Connect with us

Hi, what are you looking for?

Diksoochi News

ಅಂತಾರಾಷ್ಟ್ರೀಯ

ಜನಪ್ರಿಯ ವಿಶ್ವ ನಾಯಕರ ಪಟ್ಟಿಯಲ್ಲಿ ಪ್ರಧಾನಿ ಮೋದಿಗೆ ಅಗ್ರಸ್ಥಾನ; ಶೇ.70 ರಷ್ಟು ಜನ ಮನ್ನಣೆ

0

ಪ್ರಧಾನಿ ನರೇಂದ್ರ ಮೋದಿ ಈ ಬಾರಿಯೂ ವಿಶ್ವದ ಅಗ್ರ ನಾಯಕನ ಸ್ಥಾನ ಉಳಿಸಿಕೊಂಡಿದ್ದಾರೆ. ‘ಗ್ಲೋಬಲ್ ಲೀಡರ್ ಅಪ್ರೂವಲ್ ರೇಟಿಂಗ್ ಟ್ರ್ಯಾಕರ್ ನ ಇತ್ತೀಚಿನ ದತ್ತಾಂಶವು ಪ್ರಧಾನಿ ನರೇಂದ್ರ ಮೋದಿ ಅವರು ಶೇ.70 ರಷ್ಟು ಅನುಮೋದನೆ ರೇಟಿಂಗ್ ಹೊಂದಿದ್ದು, ಇದು ವಿಶ್ವದಾದ್ಯಂತ 13 ದೇಶಗಳ ಜಾಗತಿಕ ನಾಯಕರಲ್ಲಿ ಅತ್ಯಧಿಕವಾಗಿದೆ.

ನವೆಂಬರ್ 4 ರಂದು ನವೀಕರಿಸಲಾದ ದತ್ತಾಂಶದ ಪ್ರಕಾರ, ಪ್ರಧಾನಿ ಮೋದಿ ಅವರು ಪ್ರಸ್ತುತ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇದರಲ್ಲಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್, ಯುಕೆ ಪ್ರಧಾನಿ ಬೋರಿಸ್ ಜಾನ್ಸನ್, ಕೆನಡಾದ ಜಸ್ಟಿನ್ ಟ್ರೂಡೊ, ಜರ್ಮನಿಯ ಏಂಜೆಲಾ ಮರ್ಕೆಲ್, ಇಟಲಿಯ ಪ್ರಧಾನಿ ಮಾರಿಯೋ ಡ್ರಾಘಿ ಸೇರಿದಂತೆ ಹಲವಾರು ಪ್ರಭಾವಿ ವಿಶ್ವ ನಾಯಕರೂ ಇದ್ದಾರೆ.

ಯಾರಿಗೆ ಎಷ್ಟು?

Advertisement. Scroll to continue reading.

ಮೆಕ್ಸಿಕನ್ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಅವ್ರು ಶೇಕಡಾ 66ರಷ್ಟು ರೇಟಿಂಗ್ ಪಡೆದಿದ್ರೆ, ಇಟಲಿಯ ಪ್ರಧಾನಿ ಮಾರಿಯೋ ಡ್ರಾಘಿ ಪ್ರಸ್ತುತ ಶೇ.63 ರಷ್ಟು ರೇಟಿಂಗ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಜರ್ಮನಿಯ ಏಂಜೆಲಾ ಮರ್ಕೆಲ್ ಶೇಕಡಾ 54ರಷ್ಟು ರೇಟಿಂಗ್ ಪಡೆದಿದ್ದು, ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಶೇಕಡಾ 47ರೊಂದಿಗೆ ಐದನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಇನ್ನು ಯುಎಸ್ ಅಧ್ಯಕ್ಷ ಜೋ ಬಿಡೆನ್ ಪ್ರಸ್ತುತ ಶೇಕಡಾ 44ರಷ್ಟು ರೇಟಿಂಗ್ ನೊಂದಿಗೆ ಆರನೇ ಸ್ಥಾನ ಹೊಂದಿದ್ದಾರೆ.

ಮಾರ್ನಿಂಗ್ ಕನ್ಸಲ್ಟ್ ಪೊಲಿಟಿಕಲ್ ಇಂಟೆಲಿಜೆನ್ಸ್ ಸಮೀಕ್ಷೆ:

ಫ್ರಾನ್ಸ್, ಜರ್ಮನಿ, ಭಾರತ, ಇಟಲಿ, ಜಪಾನ್, ಮೆಕ್ಸಿಕೊ, ದಕ್ಷಿಣ ಕೊರಿಯಾ, ಸ್ಪೇನ್, ಯುನೈಟೆಡ್ ಕಿಂಗ್ ಡಮ್, ಕೆನಡಾ, ಬ್ರೆಜಿಲ್, ಆಸ್ಟ್ರೇಲಿಯಾ ಮತ್ತು ಯುಎಸ್ ಸೇರಿದಂತೆ 13 ದೇಶಗಳಲ್ಲಿನ ಉನ್ನತ ನಾಯಕರಿಗೆ ಅನುಮೋದನೆ ರೇಟಿಂಗ್ ಗಳನ್ನು ಕಂಡುಹಿಡಿಯಲು ಮಾರ್ನಿಂಗ್ ಕನ್ಸಲ್ಟ್ ಪೊಲಿಟಿಕಲ್ ಇಂಟೆಲಿಜೆನ್ಸ್ ಸಮೀಕ್ಷೆಯನ್ನ ನಡೆಸಲಾಗಿದೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!