ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬ್ರಹ್ಮಾವರ ತಾಲೂಕು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಇದರ ಕೇಂದ್ರ ಸಮಿತಿಯ ಒಕ್ಕೂಟ ಪದಗ್ರಹಣ ಮತ್ತು ಪಾಲುದಾರ ಸದಸ್ಯರಿಗೆ ನಾನಾ ಸೌಲಭ್ಯ ವಿತರಣಾ ಸಮಾರಂಭ ಮಂಗಳವಾರ ಬಾರಕೂರು ಶಿವಗಿರಿ ಕ್ಷೇತ್ರದಲ್ಲಿ ಜರುಗಿತು.
ಕಾರ್ಯಕ್ರಮವನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿ ಮಾತನಾಡಿ, ಸರಕಾರ ಮತ್ತು ಅನೇಕ ಆರ್ಥಿಕ ಸಂಸ್ಥೆಗಳಿಂದ ಸಾಲ ನೀಡಿ ಮರುಪಾವತಿ ಪಡೆಯಲು ಅಸಾಧ್ಯವಾಗುತ್ತಿರುವ ಸಂದರ್ಭ ಶ್ರೀಕ್ಷೇತ್ರ ಧರ್ಮಸ್ಥಳದ ಡಾ.ವಿರೇಂದ್ರ ಹೆಗಡೆ ಸ್ವಸಹಾಯ ಸಂಘದಿಂದ ನೂರಕ್ಕೆ ನೂರು ಸಾಲ ಮರುಪಾವತಿ ಮಾಡುವಂತಹ ವಿದ್ಯಮಾನವನ್ನು ಸೃಷ್ಠಿಸಿ ಆರ್ಥಿಕ ಸ್ವಾವಲಂಬನೆ ಜೊತೆ ಸ್ವತಂತ್ರ ಬದುಕನ್ನು ಕಟ್ಟಿಕೊಟ್ಟದ್ದು ಗ್ರಾಮಾಭಿವೃದ್ಧಿ ಯೋಜನೆ ಎಂದರು.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸದಸ್ಯರಿಗೆ ನಾನಾ ಸವಲತ್ತುಗಳನ್ನು ವಿತರಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕರಾವಳಿ ಪ್ರಾದೇಶಿಕ ಕಛೇರಿ ನಿರ್ದೇಶಕ ವಸಂತ್ ಸಾಲ್ಯಾನ್ , ಹಿರೀಯ ನಿರ್ದೇಶಕ ಗಣೇಶ್ ಬಿ, ಬಾರಕೂರಿನ ಉದ್ಯಮಿ ಶ್ರೀನಿವಾಸ ಶೆಟ್ಟಿಗಾರ್ ,ವೆಂಕಟರಮಣ ಭಂಡಾರಕರ್ , ಜಯಾನಂದ ಪೂಜಾರಿ , ಶ್ರೀನಿವಾಸ ಉಡುಪ, ಪ್ರಕಾಶ್ ಶೆಟ್ಟಿ ,ಗ್ರಾಮಪಂಚಾಯತಿ ಉಪಾಧ್ಯಕ್ಷೆ ಉಷಾ , ಕೇಂದ್ರ ಸಮಿತಿಯ ನೂಥನ ಅಧ್ಯಕ್ಷೆ ಶೋಭಾ ಎಸ್, ಯೋಜನಾಧಿಕಾರಿ ದಿನೇಶ್ ಶೇರಿಗಾರ್ ಇನ್ನಿತರ ಪಧಾಧಿಕಾರಿಗಳು ಉಪಸ್ಥಿತರಿದ್ದರು.