Connect with us

Hi, what are you looking for?

Diksoochi News

ಕರಾವಳಿ

ಸಾಯುಜ್ಯರಾದ ವಿಶ್ವಕರ್ಮ ಪರಬ್ರಹ್ಮ ಕ್ಷೇತ್ರದ ಮಂಜುನಾಥ ಆಚಾರ್ಯ ಸ್ವಾಮಿ

0

ವರದಿ : ಬಿ.ಎಸ್.ಆಚಾರ್ಯ

ಬ್ರಹ್ಮಾವರ : ಮುರುಡೇಶ್ವರ ಸಮೀಪದ ಗುಡಿಗದ್ದೆಯಲ್ಲಿರುವ ವಿಶ್ವಕರ್ಮ ಪರಬ್ರಹ್ಮ ಕ್ಷೇತ್ರದ ಮಂಜುನಾಥ ಆಚಾರ್ಯ ಸ್ವಾಮಿಗಳು(83) ಮಂಗಳವಾರ ವಿಶ್ವಕರ್ಮ ಸಾಯುಜ್ಯ ಹೊಂದಿದರು. ಮೂಲತಃ ಕುಂದಾಪುರ ತಾಲೂಕಿನ ಆನೆಗುಡ್ಡೆ ಬಳಿಯ ಹೂವಿನಕೆರೆಯವರಾದ ಅವರು ಸ್ವಯಂ ಸಾಧನೆಯಿಂದ ಶಿಲ್ಪ, ಗಿಡಮೂಲಿಕಾ ಮತ್ತು ಆಧ್ಯಾತ್ಮದ ಯೋಗ ಸಾಧನೆಯಿಂದ ವಿಶ್ವಕರ್ಮ ಸಮಾಜಕ್ಕೆ ಕರಾವಳಿ ಭಾಗದಲ್ಲಿ ಒಂದಾಗಲು ಗುರು ಸಮಾನರಾಗಿ ಸಮಾಜದ ಅಭ್ಯುದಯಕ್ಕಾಗಿ ಅವರು ಸ್ವತಃ ದೂರದ ತಿರತಹಳ್ಳಿಯ ಬೆಟ್ಟವೊಂದರಿಂದ ಆಯ್ದ ಶಿಲೆಯೊಂದರಿಂದ ಆರು ಅಡಿಯ ಕುಳಿತ ಭಂಗಿಯ ವಿಶ್ವಕರ್ಮ ಮೂರ್ತಿ ಯನ್ನು ಸ್ವತಃ ಕೆತ್ತಿ ಬಳಿಕ ಗುಡಿಗದ್ದೆಯಲ್ಲಿ ಪ್ರತಿಷ್ಠಾಪನೆ ಮಾಡಿ ಪ್ರತಿ ದಿನ ಪೂಜಾ ನೈವೇದ್ಯ ಮತ್ತು ಪರ್ವ ದಿನದಲ್ಲಿ ಉತ್ಸವವನ್ನು ಮಾಡಿ ಸಮಾಜದಲ್ಲಿ ಏಕತೆ ಮೂಡಿಸುವಲ್ಲಿ ಶ್ರಮಿಸಿದ್ದರು. ಉಡುಪಿಯಿಂದ ಸಾಗುವಾಗ ರಾಷ್ಟ್ರೀಯ ಹೆದ್ದಾರಿ 66 ಮುರುಡೇಶ್ವರ ದಿಂದ ಉತ್ತರಕ್ಕೆ ಆರು ಕಿಮೀ ಮುಂದೆ ಪೂರ್ವ ದಿಕ್ಕಿನಲ್ಲಿ ಕಾಣಸಿಗುತ್ತದೆ ಗುಡಿಗದ್ದೆಯ ವಿಶ್ವಕರ್ಮ ಪರಬ್ರಹ್ಮ ಕ್ಷೇತ್ರ. ಇಲ್ಲಿ ಅವರು ಆಧುನಿಕ ವೈಧ್ಯಲೋಕಕ್ಕೆ ಸವಾಲಾಗಿರುವ ಅನೇಕ ಗುಣವಾಗದ ಖಾಯಿಲೆಗಳಿಗೆ ಅವರು ನೀಡುವ ಮೂಲಿಕೆ ಮತ್ತು ರಸೌಷಧಿಯಿಂದ ಜನರು ಗುಣಹೊಂದಿದ್ದು, ನಾಡಿನ ಅನೇಕ ಭಾಗದಿಂದ ಇವರಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಜನರಲ್ಲಿ ಧಾರ್ಮಿಕ ಭಾವನೆ ಮೂಡಲು ಅವರು ಅನೇಕ ಪೂಜಾ ಕಾರ್ಯಗಳಲ್ಲಿ ಕೂಡಾ ಸಮಸ್ಯೆ ಗಳನ್ನು ಪರಿಹಾರ ಮಾಡುತ್ತಿದ್ದರು.

ಸಂಸಾರಿಯಾಗಿದ್ದು ಋಷಿ ಪರಂಪರೆಯಂತೆ ಅವರು ಕಾಯಕಯೋಗಿಯಾಗಿ ಕರ್ಮಯೋಗಿಯಾಗಿ ಅವರದೆ ಕೃಷಿ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದು ಅವರ ಪುತ್ರರಿಗೆ ಪೂಜಾ ಕ್ರಮವನ್ನು ತಿಳಿಯಲು ಮೂಡಬಿದ್ರೆಯ ಗುರುಮಠದಲ್ಲಿ ಪೌರೋಹಿತ್ಯವನ್ನು ಕಲಿಸಿ ಇನ್ನೊಬ್ಬ ಮಗನಿಗೆ ಜೋತಿಷ್ಯ ಮತ್ತು ಆಯುರ್ವೇದ ವಿದ್ಯೆಯನ್ನು ಧಾರೆ ಎರೆದಿದ್ದಾರೆ. ಅವರ ನಿಧನದ ಸುದ್ದಿ ತಿಳಿದಿರುವ ಅನೇಕ ಗಣ್ಯರು ಆಗಮಿಸಿ ಗೌರವ ಸಲ್ಲಿಸಿದರು. ರಾಜ್ಯದ ಇತಿಹಾಸದಲ್ಲಿ ವಿಶ್ವಕರ್ಮ ರಲ್ಲಿ ಮೂರ್ತಿ ಯನ್ನು ರಚಿಸಿ ಅವರೇ ಪ್ರತಿಷ್ಠೆ ಮಾಡಿದ ಉದಾಹರಣೆಗೆ ಮಂಜುನಾಥ ಆಚಾರ್ಯರು ಸಾಕ್ಷಿಯಾಗಿ ವಿಶ್ವಕರ್ಮ ಸಾಯುಜ್ಯ ಹೊಂದಿದವರಾಗಿದ್ದಾರೆ.

ಮಂಜುನಾಥ ಆಚಾರ್ಯರದ್ದು ಇನ್ನೊಂದು ವಿಶೇಷ ಅಂದರೆ ಅವರ ಕೇಶ ಒಂಬಂತ್ತು ಅಡಿಯಷ್ಟು ಉದ್ದದ ಕೂದಲು ಗಡ್ಡ ಇದ್ದು ತೇಜಸ್ಸು ಬರಿತ ಅವರ ಕಣ್ಣುಗಳ ಕಾಂತಿ ಪ್ರತಿಯೊಬ್ಬರನ್ನು ಸೆಳೆಯುವ ಶಕ್ತಿ ಅವರಲ್ಲಿತ್ತು

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!