ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ : ಕಳೆದ ಒಂದೂವರೆ ವರ್ಷದಿಂದ ಶಾಲೆಯ ಮುಖ ನೋಡದ ವಿದ್ಯಾರ್ಥಿಗಳು, ಇದೀಗ ಶಾಲೆಯ ಆವರಣ ಪ್ರವೇಶ ಮಾಡುವ ವೇಳೆ ಅತಿ ಸಂಭ್ರಮ ಮತ್ತು ಸಡಗರದ ವಾತಾವರಣವು ಜಿಲ್ಲೆಯಲ್ಲಿಯೇ ಅತಿ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಿರುವ ಎಂಬ ಹೆಗ್ಗಳಿಕೆ ಪಡೆದ ತೆಕ್ಕಟ್ಟೆ ಕುವೆಂಪು ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಕಂಡು ಬಂತು.
ತಮ್ಮ ತಮ್ಮ ಪೋಷಕರೊಡನೆ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳನ್ನು ನಗುಮುಖದಿಂದ ಶಿಕ್ಷಕರು ಬರಮಾಡಿಕೊಂಡು ವಿಶೇಷವಾಗಿ ಮಕ್ಕಳ ಬಗ್ಗೆ ಕಾಳಜಿ ವಹಿಸಿ ಥರ್ಮಲ್ ಸ್ಕ್ಯಾನಿಂಗ್ ಜೊತೆಗೆ ಕೊರೋನಾ ಮಾರ್ಗಸೂಚಿಯನ್ನು ಅನುಸರಿಸಿ ವಿದ್ಯಾರ್ಥಿಗಳಿಗೆ ತಪಾಸಣೆ ಮಾಡಿ ಶಾಲೆ ಕೊಠಡಿಯಲ್ಲಿ ಕೂರಿಸಿ ಪಾಠ ಪ್ರವಚನ ಮಾಡಲಾಯಿತು.
Advertisement. Scroll to continue reading.