಕ ಕೇಂದ್ರವನ್ನು ಕೆಡವಿದರ ಹಾಗೂ ಹಿಂದೂ ವಿರೋಧಿ ನೀತಿ ಹಾಗೂ ಬೆಲೆ ಏರಿಕೆಯನ್ನು ಖಂಡಿಸಿ ಆಯೋಜಿಸಲಾದ ಬೃಹತ್ ಪಂಜಿನ ಮೆರವಣಿಗೆಯನ್ನು ಉದ್ದೇಶಿಸಿ ಮಾತನಾಡಿ ಬಿಜೆಪಿ ಹಿಂದು ಕಾರ್ಯಕರ್ತರನ್ನು ಬಳಸಿಕೊಂಡು ಅವರನ್ನು ಛೂ ಬಿಟ್ಟು ಅವರನ್ನೆ ಕೊಲೆ ಮಾಡಿಸಿ ಸಂಭ್ರಮಿಸುವ ಪಕ್ಷವಾಗಿದೆ.
ಎಲ್ಲೆಲ್ಲಿ ಕೊಲೆ ನಡೆಯುತ್ತದೆಯೋ ಅಲ್ಲಲ್ಲಿ ಬಿಜೆಪಿ ಮುಖಂಡರುಗಳಿರುತ್ತಾರೆ. ಹಾಗಾದರೆ ಯಾವ ನೈತಿಕತೆ ಇಟ್ಟುಕೊಂಡು ಮತಯಾಚಿಸುತ್ತಿರಿ,ಹಿಂದೂ ಸಂಘಟನೆಗಳ ಮೂಲಕ ಹಿಂದೂಗಳನ್ನೆ ಬಡಿದೆಬ್ಬಿಸಿ ಹೀನ ರಾಜಕಾರಣ ಮಾಡವ ಬದಲು ಅವರ ಹಿತಕಾಯುವ ಮನಸ್ಥಿತಿಯನ್ನು ಬಳಸಿಕೊಳ್ಳಿ ಎಂದರಲ್ಲದೆ ನಾವು ರೈತ ಪರ ಸರಕಾರ ಅನ್ನುತ್ತಿರಿ ರೈತರ ಮೇಲೆ ದೌರ್ಜನ್ಯ ಎಸಗುತ್ತಿರಿ,ವಾಹನ ಹತ್ತಿಸುತ್ತಿರಿ ರೈತರಿಗೆ ನರಕಯಾತನೆ ನೀಡುತ್ತಿದ್ದಿರಿ ಹೀಗಿರುವಾಗ ಅನುಕೂಲಕರ ವಾತಾವರಣ ಎಲ್ಲಿ ನೀಡಿದ್ದಿರಿ, ನೀಡಲು ನಿಮ್ಮ ಜಾಯಮಾನದಲ್ಲಿ ಸಾಧ್ಯವಿಲ್ಲ,ಬೆಲೆ ಏರಿಕೆಯಿಂದ ಜನ ಹೈರಾಣರಾಗಿದ್ದಾರೆ,ಹಿಂದೆ ಇದ್ದ ಕಾಂಗ್ರೆಸ್ ಆಡಳಿತ ಜನರ ಭವಣೆಗೆ ತಕ್ಕಂತೆ ಆಡಳಿತ ನಡೆಸಿದೆ. ಶರತ್ ಮಡಿವಾಳ,ಪರಸ್ತ್ ಮೇಸ್ತಾ,ಪ್ರವೀಣ್ ಪೂಜಾರಿ ಹೀಗೆ ಸಾಕಷ್ಟು ಹಿಂದೂ ಕುಟುಂಬಗಳನ್ನು ಬೀದಿ ಬರುವಂತೆ ಮಾಡಿ ಅವರಿಗೆ ಯಾವುದೇ ರೀತಿಯ ಸೌಲಭ್ಯ ನೀಡಲು ನಿಮ್ಮ ಬಳಿ ಸಾಧ್ಯವಾಗಲಿಲ್ಲ ನಿಮ್ಮದು ಒಂದು ರಾಜಕಾರಣವಾ ಎಂದು ಗುಡುಗಿದರು.


ರಾಮನ ಆದರ್ಶ ಎಂದು ಬೊಬ್ಬೆ ಹೊಡೆಯುವ ನಿಮ್ಮ ಮನಸ್ಥಿತಿ ರಾಮನದ್ದಲ್ಲ ಬದಲಾಗಿ ರಾಕ್ಷಸ ಪ್ರವೃತ್ತಿಯ ಜಾಯಮಾನ ನಿಮ್ಮದು ರಾಮನ ಆದರ್ಶ ಏನಿದ್ದರೂ ಅದು ಕಾಂಗ್ರೆಸ್ಸಿಗರದ್ದು ಜಾತೀತ್ಯತೆ ತಳಹದಿಯಲ್ಲಿ ರಾಜಕಾರಣ ಮಾಡುತ್ತದೆ ವಿನಹ ನಿಮ್ಮ ತರಹ ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡಲಾರೆವು.ದೇವಳವನ್ನು ಕೆಡವ ಮನಸ್ಥಿತಿಯನ್ನು ಜನ ಅರ್ಥೈಸಿಕೊಂಡಿದ್ದಾರೆ,ಮುಂದಿನ ದಿನಗಳಲ್ಲಿ ದೇವಳ, ಚರ್ಚ್, ಮಸೀದಿ ವಿಚಾರಗಳಲ್ಲಿ ತಲೆ ಹಾಕಿದರೆ ನಾವು ಉತ್ತರ ಕೊಡಬೇಕಾಗಿಲ್ಲ, ಜನರೆ ಉತ್ತರ ನೀಡಲಿದ್ದಾರೆ ಎಂದು ಸ್ಥಳೀಯ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಂಸದೆ ಶೋಭಾ,ನಳಿನ್ ಕುಮಾರ್ ಕಟೀಲ್ ಇವರುಗಳ ಕಾರ್ಯವೈಕರಿ ದಂದ್ವ ರಾಜಕಾರಣವನ್ನು ಎಳೆ ಎಳೆಯಾಗಿ ವಿವರಿಸಿದರು.


ಕಾರ್ಯಕ್ರಮದಲ್ಲಿ ಪಂಜಿನ ಮೆರವಣಿಗೆಗೆ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಚಾಲನೆ ನೀಡಿ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಕಛೇರಿಯಿಂದ ಸಾಲಿಗ್ರಾಮ ಬಸ್ ನಿಲ್ದಾಣದವರೆಗೆ ಬೃಹತ್ ಮೆರವಣಿಗೆ ನಡೆಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಕುಂದರ್ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಕುಂದಾಪುರ ಬ್ಲಾಕ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ,ಕಾರ್ಯದರ್ಶಿ ವಿಕಾಸ್ ಹೆಗ್ಡೆ ಕೊಳ್ಕೆಬೈಲ್,ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ,ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್,ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್, ಪ್ರದಾನಕಾರ್ಯದರ್ಶಿ ನಟರಾಜ್ ಹೊಳ್ಳ,ಕೋಟ ಬ್ಲಾಕ್ ನ. ದಿನೇಶ್ ಬಂಗೇರ,ಗಣೇಶ್ ನೆಲ್ಲಿಬೆಟ್ಟು,ರವೀಂದ್ರ ಕಾಮತ್,ಶ್ರೀನಿವಾಸ ಅಮೀನ್,ರೋಶನಿ ವಲವೇರ,ಮೊಸೆಸ್ ರೂಡ್ರಿಗ್ರಸ್ ಮತ್ತಿತರರು ಉಪಸ್ಥಿತರಿದ್ದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!