ಉಚ್ಚಿಲ : ಪ್ರಾಥಮಿಕ ಆರೋಗ್ಯ ಕೇಂದ್ರ ಮುದರಂಗಡಿ, ಕುಂಜೂರು ಸ್ಪೋರ್ಟ್ಸ್ ಕ್ಲಬ್ ಸಹಯೋಗದಲ್ಲಿ ದುರ್ಗಾ ನಗರ, ಕುಂಜೂರು ಅಂಗನವಾಡಿ ಕೇಂದ್ರ. (ಎಲ್ಲೂರು ಉಪಕೇಂದ್ರ) ದಲ್ಲಿ ಶನಿವಾರ ಸಾರ್ವಜನಿಕರಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮ ನಡೆಯಿತು.
ಸಾರ್ವಜನಿಕರು ಕೊವ್ಯಾಕ್ಸಿನ್ ಪೃಥಮ ಮತ್ತು ಎರಡನೇ ಲಸಿಕೆ ಹಾಗೂ ಕೋವಿಶೀಲ್ಡ್ ಪ್ರಥಮ ಮತ್ತು ಎರಡನೇ ಲಸಿಕೆ ಸದುಪಯೋಗ ಪಡೆದುಕೊಂಡರು.
ಮುದರಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸುಬ್ರಹ್ಮಣ್ಯ ಪ್ರಭು ನೇತೃತ್ವದಲ್ಲಿ ನಡೆದ ಲಸಿಕೆ ವಿತರಣಾ ಶಿಬಿರದಲ್ಲಿ ಎಲ್ಲೂರು ಗ್ರಾಮ ಪಂಚಾಯತ್ ಸದಸ್ಯರಾದ ಯಶವಂತ ಶೆಟ್ಟಿ ,ದೀಪ ಶೆಟ್ಟಿ ,ಮಾಜಿ ಸದಸ್ಯ ರಹೀಮ್ ಕುಂಜೂರು, ಕುಂಜೂರು ಸ್ಪೋರ್ಟ್ಸ್ ಕ್ಲಬ್ ಇದರ ಅಧ್ಯಕ್ಷರಾದ ರಾಘವೇಂದ್ರ ಆಚಾರ್ಯ ಹಾಗೂ ಸ್ಪೋರ್ಟ್ಸ್ ಕ್ಲಬ್ ಸದಸ್ಯರು,ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು.
Advertisement. Scroll to continue reading.