Connect with us

Hi, what are you looking for?

Diksoochi News

ಕರಾವಳಿ

ಉಚ್ಚಿಲ: ಬಗೆಹರಿಯದ ತ್ಯಾಜ್ಯ ವಿಲೇವಾರಿ ಸಮಸ್ಯೆ; ಪ್ರತಿಭಟನೆಯ ಎಚ್ಚರಿಕೆ ನೀಡಿದ ಎಸ್ಡಿಪಿಐ

0

ಉಚ್ಚಿಲ : ಮನೆ ಮನೆಯಲ್ಲಿ ಸಂಗ್ರಹಿಸಿದ ಹಸಿ ಕಸವನ್ನು ವಿಲೇವಾರಿ ಮಾಡುವಲ್ಲಿ ಉಚ್ಚಿಲ ಬಡಾ ಗ್ರಾ.ಪಂ ಎಡವುತ್ತಿದ್ದು, ಇದರಿಂದ ಅಸಮಾಧಾನಗೊಂಡ ಎಸ್.ಡಿ.ಪಿ.ಐ ಪಂಚಾಯತ್ ಸಮಿತಿ, ಬಡಾ ಗ್ರಾ.ಪಂ
ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದೆ. ಅಲ್ಲದೆ ಸಮಸ್ಯೆ ಬಗೆಹರಿಯದಿದ್ದಲ್ಲಿ ಗ್ರಾ.ಪಂ ಮುಂಭಾಗದಲ್ಲೇ ಪ್ರತಿಭಟನೆ ನಡೆಸುದಾಗಿ ಎಚ್ಚರಿಕೆ ನೀಡಿದೆ.

ಇಲ್ಲಿನ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ಹಲವು ದಿನಗಳಿಂದ ತ್ಯಾಜ್ಯ ವಿಲೇವಾರಿ ಸಮಸ್ಯೆ ಎದುರಾಗಿದ್ದು,ಗ್ರಾಮಸ್ಥರಿಗೆ ತಲೆನೋವಾಗಿ ಪರಿಣಮಿಸಿದೆ.ಈ ಮೊದಲು ಪಂಚಾಯತ್ ವತಿಯಿಂದ ನೇಮಿಸಿದ ವಾಹನ ಮನೆ ಮನೆಗೆ ತೆರಳಿ ಹಸಿ ಮತ್ತು ಒಣ ಕಸವನ್ನು ಸಂಗ್ರಹಿಸುತ್ತಿತು. ಆದರೆ ಪ್ರಸ್ತುತ ತ್ಯಾಜ್ಯ ಸಂಗ್ರಹಣೆಗೆ ಬರುವವರು ಹಸಿಕಸ ಹಾಗು ಇನ್ನಿತರ ತ್ಯಾಜ್ಯ ಕೊಂಡೊಯ್ಯಲು ನಿರಾಕರಿಸುತ್ತಿರುವ ಪರಿಣಾಮ ಗ್ರಾಮಸ್ಥರು ಕಂಡ ಕಂಡಲ್ಲಿ ತ್ಯಾಜ್ಯ ಎಸೆಯುತ್ತಿದ್ದಾರೆ.ಇದರಿಂದಾಗಿ ಪರಿಸರ ಹಾನಿ ಉಂಟಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದೆ ಗ್ರಾಮಸ್ಥರು, “ತ್ಯಾಜ್ಯ ಸಂಗ್ರಹಕ್ಕೆ ಬರುವವರು ಹಸಿತ್ಯಾಜ್ಯ ಮತ್ತು ಮಕ್ಕಳ ಪ್ಯಾಂಪರ್ಸ್ ಸ್ಯಾನೀಟರಿ ಪ್ಯಾಡ್ಸ್ಗಳನ್ನು ಕೊಂಡೊಯ್ಯಲು ನಿರಾಕರಿಸುತ್ತಿದ್ದಾರೆ.ಇದನ್ನು ವಿಲೆವಾರಿ ಮಾಡಲು ಪರ್ಯಾಯ ವ್ಯವಸ್ಥೆ ಇಲ್ಲದೆ
ಅನಿವಾರ್ಯವಾಗಿ ರಸ್ತೆಯ ಪಕ್ಕದಲ್ಲಿ ತ್ಯಾಜ್ಯ ಎಸೆಯುವಂತಾಗಿದೆ, ಈ ಬಗ್ಗೆ ತ್ಯಾಜ್ಯ ಸಂಗ್ರಹಿಸುವವರು ಹಾಗು ವಾರ್ಡ್ ಸದಸ್ಯರ ಗಮನಕ್ಕೆ ತರಲಾಗಿದೆ ಆದರೆ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ
ಎಂದು ದೂರಿದ್ದಾರೆ.ಜಿಲ್ಲೆಯ ಬೇರೆಡೆ ಗುತ್ತಿಗೆ ಪಡೆದ ಗುತ್ತಿಗೆದಾರರು ಎಲ್ಲಾ ರೀತಿಯ ತ್ಯಾಜ್ಯಗಳನ್ನು ಅಲ್ಲಿ ಸಂಗ್ರಹಿಸುತ್ತಿದ್ದಾರೆ. ಉಚ್ಚಿಲ ಬಡಾ ಗ್ರಾಮದಲ್ಲಿ ಮಾತ್ರ ಸಂಗ್ರಹಿಸಲು ನಿರಾಕರಿಸುತ್ತಿರಲು ಕಾರಣವೇನು ಎಂದು ಪ್ರಶ್ನಿಸಿದ್ದಾರೆ.ಗ್ರಾಮಸ್ಥರ ಸಮಸ್ಯೆಯನ್ನು ಅರಿತ ಎಸ್ಡಿಪಿಐ ಹೋರಾಟಕ್ಕೆ ಮುಂದಾಗಿದೆ.

