ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ: ಶುಕ್ರವಾರ ಸಮಾಜ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ್ ಪೂಜಾರಿಯವರು ನಗರದ ಟಿ.ಟಿ. ರೋಡ್ ನ ನಿರ್ಮಾಣ ಹಂತದಲ್ಲಿರುವ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿದರು.
೩.೬೩ ಲಕ್ಷ ರೂ. ಗಳ ಕಾಮಗಾರಿಯಲ್ಲಿ ನೂನ್ಯತೆಗಳಿದ್ದು ಅದನ್ನು ಸರಿ ಪಡಿಸುವವರೆಗೆ ಗುತ್ತಿಗೆದಾರರಿಗೆ ಹಣ ಪಾವತಿ ಮಾಡದಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು
ನಂತರ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಕಾಮಗಾರಿ ವೀಕ್ಷಣೆಗೆ ಬಂದಾಗ ಕೆಲವೊಂದು ಲೋಪಗಳನ್ನು ಗಮನಿಸಿದ್ದೇನೆ. ಅದನ್ನು ಸರಿ ಪಡಿಸಲು ತಿಳಿಸಿದ್ದೇನೆ. ನ್ಯೂನತೆಗಳು ಸರಿ ಆಗುವವರೆಗೆ ಹಣ ಪಾವತಿ ಮಾಡದಿರಲು ಇಲಾಖೆಗೆ ನಿರ್ದೇಶನ ನೀಡಿದ್ದೇನೆ ಎಂದು ನುಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಕ್ಷೇತ್ರಾಧ್ಯಕ್ಷ ಶಂಕರ್ ಅಂಕದಕಟ್ಟೆ, ಭಾಜಪ ಮುಖಂಡ ಕರಣ್ ಪೂಜಾರಿ, ಉಡುಪಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಅನಿತಾ ಮಡ್ಲೂರು, ಸಹಾಯಕ ನಿರ್ದೇಶಕ ರಾಘವೇಂದ್ರ ವರ್ಣೇಕರ್, ಕುಂದಾಪುರ ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಇಂಜಿನಿಯರ್ ನೀಲಕಂಠಯ್ಯ ಉಪಸ್ಥಿತರಿದ್ದರು