ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಸದಸ್ಯರ ವೈಯಕ್ತಿಕ ಖಾತೆಗೆ ಪ್ರಗತಿನಿಧಿ ಜಮೆ ಮಾಡುವ (DLT) ಅನುಷ್ಠಾನ ಕಾರ್ಯಕ್ರಮವನ್ನು ಉಪ್ಪೂರು ವಲಯದ ಹೇರೂರು ನಗದು ಸಂಗ್ರಹಣ ಕೇಂದ್ರದಲ್ಲಿ ನಡೆಯಿತು. ಉಡುಪಿ ಜಿಲ್ಲಾ ಹಿರಿಯ ನಿರ್ದೇಶಕ ಗಣೇಶ್.ಬಿ ದೀಪ ಪ್ರಜ್ವಲನೆ ಮಾಡುವುದರ ಮೂಲಕ, ಸದಸ್ಯರ ಬ್ಯಾಂಕ್ ಖಾತೆಗೆ ಟೋಕನ್ ಮೊತ್ತ ಜಮೆಯಾದ ಬಗ್ಗೆ ನಗದು ಸಂಗ್ರಾಹಕರ ಟ್ಯಾಬ್ ನಲ್ಲಿ ಫೋಟೋ ದೃಢೀಕರಿಸುವ ಮೂಲಕ ಕಾರ್ಯಕ್ರಮ ಚಾಲನೆ ನೀಡಿದರು. ಅಲ್ಲದೇ ಡಿ ಎಲ್ ಟಿ ಕುರಿತಾದ ಕರಾರು ಪತ್ರ ಬಿಡುಗಡೆ ಮಾಡಿದರು. ಜಿಲ್ಲಾ ಎಂಐಎಸ್ ಯೋಜನಾಧಿಕಾರಿ ಪ್ರದೀಪ್ ಶೆಟ್ಟಿ, ಬ್ರಹ್ಮಾವರ ತಾಲೂಕಿನ ಯೋಜನಾಧಿಕಾರಿ ದಿನೇಶ್ ಶೇರಿಗಾರ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಚೇರಿಯ ಫಂಡ್ ಮ್ಯಾನೇಜರ್ ಭಾರತಿ, ಉಪ್ಪೂರು ವಲಯದ ಮೇಲ್ವಿಚಾರಕಿ ಬಾಬಿ.ಎಂ, ನಗದು ಸಂಗ್ರಾಹಕರಾದ ಕುಮಾರಿ ವಿನಯ, ಉಪ್ಪೂರು ವಲಯ ಅಧ್ಯಕ್ಷೆ ಮಮತಾ, ಸೇವಾ ಪ್ರತಿನಿಧಿ ರೇಣುಕಾ, ಪ್ರಮೋದಾ, ಸುವಿಧಾ ಸಹಾಯಕಿ ಕುಮಾರಿ ಸೌಜನ್ಯ ಹಾಗೂ ಒಕ್ಕೂಟದ ಪದಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.