Advertisement. Scroll to continue reading.

ಸಮಸ್ಯೆಗೆ ಸ್ಪಂದಿಸದಿದ್ದರೆ ಗ್ರಾ.ಪಂ ಮುಂಭಾಗದಲ್ಲಿ ಪ್ರತಿಭಟನೆ ; ಅಬ್ದುಲ್ ರಝಾಕ್ ವೈ.ಎಸ್ ಎಚ್ಚರಿಕೆ:

ಈ ಬಗ್ಗೆ ಮಾತನಾಡಿದ ಎಸ್ಡಿಪಿಐ ಉಚ್ಚಿಲ ಪಂಚಾಯತ್ ಸಮಿತಿ ಅಧ್ಯಕ್ಷ ಅಬ್ದುಲ್ ರಝಾಕ್ ವೈ.ಎಸ್ ಮಾತನಾಡಿ ಇಲ್ಲಿನ ತ್ಯಾಜ್ಯ ಸಮಸ್ಯೆ ಬಗ್ಗೆ ಪಿಡಿಒ ಹಾಗು ಅಧ್ಯಕ್ಷರ ಗಮನಕ್ಕೆ ತರಲಾಗಿದೆ. ಒಂದು ವಾರದ ಒಳಗೆ ಈ ಸಮಸ್ಯೆಗೆ ಪರಿಹಾರ ಸಿಗದಿದ್ದಲ್ಲಿ ಗ್ರಾಮ ಪಂಚಾಯತ್ ಮುಂಭಾಗದಲ್ಲಿ ನಾಗರಿಕರೊಂದಿಗೆ ಸೇರಿ ಪ್ರತಿಭಟನೆ ನಡೆಸಲಿದ್ದೇವೆ.ಪಣಿಯೂರು ರಸ್ತೆಯ ಹಲವೆಡೆ ಹೊಂಡಗಳಾಗಿದ್ದು ವಾಹನ ಸಂಚಾರಕ್ಕೆ ತೊಡಕು ಉಂಟಾಗಿದೆ.ಇದನ್ನರಿತ ಎಸ್ಡಿಪಿಐ ಕಾರ್ಯಕರ್ತರು ಈ ಮೊದಲು ತಾತ್ಕಾಲಿಕ ಶ್ರಮದಾನ ನಡೆಸಿ ಸ್ಥಳದಲ್ಲೇ ಪ್ರತಿಭಟನೆ ಮಾಡುವ ಮೂಲಕ ಗ್ರಾ.ಪಂ ಗಮನಕ್ಕೆ ತರಲಾಗಿದ್ದು,ಕಳೆದ ಹತ್ತು ದಿನಗಳ ಹಿಂದೆ ಈ ಬಗ್ಗೆ ಪಂಚಾಯತ್ ಗೆ ಮನವಿಯನ್ನೂ ಸಲ್ಲಿಸಲಾಗಿದೆ.ಇವತ್ತು ಕೂಡ ರಿಮೈಂಡಿಗ್ ಲೆಟರ್ ನೀಡಲಾಗಿದೆ. ಶೀಘ್ರವಾಗಿ ಪಣಿಯೂರು ರಸ್ತೆ ದುರಸ್ತಿ ಹಾಗು ಇಲ್ಲಿನ ತ್ಯಾಜ್ಯ ಸಮಸ್ಯೆಗೆ ಗ್ರಾ.ಪಂ ಸ್ಪಂದಿಸದಿದ್ದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸುವುದಾಗಿ ರಝಾಕ್ ವೈ.ಎಸ್ ಎಚ್ಚರಿಕೆ ನೀಡಿದ್ದಾರೆ.ಈ ಸಂದರ್ಭದಲ್ಲಿ ಎಸ್ಡಿಪಿಐ ಪಂಚಾಯತ್ ಸಮಿತಿ ಉಪಾಧ್ಯಕ್ಷ ಇಬ್ರಾಹಿಂ ಅರ್ಸ್,ಜೊತೆ ಕಾರ್ಯದರ್ಶಿ ಮೌದಿನ್ ಎರ್ಮಾಳ್ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!