ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ರಜೆಯ ಮಜಾ ಸವಿಯಲು ನದಿಯಲ್ಲಿ ಈಜಲು ಹೋದ ಇಬ್ಬರು ಯುವಕರು ನೀರುಪಾಲಾಗಿ ಮೃತ ಪಟ್ಟ ಘಟನೆ ಬ್ರಹ್ಮಾವರ ಸಮೀಪ ನಡೆದಿದೆ.
ಮಂಗಳವಾರ ಇಲ್ಲಿನ ಹೆರಂಜೆಯ ಉಗ್ಗೆಲ್ ಬೆಟ್ಟು ಮಡಿಸಾಲು ಹೊಳೆಯಲ್ಲಿ ಮೂವರು ಯುವಕರು ಶ್ರೇಯಸ್ , ಅನಾಸ್ ಮತ್ತು ಸಂಜಯ್ ರಾವ್ ಈಜಾಡಲು ಹೋಗಿದ್ದು ನೀರಿನ ಸೆಳೆತಕ್ಕೆ ಲಿಟ್ಲ್ ರಾಕ್ ಕ್ವಾಟ್ರಸ್ ನಲ್ಲಿರುವ ಶ್ರೇಯಸ್ (18), ಮತ್ತು ಬ್ರಹ್ಮಾವರ ಸ್ವರ್ಣ ಅಪಾರ್ಟ ಮೆಂಟ್ ನಲ್ಲಿ ವಾಸ ಇರುವ ಅನಾಸ್( 16) ಕೊಚ್ಚಿಹೋಗಿದ್ದರು.
ಸಂಜೆಯ ತನಕ ವಿಷಯ ತಿಳಿಸದ ಕಾಲೇಜಿನ ಸಹಪಾಟಿ ಸಂಜಯ್ ರಾವ್ ಮತ್ತೆ ಮನೆಯವರಲ್ಲಿ ಹೇಳಿದ್ದಾನೆ . ತನಿಖಾಧಿಕಾರಿ ಬ್ರಹ್ಮಾವರ ಪಿಎಸ್ ಐ ಗುರುನಾಥ್ ಬಿ ಹಾದಿಮನೆ ಯವರು ಘಟನೆಯ ಸ್ಥಳಕ್ಕೆ ಬುಧವಾರ ತೆರಳಿ ಸ್ಥಳ ಪರಿಶೀಲನೆ ಮಾಡಿ ಉಡುಪಿ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಮತ್ತು ಸ್ಥಳಿಯ ಈಜುಗಾರರ ನೆರವಿನಿಂದ ಇಬ್ಬರ ಶವವನ್ನು ಮೆಲಕ್ಕೆತ್ತಲಾಯಿತು.
ಮೃತ ಯುವಕರಲ್ಲಿ ಶ್ರೇಯಸ್ ಕ್ರಾಸ್ ಲ್ಯಾಂಡ್ ಕಾಲೇಜಿನ ಪದವಿ ವಿದ್ಯಾರ್ಥಿ ಮತ್ತು ಅನಾಸ್ ಪ್ರಥಮ ಪಿಯು ವಿದ್ಯಾರ್ಥಿಗಳಾಗಿದ್ದಾರೆ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.