ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಅಕಾಲಿಕ ಮಳೆಯಿಂದ ಕರಾವಳಿಯಲ್ಲಿ ಭತ್ತದ ಬೆಳೆ ಬೆಳೆದ ರೈತರು ತೀರಾ ಅತಂಕದಲ್ಲಿದ್ದಾರೆ.
ಬಹುತೇಹ ಭಾಗದಲ್ಲಿ ಈ ವರ್ಷ ಭತ್ತದ ಬೆಳೆಯು ಒಳ್ಳೆ ಇಳುವರಿ ಬಂದಿದ್ದು ಕೈಗೆ ಬಂದ ಕೃಷಿ ಬಾಯಿಗೆ ಬರದಂತೆ ಆಗಿದೆ.
ಬ್ರಹ್ಮಾವರ ತಾಲೂಕಿನ ಬಾರಕೂರು ಹಂದಾಡಿ ಕೊಕ್ಕರ್ಣೆ ಉಪ್ಪೂರು ನೀಲಾವರ ಸೇರಿದಂತೆ ಬಹುತೇಕ ಭಾಗದಲ್ಲಿ ಗದ್ದೆಯಲ್ಲಿ ಭತ್ತದ ಪೈರು ತೆನೆ ತುಂಬಿ ಕಳೆದ ಕೆಲವು ದಿನದಿಂದ ಸುರಿದ ಮಳೆಗೆ ಬಾಗಿ ಬಿದ್ದದ್ದು ಕಂಡು ಬರುತ್ತಿದೆ.
ಮಾನವ ಶಕ್ತಿಯಿಂದ ಕಟಾವು ಮಾಡಲು ಆಳುಗಳು ಸಿಗದ ಕಾರಣ ಬಹತೇಕ ಕಡೆಯಲ್ಲಿ ಭತ್ತದ ಕಟಾವುನ್ನು ಯಾಂತ್ರಿಕೃತವಾಗಿ ಮಾಡುತ್ತಿದ್ದು ದೂರದ ತಮಿಳುನಾಡಿನಿಂದ ಕಟಾವು ಯಂತ್ರಗಳು ಮತ್ತು ಅದರ ಚಾಲಕರು ಬ್ರಹ್ಮಾವರ ತಾಲೂಕಿನ ನಾನಾ ಭಾಗದಲ್ಲಿ ಬಂದು ಗದ್ದೆಯಲ್ಲಿನ ಭತ್ತದ ಪೈರಿನ ಕಟಾವಿಗಾಗಿ ಕಾಯುತ್ತಿದ್ದಾರೆ.
ತಗ್ಗು ಪ್ರದೇಶದ ಗದ್ದೆಯಲ್ಲಿ ನೀರು ತುಂಬಿದ್ದು ಕಟಾವು ಯಂತ್ರಗಳು ಸಂಚರಿಸಲು ಅಸಾಧ್ಯವಾಗಿ ಗದ್ದೆಗೆ ಇಳಿದಂತಾಗಿದೆ. ದೀಪಾವಳಿ ಹಬ್ಬದ ಒಳಗೆ ಮುಂಗಾರು ಬೆಳೆಯ ಭತ್ತವನ್ನು ಕಟಾವು ಮಾಡಿ ಮನೆ ತುಂಬಿಸಿಕೊಂಡು ಧಾನ್ಯ ಪೂಜೆ ಮಾಡಲು ರೈತರು ಕಾತರದಲ್ಲಿದ್ದು ಈಗೀನ ಪರಿಸ್ಥಿತಿಯಲ್ಲಿ ಭತ್ತದ ಜೊತೆ ಹುಲ್ಲು ಕೂಡಾ ಹಾಳಾಗುವ ಭೀತಿಯಲ್ಲಿ ರೈತರಿದ್ದಾರೆ.