ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ರಾಜ್ಯದಾದ್ಯಂತ ಸೋಮವಾರ ಪ್ರಾಥಮಿಕ ಶಾಲೆ ಆರಂಭಗೊಂಡಿದ್ದು, ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕು ಭಾಗದ ಬಹುತೇಕ ಭಾಗದಲ್ಲಿ ಒಂದೂವರೆ ವರ್ಷದ ಬಳಿಕ ಆರಂಭಗೊಂಡ ತರಗತಿಗೆ ಅತೀ ಉತ್ಸಾಹದಿಂದ ಮಕ್ಕಳು ಶಾಲೆಗೆ ಬಂದಿದ್ದಾರೆ.
ಕಳೆದ ಕೆಲವು ಸಮಯದಿಂದ ಶಾಲೆಯನ್ನು ಅಧ್ಯಾಪಕರನ್ನು ಕ್ರೀಡಾಂಗಣವನ್ನು ಸ್ನೇಹಿತರನ್ನು ಕಾಣದ ವಿದ್ಯಾರ್ಥಿಗಳು ಇಂದು ಸಂಭ್ರಮ ಆಚರಿಸುವಂತೆ ಕಂಡು ಬರುತ್ತಿದೆ.
ಬ್ರಹ್ಮಾವರ ನಗರ ಮಧ್ಯ ಭಾಗದಲ್ಲಿರುವ ಮತ್ತು 680 ಅತೀ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದ ಬೋರ್ಡ್ ಎಂದೆ ಖ್ಯಾತಿ ಎನಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಇಂದು ಬೆಳಿಗ್ಗೆ ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಓ .ಆರ್ ಪ್ರಕಾಶ್ ಭೇಟಿ ನೀಡಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರೊಂದಿಗೆ ಕೆಲ ಹೊತ್ತು ಕಳೆದು ಮಕ್ಕಳಿಗೆ ಉತ್ಸಾಹ ತುಂಬಿದರು. ಸರಕಾರದ ನಿಯಮದಂತೆ 50 ಶೇಕಡಾ ವಿದ್ಯಾರ್ಥಿಗಳಿಗೆ ತರಗತಿ ನಡೆಯುತ್ತಿದೆ.
ಶಿಕ್ಷಣಾಧಿಕಾರಿಯವರೊಂದಿಗೆ ಪ್ರೌಢ ಶಿಕ್ಷಣ ಸಂಯೋಜಕ ರಾಘವ ಶೆಟ್ಟಿ ಉಪಸ್ಥಿತರಿದ್ದರು.