Connect with us

Hi, what are you looking for?

Diksoochi News

ಕರಾವಳಿ

ಕುಂದಾಪುರ : ಅಕ್ರಮ ಗಾಂಜಾ ಪತ್ತೆ; ಆರೋಪಿ ಅರೆಸ್ಟ್

0

ವರದಿ : ದಿನೇಶ್ ರಾಯಪ್ಪನಮಠ


ಕುಂದಾಪುರ : ಅಕ್ರಮವಾಗಿ ಗಾಂಜಾ ಹೊಂದಿದ್ದ ವ್ಯಕ್ತಿಯೊಬ್ಬನನ್ನು ಕುಂದಾಪುರ ಡಿವೈಎಸ್ಪಿ ನೇತೃತ್ವದ ಪೊಲೀಸರ ತಂಡ ಗುರುವಾರ ರಾತ್ರಿ ಬಂಧಿಸಿದೆ.

ಕಾರವಾರ ಬಿಣಗಾ ನಿವಾಸಿ ಜಾಫರ್ ಗುಡುಮಿಯಾ (28) ಬಂಧಿತ ಆರೋಪಿ. ಬಂಧಿತನಿಂದ ಸುಮಾರು 40,000 ರೂ ಮೌಲ್ಯದ 1ಕೆಜಿ 810 ಗ್ರಾಂ ತೂಕದ ಗಾಂಜಾ, 10,000 ಮೌಲ್ಯದ 1ಗ್ರಾಂ ತೂಕದ ಬ್ರೌನ್ ಶುಗರ್, 2 ಮೊಬೈಲ್ 1,500 ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.

Advertisement. Scroll to continue reading.

ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಅವರು ಸಿಬ್ಬಂದಿಗಳೊಂದಿಗೆ ಗುರುವಾರ ರಾತ್ರಿ ಪಾಳಯದಲ್ಲಿ ಕರ್ತವ್ಯದಲ್ಲಿದ್ದ ವೇಳೆ ನಗರದ ಶಾಸ್ತ್ರೀ ವೃತ್ತದ ಸಮೀಪ ಅನುಮಾನಾಸ್ಪದವಾಗಿ ತಿರುಗುತ್ತಿದ್ದ ಆರೋಪಿ ಜಾಫರ್ನನ್ನು ವಶಕ್ಕೆ ಪಡೆದು ಪರಿಶೀಲಿಸಿದ್ದು, ಈ ವೇಳೆ ಆತನ ಬಳಿ ಗಾಂಜಾ ಪತ್ತೆಯಾಗಿದೆ. ಸದ್ಯ ಪ್ರಕರಣವನ್ನು ಕುಂದಾಪುರ ನಗರ ಠಾಣೆಗೆ ಹಸ್ತಾಂತರಿಸಲಾಗಿದೆ.

ಕ್ರೈಂ ವಿಭಾಗದ ಸಿಬ್ಬಂದಿಗಳಾದ ರಾಘವೇಂದ್ರ ಉಪ್ಪುಂದ, ರಾಮು ಹೆಗ್ಡೆ, ವಿಜಯ್ ಕುಮಾರ್, ರಮೇಶ್ ಕುಲಾಲ್, ಕುಂದಾಪುರ ಪೊಲೀಸ್ ಠಾಣೆಯ ರಾಘವೇಂದ್ರ ಮೊಗವೀರ, ವಿಜೇತ್ ಮತ್ತು ಜೀಪು ಚಾಲಕ ರಾಜು ಕಾರ್ಯಾಚರಣೆ ಭಾಗವಹಿಸಿದ್ದರು.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!