Connect with us

Hi, what are you looking for?

Diksoochi News

ಕರಾವಳಿ

ಕೋಟ : ಅಮೃತೇಶ್ವರಿ ದೇವಳದಲ್ಲಿ ವಿವಿಧ ತಂಡಗಳಿಂದ ಭಜನೆ

0

ವರದಿ : ದಿನೇಶ್ ರಾಯಪ್ಪನಮಠ

ಕೋಟ: ಸಂತಾನ ಭಾಗ್ಯ ಕರುಣಿಸುವ ಹಲವು ಮಕ್ಕಳ ತಾಯಿ ಕ್ಷೇತ್ರ ಎಂದೆ ಜನಜನಿತವಾದ ಕೋಟದ ಅಮೃತೇಶ್ವರಿ ದೇವಳದಲ್ಲಿ ಶರನ್ನವರಾತ್ರಿ ಅಂವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಸಲುವಾಗಿ ಚಂಡಿಕಾ ಸಪ್ತಸತಿ ಪಾರಾಯಣ, ದುರ್ಗಾಯಾಗ ವಿವಿಧ ಭಾಗಗಳ ಸೇವಾಕರ್ತರಿಂದ ಜರಗುತ್ತಿದ್ದು, ಈ ನಡುವೆ ಪ್ರತಿಸಂಜೆ ಉಡುಪಿ ಜಿಲ್ಲೆ ಪ್ರಸಿದ್ಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮಗಳು ಸಂಪನ್ನಗೊಳ್ಳುತ್ತಿದೆ. ಭಜನಾ ಕಾರ್ಯಕ್ರಮಕ್ಕೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆನಂದ್ ಸಿ ಕುಂದರ್ ಚಾಲನೆ ನೀಡಿದರು. ಆ ಪ್ರಯುಕ್ತ ಸೋಮವಾರ ಬೈಕಾಡಿ ಶ್ರೀ ಕೃಷ್ಣ ಭಜನಾ ಮಂಡಳಿ ಇವರಿಂದ ವಿಶಿಷ್ಟ ನೃತ್ಯ ಭಜನೆ ನಡೆಯಿತು.
ಈ ಸಂದರ್ಭದಲ್ಲಿ ಸೋಮವಾರದ ಭಜನಾ ಸಂಯೋಜಕ ಭರತ ಗಾಣಿಗ ಕೋಟ,ವ್ಯವಸ್ಥಾಪನಾ ಸಮಿತಿ ಸದಸ್ಯ ಚಂದ್ರ ಪೂಜಾರಿ,ಜಿ.ಸತೀಶ್ ಹೆಗ್ಡೆ,ಇನ್ನಿತರರು ಉಪಸ್ಥಿತರಿದ್ದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!